ಹಾಲಿವುಡ್ ಗೆ 'ಫಾಸ್ಟ್' ಆಗಿ ಹಾರಿದ ದೀಪಿಕಾ

By ಜೇಮ್ಸ್ ಮಾರ್ಟಿನ್

ಬಾಲಿವುಡ್ ಬೆಡಗಿಯರು, ಪ್ರತಿಭಾವಂತ ನಟರು ಹಾಲಿವುಡ್ ಗೆ ಹಾರುವುದು ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ. ಆದರೆ, ಕೆಲವರು ದೊಡ್ಡ ಪ್ರಾಜೆಕ್ಟ್ ಗಿಟ್ಟಿಸಿಕೊಂಡು ಬೇರೆಯವರು ಅಸೂಯೆ ಪಡುವಂತೆ ಮಾಡುತ್ತಾರೆ. ಇಂಥ ಕೆಟಗೆರಿಗೆ ಈಗ ಬೆಂಗಳೂರು/ಮಂಗಳೂರಿನ ಕೊಂಕಣಿ ಬೆಡಗಿ ದೀಪಿಕಾ ಪಡುಕೋಣೆ ಈಗ 'ಫಾಸ್ಟ್ ಅಂಡ್ ಫೂರಿಯಸ್' ಸರಣಿಯ ಮುಂದಿನ ಚಿತ್ರಕ್ಕೆ ಸಹಿಹಾಕಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಫಾಸ್ಟ್ ಅಂಡ್ ಫ್ಯೂರಿಯಸ್ ಸರಣಿಯ 7ನೇ ಚಿತ್ರಕ್ಕಾಗಿ ಕಂಗನಾ ರಾನೌತ್, ಚಿತ್ರಾಂಗದಾ ಸಿಂಗ್ ಕೂಡಾ ಸ್ಕ್ರೀನ್ ಟೆಸ್ಟ್ ನೀಡಿದ್ದರಂತೆ. ಈ ಪೈಕಿ ದೀಪಿಕಾ ಅವರು ಆಯ್ಕೆಯಾಗಿದ್ದಾರೆ. ದೀಪಿಕಾ ಅವರಿಗೆ ಯಾವ ಪಾತ್ರ ಸಿಗಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಆದರೆ, ಥ್ರಿಲ್ಲರ್, ರೇಸಿಂಗ್ ಚಿತ್ರದಲ್ಲಿ ಹಾಲಿವುಡ್ ನ ಹೆಸರಾಂತ ನಟ ಜಾಸನ್ ಸ್ಟಾಥಮ್, ಡ್ವಾನೆ ಜಾನ್ಸನ್ ಜತೆ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ದೀಪಿಕಾ ಅವರು ಹಾಲಿವುಡ್ ಚಿತ್ರದಲ್ಲಿ ಮುಂದಿನ ವರ್ಷ ಕಂಡು ಬರಲಿದ್ದಾರೆ.

ದೀಪಿಕಾ ಅವರ ಹಾಲಿವುಡ್ ಚಿತ್ರದ ಒಪ್ಪಂದದ ಪ್ರಕ್ರಿಯೆ ಮುಗಿಯಲು ಕನಿಷ್ಠ 6 ತಿಂಗಳಾದರೂ ಬೇಕಂತೆ. ಸದ್ಯಕ್ಕೆ ದೀಪಿಕಾ ಅವರು ಚೆನ್ನೈ ಎಕ್ಸ್ ಪ್ರೆಸ್ ಯಶಸ್ಸಿನ ನಂತರ ಮತ್ತೊಮ್ಮೆ ಶಾರುಖ್ ಖಾನ್ ಜತೆ ದುಬೈನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಆದರೆ, ಹಾಲಿವುಡ್ ಚಿತ್ರದ ಬಗ್ಗೆ ಆಕೆಯಾಗಲಿ, ಆಕೆಯ ಪಿಆರ್ಒಗಳಾಗಲಿ ಯಾವುದೇ ಸುದ್ದಿ ಹೊರ ಹಾಕಿಲ್ಲ. ಮೊದಲೇ ಹೇಳಿದಂತೆ ಬಾಲಿವುಡ್ ನಿಂದ ಹಾಲಿವುಡ್ ಗೆ ಹಾಕಿದ ಅನೇಕ ಘಟಾನು ಘಟಿಗಳ ಸಾಲಿಗೆ ದೀಪಿಕಾ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಹಾಲಿವುಡ್ ನಲ್ಲಿ ಕಾಣಿಸಿಕೊಂಡ ಬಾಲಿವುಡ್ ತಾರೆಯರ ಚಿತ್ರಗಳು ಇಲ್ಲಿವೆ...

ದೀಪಿಕಾ ಪಡುಕೋಣೆ 7ನೇ ಚಿತ್ರ.

ದೀಪಿಕಾ ಪಡುಕೋಣೆ 7ನೇ ಚಿತ್ರ.

ಫಾಸ್ಟ್ ಅಂಡ್ ಫ್ಯೂರಿಯಸ್ ಸರಣಿಯ 7ನೇ ಚಿತ್ರ.

ತಬೂ

ತಬೂ

ಆಸ್ಕರ್ ವಿಜೇತ ಚಿತ್ರ ಲೈಫ್ ಆಫ್ ಪೈ, ದಿ ನೇಮ್ ಸೇಕ್

ಇರ್ಫಾನ್ ಖಾನ್

ಇರ್ಫಾನ್ ಖಾನ್

ದಿ ನೇಮ್ ಸೇಕ್, ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್, ದಿ ಲೈಫ್ ಆಫ್ ಪೈ

ಅನಿಲ್ ಕಪೂರ್

ಅನಿಲ್ ಕಪೂರ್

ಆಸ್ಕರ್ ವಿಜೇತ ಸ್ಲಂ ಡಾಗ್ ಮಿಲೇನಿಯರ್, ಮಿಷನ್ ಇಂಪಾಸಿಬಲ್: ಗೋಸ್ಟ್ ಪ್ರೋಟೊಕಾಲ್

ಅನುಪಮ್ ಖೇರ್

ಅನುಪಮ್ ಖೇರ್

ಹ್ಯೂ ಜಾಕ್ ಮನ್ ನಟನೆಯ ಸಿಲ್ವರ್ ಲೈನಿಂಗ್ ಪ್ಲೇ ಬುಕ್, ಗ್ಯಾಂಗ್ ಆಫ್ ಗೋಸ್ಟ್

ಐಶ್ವರ್ಯಾ ರೈ ಬಚ್ಚನ್

ಐಶ್ವರ್ಯಾ ರೈ ಬಚ್ಚನ್

ಬ್ರೈಡ್ ಅಂಡ್ ಪ್ರಿಜ್ಯೂಡಿಸ್, ದಿ ಪಿಂಕ್ ಪ್ಯಾಂಥರ್ 2 ದಿ ಮಿಸ್ಟ್ರೇಸ್ ಆಫ್ ಸ್ಪೈಸಸ್, ಪ್ರೊವೋಕ್ಡ್

ಓಂ ಪುರಿ

ಓಂ ಪುರಿ

ಸಿಟಿ ಆಫ್ ಜಾಯ್, ದಿ ಗೋಸ್ಟ್ ಅಂಡ್ ದಿ ಡಾರ್ಕ್ ನೆಸ್, ಈಸ್ಟ್ ಇಸ್ ಈಸ್ಟ್

ನಾಸಿರುದ್ದೀನ್ ಶಾ

ನಾಸಿರುದ್ದೀನ್ ಶಾ

ದಿ ಲೀಗ್ ಆಫ್ ಎಕ್ಸಾರ್ಡಿನರಿ ಜೆಂಟಲ್ಮೆನ್, ದಿ ಗ್ರೇಟ್ ನ್ಯೂ ವಂಡರ್ ಫುಲ್

ಶಬನಾ ಆಜ್ಮಿ

ಶಬನಾ ಆಜ್ಮಿ

ಮಿಡ್ ನೆಟ್ಸ್ ಚಿಲ್ಡ್ರನ್, ಸಿಟಿ ಆಫ್ ಜಾಯ್

More from Filmibeat

English summary
Deepika Padukone signs 'Fast & Furious 7. Deepika, has bagged the part. She will play a significant character in the pacy thriller that also stars Hollywood tough guys Jason Statham and Dwayne Johnson and could hit the marquee next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X