For Quick Alerts
  ALLOW NOTIFICATIONS  
  For Daily Alerts

  'ಮಿಷನ್ ಇಂಪಾಸಿಬಲ್ 7' ಚಿತ್ರದಲ್ಲಿ ಪ್ರಭಾಸ್? ಕೊನೆಗೂ ಪ್ರತಿಕ್ರಿಯೆ ನೀಡಿದ ನಿರ್ದೇಶಕ ಕ್ರಿಸ್ಟೋಫರ್

  |

  ಹಾಲಿವುಡ್ ಪ್ರಸಿದ್ಧ ಸ್ಪೈ ಥ್ರಿಲ್ಲರ್ ಮಿಷನ್ ಇಂಪಾಸಿಬಲ್ 7 ಸರಣಿಯಲ್ಲಿ ಟಾಲಿವುಡ್ ಖ್ಯಾತ ನಟ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಾಹುಬಲಿ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಪ್ರಭಾಸ್ ಹಾಲಿವುಡ್‌ಗೆ ಹಾರಿದ್ದಾರೆ ಎನ್ನುವ ಮಾತು ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ.

  ಇತ್ತೀಚಿಗೆ ಪ್ರಭಾಸ್ ಚಿತ್ರೀಕರಣಕ್ಕೆಂದು ವಿದೇಶಕ್ಕೆ ಹೋದಾಗ ಹಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ಮೆಕ್ ಕ್ವಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ, ಪ್ರಭಾಸ್ ಮಿಷನ್ ಇಂಪಾಸಿಬಲ್ 7 ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗಿತ್ತು. ಇನ್ನು ಕೆಲವರು ಈಗಾಗಲೇ ಪ್ರಭಾಸ್ ತನ್ನ ಭಾಗದ ಚಿತ್ರೀಕರಣ ಸೈಲೆಂಟ್ ಆಗಿ ಮುಗಿಸಿದ್ದಾರೆ ಎನ್ನುವ ಮಾತು ಹರಿದಾಡುತ್ತಿತ್ತು.

  ಹಾಲಿವುಡ್‌ಗೆ ಹಾರಲಿದ್ದಾರೆ ಪ್ರಭಾಸ್: 'ಮಿಶನ್ ಇಂಪಾಸಿಬಲ್' ಅಥವಾ 'ಅವೆಂಜರ್ಸ್'?ಹಾಲಿವುಡ್‌ಗೆ ಹಾರಲಿದ್ದಾರೆ ಪ್ರಭಾಸ್: 'ಮಿಶನ್ ಇಂಪಾಸಿಬಲ್' ಅಥವಾ 'ಅವೆಂಜರ್ಸ್'?

  ಇದಾಗ ಮಿಷನ್ ಇಂಪಾಸಿಬಲ್ 7 ಚಿತ್ರದ ನಿರ್ದೇಶಕ ಕ್ರಿಸ್ಟೋಫರ್ ಪ್ರತಿಕ್ರಿಯೆ ನೀಡುವ ಮೂಲಕ ವೈರಲ್ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಅಭಿಮಾನಿ ಪ್ರಶ್ನೆಗೆ ಉತ್ತರಿಸುವ ಮೂಲಕ ವದಂತಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ ಕ್ರಿಸ್ಟೋಫರ್.

  ಪ್ರಭಾಸ್ ಮಿಷನ್ ಇಂಪಾಸಿಬಲ್ 7ನಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ತಲೆಕೊಡಿಸಿಕೊಂಡಿದ್ದ ಅಭಿಮಾನಿಯೊಬ್ಬ ನೇರವಾಗಿ ಕ್ರಿಸ್ಟೋಫರ್ ಬಳಿಯೇ ಕೇಳಿದ್ದಾರೆ. 'ಭಾರತೀಯ ಸುದ್ದಿ ವಾಹಿನಿಗಳಲ್ಲಿ ಪ್ರಭಾಸ್ ಮಿಷನ್ ಇಂಪಾಸಿಬಲ್ 7ನಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇದು ನಿಜವೂ ಇಲ್ವೋ ಎಂಬುದನ್ನು ದಯವಿಟ್ಟು ಖಚಿತಪಡಿಸಿ?' ಎಂದು ಕೇಳಿದ್ದರು.

  ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಕ್ರಿಸ್ಟೋಫರ್ 'ಪ್ರಭಾಸ್ ತುಂಬಾ ಪ್ರತಿಭಾವಂತ ನಟನಾಗಿದ್ದರೂ ನಾವು ಎಂದಿಗೂ ಭೇಟಿಯಾಗಿಲ್ಲ' ಎಂದು ಹೇಳುವ ಮೂಲಕ ಹರಿದಾಡುತ್ತಿದ್ದ ಗಾಳಿಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಪ್ರಭಾಸ್‌ನನ್ನು ಮಿಷನ್ ಇಂಪಾಸಿಬಲ್ 7ನಲ್ಲಿ ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಕ್ರಿಸ್ಟೋಫರ್ ಪ್ರತಿಕ್ರಿಯೆ ನಿರಾಸೆ ಮೂಡಿಸಿದೆ.

  ಮಾತಿನಿಂದ ತಿವಿದ ಚೇತನ್ ಗೆ ಉಪೇಂದ್ರ ಏನ್ ಹೇಳ್ತಾರೆ?? | Filmibeat Kannada

  ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಮತ್ತು ಆದಿಪುರುಷ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸದ್ಯ ಕೊರೊನಾ ಕಾರಣ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಈ ಸಿನಿಮಾ ಜೊತೆಗೆ ಮಹಾನಟಿ ಖ್ಯಾತಿಯ ನಿರ್ದೇಶಕ ಅಶ್ವಿನ್ ನಾಗ್ ಚಿತ್ರದಲ್ಲೂ ಪ್ರಭಾಸ್ ನಟಿಸಲು ಸಜ್ಜಾಗಿದ್ದಾರೆ.

  English summary
  Director Christopher Mcquarrie response to Tollywood Actor Prabhas act in Mission Impossible 7 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X