twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ಕಾಳಿ ಸಲಿಂಗಿ, ಹಿಂದುತ್ವದ ವಿಧ್ವಂಸಕಿ: ನಿರ್ದೇಶಕಿ ಲೀನಾ

    |

    ದೇವತೆ ಕಾಳಿ ಸಿಗರೇಟು ಸೇದುತ್ತಿರುವಂತೆ ಪೋಸ್ಟರ್ ಮಾಡಿ ಹಂಚಿಕೊಂಡು ವಿವಾದ ಎಬ್ಬಿಸಿದ್ದ ನಿರ್ದೇಶಕಿ ಲೀನಾ ಮಣಿಮೇಘಲೈ ಈಗ ಕಾಳಿಯ ಬಗ್ಗೆ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈಗ ಮಾಡಿರುವ ಟ್ವೀಟ್‌ ಈಗ ಎದ್ದಿರುವ ವಿವಾದದ ಬೆಂಕಿಯನ್ನು ಇನ್ನಷ್ಟು ಹೆಚ್ಚಿಸುವಂತಿದೆ.

    ಲೀನಾ 'ಕಾಳಿ' ಹೆಸರಿನ ಸಿನಿಮಾ ಮಾಡುತ್ತಿದ್ದು, ತಾವೇ ಕಾಳಿ ರೂಪದಲ್ಲಿ ಮೇಕಪ್ ಮಾಡಿಕೊಂಡು ಕೈಯಲ್ಲಿ ಎಲ್‌ಜಿಬಿಟಿಕ್ಯು ಸಮುದಾಯದ ಭಾವುಟ ಹಿಡಿದು ಸಿಗರೇಟು ಸೇದುತ್ತಿರುವ ಪೋಸ್ಟರ್‌ ಅನ್ನು ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ದರು. ಇದು ವಿವಾದವಾದ ಬೆನ್ನಲ್ಲೆ ಶಿವ ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡರು. ಈಗ ಮತ್ತೊಂದು ಟ್ವೀಟ್ ಮಾಡಿದ್ದಾರೆ.

    ಲೀನಾ ಮೇಘಲೈ, ದೇವತೆ ಕಾಳಿಯನ್ನು ಎಲ್‌ಜಿಬಿಟಿ (ಸಲಿಂಗಿ, ತ್ರಿಲಿಂಗಿ, ಎರಡೂ ಲಿಂಗದವರ ಮೇಲೆ ಆಕರ್ಷಣೆ ಉಳ್ಳವರು) ಸಮುದಾಯದ ಪ್ರತಿನಿಧಿ ಎಂದಿದ್ದಾರೆ. ''ನನ್ನ ಕಾಳಿ ಕ್ವೀರ್'' (ಎಲ್‌ಜಿಬಿಟಿ ಸಮುದಾಯದಕ್ಕೆ ಸೇರಿದ ಜನರಿಗೆ ಹೀಗೆ ಕರೆಯಲಾಗುತ್ತದೆ) ಎಂದಿರುವ ಲೀನಾ, ''ನನ್ನ ಕಾಳಿ ಹಿಂದುತ್ವದ ವಿಧ್ವಂಸಕಿ'' ಎಂದಿದ್ದಾರೆ.

    ಲೀನಾ ಮಾಡಿರುವ ಟ್ವೀಟ್ ಹೀಗಿದೆ

    ಲೀನಾ ಮಾಡಿರುವ ಟ್ವೀಟ್ ಹೀಗಿದೆ

    ''ನನ್ನ ಕಾಳಿ ಕ್ವೀರ್, ಆಕೆ ಸ್ವತಂತ್ರ್ಯ ಚೇತನ, ಆಕೆ ಪುರುಷ ಪ್ರಧಾನ ಪ್ರಭುತ್ವಕ್ಕೆ ಉಗಿಯುವವಳು, ಆಕೆ ಬಂಡವಾಳಶಾಹಿಯನ್ನು ನಿರ್ಮೂಲನೆ ಮಾಡುತ್ತಾಳೆ. ಆಕೆ ತನ್ನ ಸಾವಿರ ಕೈಗಳಿಂದ ಎಲ್ಲರನ್ನೂ ಅಪ್ಪಿಕೊಳ್ಳುತ್ತಾಳೆ ಎಂದಿರುವ ಲೀನಾ, ಮಾಧ್ಯಮದಲ್ಲಿ ಹೇಳಿರುವಂತೆ ''ಹಿಂದು ದೇವತೆ ಮೇಲೆ ಮಾಡಲಾಗುತ್ತಿರುವ ಸಿನಿಮಾ ಭಾರತದಲ್ಲಿ ದ್ವೇಷ ಹೆಚ್ಚಿಸಿದೆ'' ಎಂದು ಟ್ವೀಟ್ ಮಾಡಿದ್ದಾರೆ.

    ಲೀನಾಳ ಪೋಸ್ಟರ್‌ ವಿರುದ್ಧ ಆಕ್ರೋಶ

    ಲೀನಾಳ ಪೋಸ್ಟರ್‌ ವಿರುದ್ಧ ಆಕ್ರೋಶ

    ತಮಿಳುನಾಡು ಮೂಲದ ಲೀನಾ ಕೆನಡಾದಲ್ಲಿದ್ದು ಡಾಕ್ಯುಮೆಂಟರಿ ನಿರ್ದೇಶಕಿ ಆಗಿದ್ದಾರೆ. ಕಾಳಿ ಎಂಬ ಸಿನಿಮಾ ನಿರ್ಮಿಸಲು ಮುಂದಾಗಿರುವ ಲೀನಾ ತಾವೇ ಕಾಳಿ ರೂಪದಲ್ಲಿ ಮೇಕಪ್ ಮಾಡಿಕೊಂಡು ಕೈಯಲ್ಲಿ ಎಲ್‌ಜಿಬಿಟಿಕ್ಯು ಸಮುದಾಯದ ಭಾವುಟ ಹಿಡಿದು ಸಿಗರೇಟು ಸೇದುತ್ತಿರುವ ಪೋಸ್ಟರ್‌ ಅನ್ನು ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ದರು. ಆ ಪೋಸ್ಟರ್‌ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು, ಕೊನೆಗೆ ಟ್ವಿಟ್ಟರ್ ಇಂಡಿಯಾವು ಲೀನಾರ ಟ್ವೀಟ್‌ ಅನ್ನು ಡಿಲೀಟ್ ಮಾಡಿತು. ಲೀನಾ ವಿರುದ್ಧ ಕೆನಡಾ ರಾಯಭಾರಿ ಕಚೇರಿಗೆ ದೂರು ಸಹ ನೀಡಲಾಯ್ತು.

    ನನ್ನ ಕಾಳಿ ಭಾರತದ ಮೂಲ ನಿವಾಸಿಗಳ, ಜನಪದರ ಕಾಳಿ: ಲೀನಾ

    ನನ್ನ ಕಾಳಿ ಭಾರತದ ಮೂಲ ನಿವಾಸಿಗಳ, ಜನಪದರ ಕಾಳಿ: ಲೀನಾ

    ವಿವಾದದ ಬಗ್ಗೆ ಮಾತನಾಡಿದ್ದ ನಿರ್ದೇಶಕಿ ಲೀಲಾ, ''ಬೆಟ್ಟದಷ್ಟು ದ್ವೇಷ ಹಾಗೂ ಕೆಟ್ಟ ನಿಂದನೆಗಳನ್ನು ನಾನು ನೋಡುತ್ತಿದ್ದೇನೆ. ಈ ದ್ವೇಷ ಹಂಚುವ ಟ್ರೋಲ್‌ಗಳಿಗೆ ಧಕ್ಕೆ ಆಗಬಹುದಾದ ಧಾರ್ಮಿಕತೆಯಾಗಲಿ ಸೂಕ್ಷ್ಮತೆಯಾಗಲಿ ಇಲ್ಲವೇ ಇಲ್ಲ. ನನ್ನ ಕಾಳಿ ಭಾರತದ ಮೂಲ ನಿವಾಸಿಗಳ, ಜನಪದರ ಕಾಳಿಯಾಗಿದ್ದಾಳೆ. ತೆಲುಗು ರಾಜ್ಯಗಳು, ತಮಿಳುನಾಡುಗಳಲ್ಲಿ ಪೂಜಿಸಲಾಗುವ ಕಾಳಿ ನನ್ನ ಸಿನಿಮಾಕ್ಕೆ ಸ್ಪೂರ್ತಿ'' ಎಂದಿದ್ದರು ಲೀನಾ. ತಾವು ಹಂಚಿಕೊಂಡಿದ್ದ ಕಾಳಿಯ ಪೋಸ್ಟರ್‌ನಲ್ಲಿ ಕಾಳಿಯ ಕೈಗೆ ಎಲ್‌ಜಿಬಿಟಿ ಬಾವುಟ ನೀಡಿದ್ದ ಲೀಲಾ ಈಗ ಕಾಳಿ ಸ್ವತಃ ಎಲ್‌ಜಿಬಿಟಿ ಸಮುದಾಯಕ್ಕೆ ಸೇರಿದವಳು ಎಂದಿದ್ದಾರೆ.

    ಕಾಳಿ ಗಾಂಜಾ ಸೇದುತ್ತಾಳೆ, ಸಾರಾಯಿ ಕುಡಿಯುತ್ತಾಳೆ: ಲೀನಾ

    ಕಾಳಿ ಗಾಂಜಾ ಸೇದುತ್ತಾಳೆ, ಸಾರಾಯಿ ಕುಡಿಯುತ್ತಾಳೆ: ಲೀನಾ

    ''ತೆಲುಗು ರಾಜ್ಯಗಳು, ತಮಿಳುನಾಡುಗಳಲ್ಲಿ ಕಾಳಿ ಜನಪದರ ದೇವರು, ಆಕೆ ಊರಿನ ಜನರ ಮೈಮೇಲೆ ಆವಾಹಿಸುತ್ತಾಳೆ, ಆಕೆ ಮಾಂಸ ತಿನ್ನುತ್ತಾಳೆ, ಗಾಂಜಾ ಸೇದುತ್ತಾಳೆ, ಕಳ್ಳು ಸಾರಾಯಿ ಕುಡಿಯುತ್ತಾಳೆ, ಊರ ಮಧ್ಯೆ ಮೂತ್ರ ಮಾಡುತ್ತಾಳೆ, ಮನಬಂದಂತೆ ನರ್ತಿಸುತ್ತಾಳೆ. ಅಂಥಹಾ ಕಾಳಿ ನನ್ನ ಸಿನಿಮಾಕ್ಕೆ ಸ್ಪೂರ್ತಿ. ಅಲ್ಲದೆ, ಕಾಳಿ ಯಾರ ಸ್ವತ್ತೂ ಅಲ್ಲ, ಆಕೆ ಮರಣದ ದೇವತೆ, ಆಕೆಯನ್ನು ಯಾರೂ ಸ್ವಾಧೀನಪಡಿಸಿಕೊಳ್ಳಲಾರರು'' ಎಂದಿದ್ದರು ಲೀನಾ.

    English summary
    Director Leena Manimekalai said My Kaali is queer and she dismantles Hindutva. She destroys capitalism.
    Friday, July 8, 2022, 21:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X