For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್ ನಟ-ನಿರ್ದೇಶಕ ರಾಬರ್ಟ್ ಡೌನಿ ಸೀನಿಯರ್ ನಿಧನ

  |

  ಅಮೆರಿಕನ್ ನಟ-ನಿರ್ದೇಶಕ ರಾಬರ್ಟ್ ಡೌನಿ ಸೀನಿಯರ್ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಮಗ ರಾಬರ್ಟ್ ಡೌನಿ ಜೂನಿಯರ್ ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  ರಾಬರ್ಟ್ ಡೌನಿ ಸೀನಿಯರ್‌ಗೆ 85 ವರ್ಷ ವಯಸ್ಸಾಗಿತ್ತು. ಮಂಗಳವಾರ ರಾತ್ರಿ ನ್ಯೂಯಾರ್ಕ್‌ನ ಮನೆಯಲ್ಲಿ ತಂದೆ ರಾಬರ್ಟ್ ಡೌನಿ ನಿಧನರಾದರು ಎಂದು ತಿಳಿಸಿರುವ 'ಐರನ್ ಮ್ಯಾನ್ ಸ್ಟಾರ್', 'ಸುಮಾರು ಐದು ವರ್ಷಗಳಿಂದ ಪಾರ್ಕಿನ್ಸನ್ ಕಾಯಿಲೆಯಿಂದ ತಂದೆ ಬಳಲುತ್ತಿದ್ದರು' ಎಂದು ಹೇಳಿದ್ದಾರೆ.

  ಮಗ ರಾಬರ್ಟ್ ಡೌನಿ ಜೂನಿಯರ್, ಮಗಳು ಆಲಿಸನ್ ಡೌನಿ ಮತ್ತು ಮೊದಲ ಪತ್ನಿ ಎಲ್ಸಿ ಡೌನಿ ನ್ಯೂಯಾರ್ಕ್‌ನ ಗ್ರೀಸರ್ ಪ್ಯಾಲೇಸ್‌ನಲ್ಲಿರುವ ಮನೆಯಲ್ಲಿ ಅಂತಿಮ ದರ್ಶನ ಪಡೆದುಕೊಂಡರು.

  ರಾಬರ್ಟ್ ಡೌನಿ ಸಿನಿಮಾ

  ಸೀನಿಯರ್ ರಾಬರ್ಟ್ ಡೌನಿ ಹಾಲಿವುಡ್‌ನ ವೃತ್ತಿ ಸಿನಿಮಾ ಮೇಕರ್ ಎನಿಸಿಕೊಂಡಿದ್ದರು. ರಾಬರ್ಟ್ ಡೌನಿ ಅವರು 'ಪುಟ್ನಿ ಸ್ವೋಪ್' (1969) ಸೇರಿದಂತೆ ಹಲವು ಸಿನಿಮಾ ನಿರ್ದೇಶಿಸಿದ್ದರು. 'ಬೂಗೀ ನೈಟ್ಸ್' (1997), 'ಮ್ಯಾಗ್ನೋಲಿಯಾ' (1999) ಮತ್ತು 'ದಿ ಫ್ಯಾಮಿಲಿ ಮ್ಯಾನ್' (2000) ಚಿತ್ರಗಳಲ್ಲಿ ನಟಿಸಿದ್ದಾರೆ.

  ಅಂದ್ಹಾಗೆ, ರಾಬರ್ಟ್ ಡೌನಿ 1936ರಲ್ಲಿ ನ್ಯೂಯಾರ್ಕ್‌ನಲ್ಲಿ ಜನಿಸಿದರು. ಮೂಲ ಹೆಸರು ರಾಬರ್ಟ್ ಎಲಿಯಾಸ್ ಜೂನಿಯರ್. ಸೈನ್ಯಕ್ಕೆ ಸೇರ್ಪಡೆಗೊಳ್ಳುವ ಸಲುವಾಗಿ 'ಡೌನಿ' ಎಂದು ಹೆಸರು ಬದಲಿಸಿಕೊಂಡರು. ಸೈನ್ಯಕ್ಕೆ ಸೇರಿದ ನಂತರ ತಮ್ಮ ಸಹೋದರಿಯೊಂದಿಗೆ ನ್ಯೂಯಾರ್ಕ್ನಲ್ಲಿ ವಾಸಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಚಲನಚಿತ್ರ ನಿರ್ಮಾಣದ ಕಡೆ ಆಸಕ್ತಿ ತೋರಿದ ಡೌನಿ ನಂತರ ಸಿನಿಮಾ ಇಂಡಸ್ಟ್ರಿಯಲ್ಲೇ ಮುಂದುವರಿದರು.

  2005ರಲ್ಲಿ ಫಿಲಡೆಲ್ಫಿಯಾ ಉದ್ಯಾನವನದ ಬಗ್ಗೆ 'ರಿಟ್ಟನ್ ಹೌಸ್ ಸ್ಕ್ವೇರ್' ಎಂಬ ಹೆಸರಿನಲ್ಲಿ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದರು. ಇದೇ ಇವರ ಕೊನೆಯ ಚಿತ್ರ.

  ಚಪ್ಪಲಿಯಲ್ಲಿ ಹೊಡೆದೆ ಅಂತ ಜಗ್ಗೇಶ್ ಅಪಪ್ರಚಾರ ಮಾಡಿ ನನ್ನ ತೇಜೋವಧೆ ಮಾಡಿದ್ರು!! | Filmibeat Kannada

  ರಾಬರ್ಟ್ ಡೌನಿ ಮಗ ಜೂನಿಯರ್ ರಾಬರ್ಟ್ ಡೌನಿ ಅಮೇರಿಕನ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟ.

  English summary
  Father of Actor Robert Downey Jr Director Actor Robert Downey Sr passed away in New York. He was 85.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X