For Quick Alerts
  ALLOW NOTIFICATIONS  
  For Daily Alerts

  ಸಹನಟ ನನ್ನ ಮೇಲೆ ಅತ್ಯಾಚಾರ ಮಾಡಿದ್ದ: ಕಹಿನೆನಪು ಬಿಚ್ಚಿಟ್ಟ ಗಾಯಕಿ

  By ಫಿಲ್ಮೀಬೀಟ್‌ ಡೆಸ್ಕ್‌
  |

  ಅಮೆರಿಕದ ಖ್ಯಾತ ಗಾಯಕಿ, ಗೀತ ಸಾಹಿತ್ಯ ರಚನೆಗಾರ್ತಿ ಡೆಮಿ ಲೊವಾಟೋ ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.

  ಡೆಮಿ ಲೊವಾಟೋ; ಡ್ಯಾನ್ಸಿಂಗ್ ವಿತ್‌ ದಿ ಡೆವಿಲ್ ಹೆಸರಿನ ತನ್ನದೇ ಶೋ ಅನ್ನು ಯೂಟ್ಯೂಬ್‌ ನಲ್ಲಿ ನಡೆಸುವ ಡೆಮಿ ಲೊವಾಟೋ. ತಮ್ಮ ಮೇಲೆ ಎರಡು ಬಾರಿ ಅತ್ಯಾಚಾರ ಆಗಿತ್ತು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

  'ನಾನಿನ್ನೂ ಹದಿಹರೆಯದಲ್ಲಿದ್ದಾಗಲೇ ಸಹನಟನೊಬ್ಬ ನನ್ನ ಮೇಲೆ ಅತ್ಯಾಚಾರ ಮಾಡಿದ್ದ' ಎಂದು ಸಹ ಡೆಮಿ ಲೊವಾಟೋ ಹೇಳಿದ್ದಾರೆ.

  'ನಾನು ಡಾಕ್ಯುಮೆಂಟರಿಯೊಂದರಲ್ಲಿ ನಟಿಸುತ್ತಿದ್ದೆ. ನನ್ನೊಂದಿಗೆ ನಟಿಸುತ್ತಿದ್ದ ನಟನೊಬ್ಬ ನನ್ನ ಮೇಲೆ ಅತ್ಯಾಚಾರ ಮಾಡಿದ. ಇತ್ತೀಚೆಗೆ ನಾನು ಆತನೊಂದಿಗೆ ಮಾತನಾಡಿದೆ. ಆದರೆ ಆತನಿಗೆ ಅದರ ಬಗ್ಗೆ ಪಶ್ಚಾತಾಪವಿಲ್ಲ' ಎಂದಿದ್ದಾರೆ ಡೆಮಿ.

  'ಅಂದು ಆತನನ್ನು ನಾನು ತಡೆಯಲು ಯತ್ನಿಸಿದೆ ಆದರೆ ನನ್ನ ಮಾತು ಆತ ಕೇಳಲಿಲ್ಲ. ನನ್ನ ಇಚ್ಛೆಗೆ ವಿರುದ್ಧವಾಗಿ ಆತ ಅತ್ಯಾಚಾರ ಮಾಡಿದ' ಎಂದಿದ್ದಾರೆ ಡೆಮಿ.

  ಮತ್ತೊಂದು ಘಟನೆಯನ್ನು ನೆನಪಿಸಿಕೊಂಡಿರುವ ಡೆಮಿ, 'ಮೂರು ವರ್ಷಗಳ ಹಿಂದೆ ನನಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಯುವಕ, ನನಗೆ ಹೆಚ್ಚಿನ ಡೋಸ್ ಮಾದಕ ವಸ್ತು ನೀಡಿ ನಾನು ಪ್ರಜ್ಞೆತಪ್ಪುವಂತೆ ಮಾಡಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದ' ಎಂದಿದ್ದಾರೆ ಡೆಮಿ ಲೊವಾಟೊ.

  ಡ್ರಗ್ಸ್ ಘಟನೆಯ ಬಗ್ಗೆ ಪೂರ್ಣ ಮಾಹಿತಿ ನೀಡಿರುವ ಡೆಮಿ, 'ಅಂದು ನಾನು ರೆಡ್ ವೈನ್ ಕುಡಿದಿದ್ದೆ. ಆ ನಂತರ ಡ್ರಗ್ ಡೀಲರ್ ಒಬ್ಬನಿಗೆ ಕರೆ ಮಾಡಿದೆ. ಅಂದು ನಾನು ಮೆಥ್, ಕೊಕೇನ್, ಹೆರಾಯಿನ್, ಕೋಕ್, ಗಾಂಜಾ ಇನ್ನೂ ಕೆಲವು ಮಾದರಿಯ ಡ್ರಗ್ಸ್‌ಗಳನ್ನು ತೆಗೆದುಕೊಂಡೆ. ಅಂದು ನನ್ನ ಮೇಲೆ ಅತ್ಯಾಚಾರ ಮಾಡಲಾಯಿತು. ನಾನು ವಿವಸ್ತ್ರಳಾಗಿ ಬಿದ್ದಿದ್ದೆ. ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಐಸಿಯುನಲ್ಲಿ ಚಿಕಿತ್ಸೆ ನೀಡಿದರು' ಎಂದು ಡೆವಾ ಹೇಳಿದ್ದಾರೆ.

  ಅರ್ಹತೆ ಬಗ್ಗೆ ಮಾತನಾಡಿದ ಪತ್ರಕರ್ತನಿಗೆ ಪ್ರಿಯಾಂಕಾ ಹೇಳಿದ್ದೇನು? | Filmibeat Kannada

  ಅಂದು ನಾನು ಮಾಡಿಕೊಂಡ ತಪ್ಪಿನಿಂದ ನನಗೆ ಹೃದಯಾಘಾತ ಆಯಿತು. ಮೆದುಳಿಗೆ ಘಾಸಿಯಾಯಿತು. ನನಗೆ ದೃಷ್ಟಿದೋಷವೂ ಬಂದಿದೆ. ನನ್ನ ಕಣ್ಣುಗಳು ತುಸು ಮಂಜಾಗಿದೆ ಎಂದಿದ್ದಾರೆ ಡೆವಾ.

  English summary
  American singer Demi Lovato recalls bad incidents of her life. She said i was rapped by a fellow actor in teenage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X