ಮನೊರಂಜನಾ ಕ್ಷೇತ್ರಕ್ಕೂ ಕಾಲಿಟ್ಟ ರಿಸೆಶನ್: 7000 ನೌಕರರ ವಜಾ ಮಾಡಿದ ದೈತ್ಯ ನಿರ್ಮಾಣ ಸಂಸ್ಥೆ

By ಫಿಲ್ಮಿಬೀಟ್ ಡೆಸ್ಕ್

ಆರ್ಥಿಕ ಹಿಂಜರಿತದ ಪೆಡಂಭೂತ ವಿಶ್ವವನ್ನು ಮತ್ತೊಮ್ಮೆ ಕಾಡುತ್ತಿದೆ. ಟೆಕ್ ದೈತ್ಯಗಳಾದ 'ಗೂಗಲ್', 'ಅಮೆಜಾನ್', 'ಟೆಸ್ಲಾ', 'ಜೊಮ್ಯಾಟೊ' ಇನ್ನೂ ಹಲವು ಹೆಸರಾಂತ ಸಂಸ್ಥೆಗಳು ತಮ್ಮ ಸಾವಿರಾರು ಉದ್ಯೋಗಗಿಳನ್ನು ಮನೆಗೆ ಕಳಿಸಿದ್ದಾರೆ.

ಆರ್ಥಿಕ ಹಿಂಜರಿತದ ಬಿಸಿ ಟೆಕ್ ಸಂಸ್ಥೆಗಳು, ಬ್ಯಾಂಕಿಂಗ್ ಇನ್ನಿತರೆ ಸೇವಾ ಸಂಸ್ಥೆಗಳನ್ನು ದಾಟಿ ಇದೀಗ ಮನೊರಂಜನಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ದೈತ್ಯ ನಿರ್ಮಾಣ ಸಂಸ್ಥೆಯೊಂದು ತನ್ನ 7000 ಸಿಬ್ಬಂದಿಯನ್ನು ಏಕಾ-ಏಕಿ ವಜಾ ಮಾಡಿದೆ.

ವಿಶ್ವ ಸಿನಿಮಾದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಡಿಸ್ನಿ, ಆರ್ಥಿಕ ಹಿಂಜರಿತದ ಕಾರಣದಿಂದಾಗಿ ನಷ್ಟದ ಕಡೆಗೆ ಜಾರುತ್ತಿದ್ದು ಇದೇ ಕಾರಣಕ್ಕೆ 7000 ಉದ್ಯೋಗಿಗಳನ್ನು ವಜಾ ಮಾಡಿದೆ. ಈ ವಿಷಯವನ್ನು ಸಂಸ್ಥೆಯ ಸಿಇಓ ಆಗಿ ಪುನಃ ಅಧಿಕಾರ ವಹಿಸಿಕೊಂಡಿರುವ ಬಾಬ್ ಇಗರ್ ಹೇಳಿದ್ದಾರೆ. ತಾವು ಈ ನಿರ್ಧಾರವನ್ನು ಬಹಳ ಕಷ್ಟದಿಂದ ತೆಗೆದುಕೊಂಡಿರುವುದಾಗಿಯೂ ಅವರು ಹೇಳಿದ್ದಾರೆ.

Disney Layoff 7000 Employees As Recession Hit Company

ಡಿಸ್ನಿಯ ಕಳೆದ ವರ್ಷದ ವಾರ್ಷಿಕ ವರದಿಯ ಪ್ರಕಾರ ವಿಶ್ವದಾದ್ಯಂತ ಡಿಸ್ನಿಗಾಗಿ 1.90 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 80% ಸಿಬ್ಬಂದಿ ಪೂರ್ಣಪ್ರಮಾಣದ ಡಿಸ್ನಿ ಸಿಬ್ಬಂದಿ ಇನ್ನುಳಿದವರು ಅರೆಕಾಲಿಕ. ಇದರಲ್ಲಿ 7000 ಮಂದಿ ಇದೀಗ ಉದ್ಯೋಗ ಕಳೆದುಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಡಿಸ್ನಿ ಹಾಟ್‌ಸ್ಟಾರ್‌ನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಕಡಿಮೆಯಾಗಿದೆ ಎಂದಿರುವ ಬಾಬ್, ನಾವು ಹಣ ಉಳಿತಾಯ ದಾರಿಗಳನ್ನು ಅನ್ವೇಷಿಸುತ್ತಿದ್ದು, ಇದೇ ಕಾರಣಕ್ಕೆ ಟಿವಿ, ಸಿನಿಮಾ ಹಾಗೂ ಒಟಿಟಿಗಳ ಕೆಲವು ನಿಯಮಗಳಲ್ಲಿ ಬದಲಾವಣೆ ತರಲಿದ್ದೇವೆ ಎಂದಿದ್ದಾರೆ.

ಕಳೆದ ವರ್ಷದ ಡಿಸೆಂಬರ್ 31 ರ ಲೆಕ್ಕದಂತೆ ಮೂರು ತಿಂಗಳ ಅವಧಿಯಲ್ಲಿಯೇ ಡಿಸ್ನಿ ಹಾಟ್‌ಸ್ಟಾರ್‌ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 16 ಕೋಟಿ ಕಡಿಮೆಯಾಗಿದೆಯಂತೆ! ಇದು ಡಿಸ್ನಿ ಹಾಟ್‌ಸ್ಟಾರ್‌ ಇತಿಹಾಸದಲ್ಲೇ ಮಹಾ ಕುಸಿತ ಎಂದು ಸ್ವತಃ ಸಂಸ್ಥೆಯೇ ಹೇಳಿದೆ.

ಡಿಸ್ನಿಯ ಟಿವಿ ಉದ್ಯಮ ನಿಧಾನಕ್ಕೆ ಇಳಿಮುಖ ಕಾಣುತ್ತಿದೆ, ಇನ್ನು ಒಟಿಟಿ ಬ್ಯುಸಿನೆಸ್‌ ನಷ್ಟದಾಯಕವಾಗಿದೆ. ಹಾಗಾಗಿ ಹಾಟ್‌ಸ್ಟಾರ್ ಮೇಲಿನ ಹೂಡಿಕೆದಾರರು ನಷ್ಟ ಸರಿತೂಗಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದಿದ್ದಾರೆ ಸಿಇಒ ಬಾಬ್.

ಎರಡು ದಶಕಗಳ ಕಾಲ ಡಿಸ್ನಿಯ ಸಿಇಓ ಆಗಿದ್ದ ಬಾಬ್‌ 2020 ರಲ್ಲಿ ಹುದ್ದೆಯಿಂದ ಕೆಳಗೆ ಇಳಿದಿದ್ದರು. ಇದೀಗ ಮತ್ತೆ ಅವರನ್ನೇ ಸಿಇಓ ಮಾಡಲಾಗಿದ್ದು, ಡಿಸ್ನಿಯನ್ನು ಮತ್ತೆ ಮೇಲೆತ್ತುವ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಲಾಗಿದೆ.

More from Filmibeat

English summary
Production house Disney layoff 7000 employees as recession hit the company. Disney looses 16 core subscribers in just Three months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X