»   » ದೀಪಿಕಾ ಡೇರಿಂಗ್-ಡ್ಯಾಶಿಂಗ್ ಲುಕ್‌ ನಲ್ಲಿ xxx ಹೊಸ ಪೋಸ್ಟರ್ ರಿಲೀಸ್‌

ದೀಪಿಕಾ ಡೇರಿಂಗ್-ಡ್ಯಾಶಿಂಗ್ ಲುಕ್‌ ನಲ್ಲಿ xxx ಹೊಸ ಪೋಸ್ಟರ್ ರಿಲೀಸ್‌

Posted By:
Subscribe to Filmibeat Kannada

ಬಾಲಿವುಡ್‌ನ ಗ್ಲಾಮರ್ ಮತ್ತು ದುಬಾರಿ ನಟಿ ದೀಪಿಕಾ ಪಡುಕೋಣೆ ಹಾಲಿವುಡ್‌ನಲ್ಲೂ ಬ್ಯುಟಿಫುಲ್ ಗ್ಲಾಮರ್ ಡಾಲ್. ಕಿಸ್‌ ಮಾಡೋಕು ಸೈ, ಫೈಟ್ ಮಾಡೋಕು ಸೈ, ಗಾಳಿಯಲ್ಲಿ ಬೈಕ್‌ ಹಾರಿಸಿ ಸ್ಟಂಟ್ ಮಾಡೋಕು ಸೈ ಎನಿಸಿಕೊಂಡೇ ಡಿಂಪಲ್ ಕ್ವೀನ್ ಈಗ ಹಾಲಿವುಡ್‌ ಅಂಗಳದಲ್ಲೂ ತಮ್ಮ ತನ ಮೆರೆದಿದ್ದಾರೆ. ಅದು ನಿಮಗೆಲ್ಲಾ ಗೊತ್ತಿರೋ ಹಾಗೆ 'xxx: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್‌' ಹಾಲಿವುಡ್ ಸಿನಿಮಾ ಮೂಲಕ.

2016 ನೇ ವರ್ಷ ತುಂಬಾ ಹತ್ತಿರವಾಗುತ್ತಿದೆ. ಆದರೆ ಬಹುಸಂಖ್ಯಾತ ಬಾಲಿವುಡ್‌ ಮಂದಿ ಮಾತ್ರ ಹೊಸ ವರ್ಷವನ್ನು ಸ್ವೀಕರಿಸಲು ತುಂಬಾ ತುಂಬಾ ಆತುರ ರಾಗಿದ್ದಾರೆ. ಇದಕ್ಕೆ ಕಾರಣ ಮಾತ್ರ ದೀಪಿಕಾ ಪಡುಕೊಣೆ.

Deepika Padukone stands out in the new poster of 'xXx: Return of Xander Cage'

ಯಾಕಂದ್ರೆ ಡಿಂಪಿ ಸಖತ್‌ ಸ್ಟೈಲಿಶ್ ಮತ್ತು ಮೈನವಿರೇಳೀಸುವ ಸಾಹಸ ದೃಶ್ಯಗಳಿಂದ ಕಾಣಿಸಿಕೊಂಡಿರುವ 'xxx: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್‌' ಹಾಲಿವುಡ್ ಸಿನಿಮಾ ಜನವರಿ 20, 2017 ರಂದು ಬಿಡುಗಡೆ ಆಗುತ್ತಿರುವುದು. 'ಫಾಸ್ಟ್‌ ಅಂಡ್ ಫ್ಯೂರಿಯಸ್' ಫೇಮಸ್ ಸ್ಟಾರ್ ವಿನ್‌ ಡಿಸೇಲ್‌ ನಟಿಸಿರುವ ಈ ಸಿನಿಮಾದ ಹೊಸ ಪೋಸ್ಟರ್‌ ಒಂದನ್ನು ಸಿನಿಮಾ ನಿರ್ಮಾಣಕಾರರು ಇದೀಗ ರಿಲೀಸ್ ಮಾಡಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್‌ನಲ್ಲಿ ಸಾಹಸ ಮತ್ತು ಸ್ಟಂಟ್‌ ಅಂದ್ರೆ ಮಹಿಳೆ ಎಂಬ ಫೀಲ್ ನೀಡಲಾಗಿದೆ.

'xxx: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್‌' ಸಿನಿಮಾದ ಹೊಸ ಪೋಸ್ಟರ್‌ ನಲ್ಲಿ ವಿನ್‌ ಡೀಸೆಲ್, ಸ್ಯಾಮ್ಯುಯೆಲ್ ಜಾಕ್ಸನ್, ರೂಬಿ ರೋಸ್, ಡೋನ್ನಿ ಯೆನ್, ರೋರಿ ಮೆಕ್ಯಾನ್, ಟೋನಿ ಕೊಲ್ಲೇಟ್, ಟೋನಿ ಜಾ, ನೀನಾ ಡೊಬ್ರೆವ್, ದೀಪಿಕಾ ಪಡುಕೋಣೆ, ಡ್ಯಾನಿ ವೂ, ಹಾಗು 2015 ರ ವಿಶ್ವ ಸುಂದರಿ ಸ್ಪರ್ಧಿ ಅರಿಯಾಡ್ನ ಗಟೈರೆಜ್ ಕಾಣಿಸಿಕೊಂಡಿದ್ದಾರೆ.

new poster of deepika hollywood movie

ಡಿ.ಜೆ. ಕಾರಸೊ ಆಕ್ಷನ್‌-ಕಟ್ ಹೇಳಿರುವ 'xxx: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್‌' ಸಿನಿಮಾಗೆ, ಜೊ ರಾತ್, ಜೆಫ್ ಕ್ರಿಸ್ಚೆನ್ಬಾಂ, ವಿನ್‌ ಡಿಸೇಲ್ ಮತ್ತು ಸಮಂತಾ ವಿನ್ಸೆಂಟ್ ಹಣ ಹೂಡಿದ್ದಾರೆ. ಸಿನಿಮಾ ಜನವರಿ 20, 2017 ರಂದು ತೆರೆಕಾಣಲಿದೆ.

English summary
Deepika Padukone will be making her big Hollywood debut on January 20, 2017, opposite the 'Fast and Furious' star Vin Diesel in 'xXx: Return of Xander Cage'. Now The Movie Maker Released New Poster of DP stands out in the 'xXx: Return of Xander Cage'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada