15ನೇ ವಯಸ್ಸಿನಲ್ಲೇ ಅತ್ಯಾಚಾರಕ್ಕೆ ಒಳಗಾಗಿದ್ರಂತೆ ಈ ನಟಿ

ಸಿನಿಮಾ ಇಂಡಸ್ಟ್ರಿ ಅಂದ್ರೆ ಬರಿ ಕಲರ್ ಫುಲ್ ದುನಿಯಾ ಮಾತ್ರವಲ್ಲ. ಇಲ್ಲಿಯೂ ಕಷ್ಟ, ನೋವು ಎಲ್ಲವನ್ನ ಎದುರಿಸಬೇಕಾಗುತ್ತೆ. ಅದರಲ್ಲೂ ನಟಿಯರ ವಿಚಾರಕ್ಕೆ ಬಂದ್ರೆ ಕಾಂಪ್ರುಮೈಸ್, ಮಂಚಕ್ಕೆ ಕರೆಯುವುದು, ಲೈಂಗಿಕ ಕಿರುಕುಳ, ಅತ್ಯಾಚಾರ ಇದೆಲ್ಲವೂ ಆಗಿದೆ.

ಇದೀಗ, ಹಾಲಿವುಡ್ ನ ಖ್ಯಾತ ನಟಿ ಡೆಮಿ ಮೋರ್ ಮೇಲೆ 15 ವರ್ಷ ವಯಸ್ಸಿನಲ್ಲಿರುವಾಗಲೇ ಅತ್ಯಾಚಾರ ಆಗಿತ್ತು ಎಂಬ ವಿಷಯ ಬಹಿರಂಗವಾಗಿದೆ.

ಡೆಮಿ ಮೋರ್ ಅವರ ಬರೆದುಕೊಂಡಿರುವ 'ಇನ್ ಸೈಡ್ ಔಟ್' ಎಂಬ ಆತ್ಮಕಥೆಯಲ್ಲಿ ಈ ದುರ್ಘಟನೆ ಬಗ್ಗೆ ಉಲ್ಲೇಖಿಸಿದ್ದಾರೆ. 16ನೇ ವಯಸ್ಸಿನಲ್ಲಿ ಮದುವೆ ಆದ ಡೆಮಿ ಮೋರ್ ಎರಡು ಮೂರು ಸಲ ಮದುವೆ ಆಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಮುಂದೆ ಓದಿ....

15ನೇ ವಯಸ್ಸಿನಲ್ಲಿ ಅತ್ಯಾಚಾರಕ್ಕೆ ಗುರಿಯಾದೆ

15ನೇ ವಯಸ್ಸಿನಲ್ಲಿ ಅತ್ಯಾಚಾರಕ್ಕೆ ಗುರಿಯಾದೆ

''ನನಗೆ ಮತ್ತು ನನ್ನ ಸಹೋದರನಿಗೆ ಸುಖಕರವಾದ ಬಾಲ್ಯ ಸಿಗಲಿಲ್ಲ. ತಮ್ಮ ಪೋಷಕರ ಜೊತೆ ಹಲವು ಕಡೆ ಸಂಚಾರ ಮಾಡಬೇಕಾಯಿತು. ಇಂತಹ ಸನ್ನಿವೇಶದಲ್ಲಿ ನನ್ನ ಮೇಲೆ ರೇಪ್ ಆಯಿತು. ನಂತರ ನನ್ನ ಕುಟುಂಬವನ್ನ ಬಿಟ್ಟು ಬಂದ ನಾನು 16ನೇ ವಯಸ್ಸಿನಲ್ಲಿ ಸಂಗೀತ ನಿರ್ದೇಶಕರೊಬ್ಬರ ಜೊತೆ ಮದುವೆ ಆದೆ'' ಎಂದು ಹೇಳಿಕೊಂಡಿದ್ದಾರೆ.

ಐದು ವರ್ಷದ ಸಂಬಂಧಕ್ಕೆ ಬ್ರೇಕ್

ಐದು ವರ್ಷದ ಸಂಬಂಧಕ್ಕೆ ಬ್ರೇಕ್

''ಸಂಗೀತ ನಿರ್ದೇಶಕ ಫ್ರೆಡ್ಡಿ ಮೂರ್ ಜೊತೆ ಮದುವೆ ಆದ ಬಳಿಕ ನನ್ನ ಜೀವನ ಮತ್ತೊಂದು ಹಂತಕ್ಕೆ ಸಾಗಿತ್ತು. ಎಲ್ಲವೂ ಚೆನ್ನಾಗಿ ಇದ್ದ ಪರಿಣಾಮ ಐದು ವರ್ಷ ನಮ್ಮ ದಾಂಪತ್ಯ ಜೀವನ ನಡೆಯಿತು. ಆದರೆ ನಮ್ಮಿಬ್ಬರ ನಡುವೆ ಮನಸ್ತಾಪ ಉಂಟಾದ ಕಾರಣ ಡಿವೋರ್ಸ್ ಪಡೆದುಕೊಳ್ಳಬೇಕಾಯಿತು. ಅದಾದ ಬಳಿಕ ಮತ್ತೊಮ್ಮೆ ಕಷ್ಟಕರ ಸ್ಥಿತಿಗೆ ನಾನು ತಲುಪಿದ್ದೆ'' ಎಂದು ಡೆಮಿ ಮೋರ್ ಉಲ್ಲೇಖಿಸಿದ್ದಾರೆ.

ಮತ್ತೆ ಮದುವೆ ಆದ ಡೆಮಿ

ಮತ್ತೆ ಮದುವೆ ಆದ ಡೆಮಿ

''ಫ್ರೆಡ್ಡಿ ಮೂರ್ ಜೊತೆ ಸಂಬಂಧ ಮುರಿದುಕೊಂಡ ಮೇಲೆ ಬ್ರೂಸ್ ವಿಲ್ಲೀಸ್ ಜೊತೆ ವಿವಾಹ ಆಯಿತು. ನಮ್ಮಿಬ್ಬರಿಗೆ ಮೂವರು ಮಕ್ಕಳು. ಮತ್ತೆ ನನ್ನ ಜೀವನ ಮೊದಲಿನಿಂದ ಆರಂಭವಾಯಿತು. ಆದರೆ ನಮ್ಮಿಬ್ಬರಲ್ಲಿ ಮನಸ್ತಾಪ ಬಂದ ಕಾರಣ 13 ವರ್ಷಗಳ ದಾಂಪತ್ಯವನ್ನ ಮುರಿದುಕೊಂಡೆವು'' ಎಂದು ಡೆಮಿ ಮೋರ್ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

ತನಗಿಂತ ಚಿಕ್ಕವನ ಜೊತೆ ವಿವಾಹ

ತನಗಿಂತ ಚಿಕ್ಕವನ ಜೊತೆ ವಿವಾಹ

ಬ್ರೂಸ್ ವಿಲ್ಲೀಸ್ ಜೊತೆಗಿನ ವಿವಾಹ ಬ್ರೇಕ್ ಅಪ್ ಆದ್ಮೇಲೆ ತನಗಿಂತ 16 ವರ್ಷದ ಚಿಕ್ಕವನಾಗಿದ್ದ ಅಸ್ಟನ್ ಜೊತೆ ಮದುವೆ ಆದೆ. ನಂತರ ಗರ್ಭಿಣಿ ಆದ ಸಂದರ್ಭದಲ್ಲಿ ವಿಪರೀತವಾದ ಮದ್ಯಪಾನ ಸೇವಿಸಿದ ಕಾರಣ ಗರ್ಭಸ್ರಾವ ಸಂಭವಿಸಿತು. ಅದಕ್ಕೆ ಕಾರಣ ನಾನು. ಇಂತಹ ಸನ್ನಿವೇಶದಲ್ಲಿ ಜಾಗೃತಿಯಿಂದ ಇರದೆ ಹೋಗಿದ್ದು ನನ್ನ ತಪ್ಪು'' ಎಂದು ಡೆಮಿ ಮೋರ್ ಆತ್ಮಕಥೆಯಲ್ಲಿ ಪ್ರಸ್ತಾಪಿಸಿದ್ದಾರೆ.

More from Filmibeat

English summary
Hollywood Actress Demi Moore has written her memoir 'Inside Out'. its is ready to release now. she was raped at age of 15, she revealed in this book.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X