»   » ಮತ್ತೆ ಹಾಲಿವುಡ್ ಗೆ ಹಾರಲಿದ್ದಾರೆ ದೀಪಿಕಾ! ಚಿತ್ರದ ಹೆಸರು ಫಿಕ್ಸ್

ಮತ್ತೆ ಹಾಲಿವುಡ್ ಗೆ ಹಾರಲಿದ್ದಾರೆ ದೀಪಿಕಾ! ಚಿತ್ರದ ಹೆಸರು ಫಿಕ್ಸ್

Posted By:
Subscribe to Filmibeat Kannada

ಕನ್ನಡತಿ ದೀಪಿಕಾ ಪಡುಕೋಣೆ ರವರ ಹಾಲಿವುಡ್ ಚೊಚ್ಚಲ ಸಿನಿಮಾ ''XXX: ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರ ಅದ್ಧೂರಿ ಯಶಸ್ಸು ಕಂಡಿತ್ತು. ವಿನ್ ಡೇಸೆಲ್ ಜೊತೆ ಈ ಚಿತ್ರದಲ್ಲಿ ಡಿಪ್ಪಿಯ ಆಕ್ಷನ್ ಮತ್ತು ಅಭಿನಯ ನೋಡಿದ ನಂತರ ಹಾಲಿವುಡ್ ಸಿನಿ ಪ್ರಿಯರು ಸಹ ಆಕೆಯ ಮುಂದಿನ ಸಿನಿಮಾ ಯಾವುದಿರಬಹುದು ಎಂದು ತಿಳಿದುಕೊಳ್ಳಲು ಕಾತುರರಾಗಿದ್ದರು. ದೀಪಿಕಾ ಅಭಿಮಾನಿಗಳ ಈ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.

'XXX: ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರದ ನಿರ್ದೇಶಕ ಡಿ.ಜೆ.ಕಾರಸೊ ಸ್ವತಃ ದೀಪಿಕಾ ಪಡುಕೋಣೆ ಮತ್ತೆ ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ಬಗ್ಗೆ ಸುಳಿವು ನೀಡಿದ್ದಾರೆ. ಮುಂದೆ ಓದಿರಿ..

ಅಭಿಮಾನಿಗೆ ಗುಟ್ಟು ಶೇರ್ ಮಾಡಿದ ಡಿ.ಜೆ.ಕಾರಸೊ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ ಮೊದಲ ಹಾಲಿವುಡ್ ಚಿತ್ರ 'XXX: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡು, ಡಿಪ್ಪಿಗೂ ಬೆಸ್ಟ್ ಓಪನಿಂಗ್ ಚಿತ್ರವಾಗಿ ಹೊರಹೊಮ್ಮಿತು. ಈಗ ಈ ಚಿತ್ರದ ನಿರ್ದೇಶಕ ಡಿ.ಜೆ.ಕಾರಸೊ ರವರು ದೀಪಿಕಾಳ ಎರಡನೇ ಹಾಲಿವುಡ್ ಸಿನಿಮಾ ಬಗ್ಗೆ ತಮ್ಮ ಅಭಿಮಾನಿಗೆ ಸುಳಿವು ನೀಡಿದ್ದಾರೆ.

ಎಲ್ಲಾ ಶುರುವಾಗಿದ್ದು ರೂಬಿ ರೋಸ್‌ಳಿಂದ

'XXX: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರದಲ್ಲಿ ನಟಿಸಿರುವ ರೂಬಿ ರೋಸ್, "ಚಿತ್ರೀಕರಣದ ವೇಳೆ ಕಳೆದ ಸಂತೋಷದ ಕ್ಷಣಗಳನ್ನು, ಅಡೆಲೆ ಪಾತ್ರಕ್ಕೆ ಪಡೆದ ತರಬೇತಿಯನ್ನು ಮರೆಯಲು ಆಗುವುದಿಲ್ಲ. ಆದರೆ ಇದೇ ಚಿತ್ರದ ಬಗ್ಗೆ ಹೊಸ ಸುದ್ದಿ ಕೇಳಿಬರಲಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಮಾಡಿದ್ದರು. ಇದನ್ನು ನೋಡಿದ ಅಭಿಮಾನಿ ಒಬ್ಬರು ಸ್ಕ್ರೀನ್ ಶಾಟ್ ಸಹಿತ ಡಿ.ಜೆ.ಕಾರಸೊ ಗೆ ನಿಜವಾಗಿ ಚಿತ್ರದ ಸೀಕ್ವೆಲ್ ಬರುತ್ತಿದೆಯೇ ಎಂದು ಪ್ರಶ್ನೆ ಮಾಡಿದ್ದರು.

ಡಿ.ಜೆ.ಕಾರಸೊ ಉತ್ತರವಿದು..

ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ಡಿ.ಜೆ.ಕಾರಸೊ ನಟಿ ರೂಬಿ ರೋಸ್ ಮತ್ತು ಚಿತ್ರದ ಟ್ವಿಟ್ಟರ್ ಹ್ಯಾಂಡಲ್ ಬಳಸಿ ಹೌದು ಸಿನಿಮಾ ಬಗ್ಗೆ ಮುಂದಿನ ವಾರ ಮೀಟಿಂಗ್ ನಡೆಯಲಿದೆ. ಚಿತ್ರಕಥೆ ಮೇಲೆ ವರ್ಕ್ ನಡೆಯುತ್ತಿದೆ. ಚಿತ್ರ ಆರಂಭಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ದೀಪಿಕಾ ಇರುತ್ತಾರಾ

ಅಭಿಮಾನಿಗಳು ನಿರ್ದೇಶಕರ ಉತ್ತರ ನೋಡಿ ಚಿತ್ರದ ಟೈಟಲ್ ಏನು, ಸೀಕ್ವೆಲ್ ನಲ್ಲಿ ಕಲಾವಿದರ ಬದಲಾವಣೆ ಆಗಲಿದೆಯೇ ಅಥವಾ ಎಲ್ಲರೂ ಅಭಿನಯಿಸಲಿದ್ದಾರಾ ಎಂದು ಕೇಳಿದಕ್ಕೆ, ಡಿ.ಜೆ.ಕಾರಸೊ ಚಿತ್ರದ ತಾರಾಬಳಗದ ಪ್ರಮುಖರ ಟ್ವಿಟ್ಟರ್ ಹ್ಯಾಂಡಲ್ ಹಾಕಿ ಎಲ್ಲರೂ ಮತ್ತೆ ಹಿಂದಿರುಗಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೂ ದೀಪಿಕಾ ಪಡುಕೋಣೆ ಮತ್ತೆ ಹಾಲಿವುಡ್ ಗೆ ಹಾರಲಿದ್ದಾರೆ.

ಚಿತ್ರದ ಟೈಟಲ್ ಏನು?

'XXX: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ 'ಸೆರೆನಾ ಅಂಗರ್' ಪಾತ್ರ ನಿರ್ವಹಿಸಿದ್ದರು. ಡಿ.ಜೆ.ಕಾರಸೊ ಈಗ ಮತ್ತೆ ದೀಪಿಕಾಗೆ ಆಕ್ಷನ್ ಕಟ್ ಹೇಳಲಿರುವ ಚಿತ್ರದ ಟೈಟಲ್ 'XXX4' ಎಂದು ತಿಳಿಯಲಾಗಿದೆ. ಆದರೆ ಚಿತ್ರ ಆರಂಭ ಯಾವಾಗ ಎಂದು ತಿಳಿದಿಲ್ಲ. ಕಾರಣ...

ಬಾಲಿವುಡ್ ನಲ್ಲಿ ಡಿಪ್ಪಿ ಬ್ಯುಸಿ

ಅಂದಹಾಗೆ ದೀಪಿಕಾ ಪ್ರಸ್ತುತ ಬಾಲಿವುಡ್ ನ ಎರಡು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯದಲ್ಲಿ ಸಂಜಯ್ ಲೀಲಾ ಬನ್ಸಾಲಿಯ 'ಪದ್ಮಾವತಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇದಾದ ನಂತರ ವಿಶಾಲ್ ಭಾರದ್ವಜ್ ನಿರ್ದೇಶನದ ಚಿತ್ರದಲ್ಲಿ ನಟ ಇರ್ಫಾನ್ ಖಾನ್ ಜೊತೆ ಅಭಿನಯಿಸಲಿದ್ದಾರೆ.

English summary
Bollywood Actress Deepika Padukone’s next Hollywood project is xXx4, confirms 'xXx: Return of Xander Cage' director DJ Caruso

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada