»   » ವಿನ್ ಡೀಸೆಲ್ ಜೊತೆ ಹಸಿಬಿಸಿ ಲುಕ್ ನಲ್ಲಿ ದೀಪಿಕಾ ಪಡುಕೋಣೆ

ವಿನ್ ಡೀಸೆಲ್ ಜೊತೆ ಹಸಿಬಿಸಿ ಲುಕ್ ನಲ್ಲಿ ದೀಪಿಕಾ ಪಡುಕೋಣೆ

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಲಕ್ಕಿ ಗರ್ಲ್ ದೀಪಿಕಾ ಪಡುಕೋಣೆ ಅವರು ಹಾಲಿವುಡ್ ಕ್ಷೇತ್ರಕ್ಕೆ ಹಾರಿರುವ ಸಂಗತಿ ನಿಮಗೆ ಗೊತ್ತೇ ಇದೆ ಅಲ್ವಾ?. ಇದೀಗ ದೀಪಿಕಾ ಪಡುಕೋಣೆ ಅವರು ತಮ್ಮ ಕೋ ಸ್ಟಾರ್ ವಿನ್ ಡೀಸೆಲ್ ಅವರ ಜೊತೆ ಹಸಿಬಿಸಿಯಾಗಿ ಕಾಣಿಸಿಕೊಂಡಿರುವ ಚಿತ್ರಗಳು ವೈರಲ್ ಆಗಿದೆ.[ಹಾಲಿವುಡ್ ನಲ್ಲಿ ಮಿಂಚಿದ ಟಾಪ್ 10 ಬಿಟೌನ್ ನಟಿಯರು]

Deepika Padukone Sizzles With Her XXX Co-star Vin Diesel

ದೀಪಿಕಾ ಪಡುಕೋಣೆ ಅವರು 'XXX ದಿ ರಿಟರ್ನ್ ಆಫ್ ಝೆಂಡರ್ ಕೇಗ್' ಎಂಬ ಹಾಲಿವುಡ್ ಚಿತ್ರದಲ್ಲಿ ಮಿಂಚುತ್ತಿದ್ದು, ಈಗಾಗಲೇ ಶೂಟಿಂಗ್ ಕೂಡ ನಡೆಯುತ್ತಿದೆ. ಚಿತ್ರದಲ್ಲಿ ನಾಯಕ ವಿನ್ ಡಿಸೇಲ್ ಅವರ ಜೊತೆ ರೊಮ್ಯಾನ್ಸ್ ಮಾಡುತ್ತಿರುವ ಫೊಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.[ಕಿಂಗ್ ಫಿಶರ್ ಕ್ಯಾಲೆಂಡರ್ ಗರ್ಲ್ಸ್ ಈಗ ಬಿಟೌನ್ ಸ್ಟಾರ್ ನಟಿಯರು]

Deepika Padukone Sizzles With Her XXX Co-star Vin Diesel

ಅಂದಹಾಗೆ ಈ ಪೋಟೋ ವನ್ನು ಖುದ್ದು ಡಿಂಪಲ್ ಬೆಡಗಿ ಡಿಪ್ಪಿ ಅವರೇ ತಮ್ಮ ಇನ್ ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿರ್ದೇಶಕ ಡಿ.ಜೆ ಕಾರಸೋ ಆಕ್ಷನ್-ಕಟ್ ಹೇಳಿರುವ 'XXX ದಿ ರಿಟರ್ನ್ ಆಫ್ ಝೆಂಡರ್ ಕೇಗ್' ಚಿತ್ರ 2017 ಜನವರಿ 20ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.[ದೀಪಿಕಾ ಪಡುಕೋಣೆ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳು]

Deepika Padukone Sizzles With Her XXX Co-star Vin Diesel

ಇನ್ನು ಈ ಹಿಂದೆ ನಟಿ ಪ್ರಿಯಾಂಕ ಚೋಪ್ರಾ ಅವರು 'ಕ್ವಾಂಟಿಕೋ' ಎಂಬ ಹಾಲಿವುಡ್ ಸೀರಿಯಲ್ ನಲ್ಲಿ ಸಖತ್ ಹಾಟ್ ಆಗಿ ಮಿಂಚಿದ್ದ ವಿಡಿಯೋ ಹಾಗೂ ಚಿತ್ರಗಳು ಭಾರಿ ಸುದ್ದಿ ಮಾಡಿದ್ದವು. ಇದೀಗ ಬಾಲಿವುಡ್ ನ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರ ಸರದಿ.

English summary
The gorgeous Actress Deepika Padukone, was shooting for a hot scene along with her co-star Vin Diesel for the xXx sequel. A few leaked images from the sets of xXx: The Return of Xander Cage, are doing the rounds on social media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada