ಒಟಿಟಿಗೆ ಬರಲಿದೆ ಜಾನಿ ಡೆಪ್-ಅಂಬರ್ ಹರ್ಡ್‌ರ 'ಡರ್ಟಿ ದಾಂಪತ್ಯ'
ಹಾಲಿವುಡ್‌ನ ಖ್ಯಾತ ಸೆಲೆಬ್ರಿಟಿಗಳಾದ ಅಂಬರ್ ಹರ್ಡ್ ಹಾಗೂ ಜಾನಿ ಡೆಪ್ ವಿಚ್ಛೇಧನ ಹಾಗೂ ಈಗ ಜಾನಿ ಡೆಪ್, ಮಾಜಿ ಪತ್ನಿ ಅಂಬರ್ ಹರ್ಡ್ ಮೇಲೆ ಹೂಡಿರುವ ಮಾನನಷ್ಟ ಮೊಕದ್ದಮೆ ವಿಶ್ವದ ಗಮನ ಸೆಳೆದಿದೆ.
ಜಾನಿ ಡೆಪ್ ಹಾಗೂ ಅಂಬರ್ ಹರ್ಡ್‌ರ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಇಬ್ಬರೂ ಖ್ಯಾತ ನಟರು ಪರಸ್ಪರರ ಮೇಲೆ ಹೀನ ಆರೋಪಗಳನ್ನು ಮಾಡಿದ್ದಾರೆ.
ವಿಚಾರಣೆ ಮುಂದೆ ಸಾಗಿದಂತೆಯೂ ಇಬ್ಬರ ವೈಯಕ್ತಿಕ ಜೀವನದ ಬಗ್ಗೆ ಚಿತ್ರ ವಿಚಿತ್ರ ಮಾಹಿತಿಗಳು ಹೊರಬೀಳುತ್ತಿದ್ದು, ನಟರ ಬಗ್ಗೆ ಅಸಹ್ಯ ಪಟ್ಟುಕೊಳ್ಳುವಂತಾಗಿದೆ ಅಭಿಮಾನಿಗಳ. ಇವರಿಬ್ಬರ ಪ್ರೇಮ, ಮದುವೆ, ವಿಚ್ಚೇಧನ ಹಾಗೂ ಈಗಿನ ಮಾನನಷ್ಟ ಮೊಕದ್ದಮೆ ಕುರಿತಾದ ಸಾಕ್ಷ್ಯಚಿತ್ರವೊಂದು ಡಿಸ್ಕವರಿ ಪ್ಲಸ್ ನಲ್ಲಿ ಪ್ರಸಾರವಾಗಲಿದೆ.
ಸಾಕ್ಷ್ಯಚಿತ್ರಕ್ಕೆ 'ಜಾನಿ v/s ಅಂಬರ್' ಎಂದು ಹೆಸರಿಡಲಾಗಿದ್ದು, ಈ ಸಾಕ್ಷ್ಯಚಿತ್ರ ಎರಡು ಭಾಗಗಳಲ್ಲಿ ಪ್ರಸಾರವಾಗಲಿದೆ. ಸಾಕ್ಷ್ಯ ಚಿತ್ರವು ಜಾನಿ ಹಾಗೂ ಅಂಬರ್ ನಡುವಿನ ವಿಚ್ಛೇಧನ, ಮಾನನಷ್ಟ ಮೊಕದ್ದಮೆ, ಸಾಕ್ಷ್ಯಗಳು, ಹೇಳಿಕೆಗಳು ಈ ವಿಷಯಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲಿದೆ.

ಡಿಸ್ಕವರಿ ಪ್ಲಸ್‌ನಲ್ಲಿ ಪ್ರಸಾರವಾಗಲಿದೆ ಸಾಕ್ಷ್ಯಚಿತ್ರ
ಜೊತೆಗೆ ಡಿಸ್ಕವರಿ ಪ್ಲಸ್, ಜಾನಿ ಡೆಪ್ ಹಾಗೂ ಅಂಬರ್ ಅವರ ವಕೀಲರುಗಳ ಸಂದರ್ಶನವನ್ನು ಮಾಡಿಕೊಂಡಿದ್ದು, ಅದನ್ನೂ ಸಹ ಸಾಕ್ಷ್ಯಚಿತ್ರದೊಳಗೆ ಪ್ರಸಾರ ಮಾಡಲಿದೆ. ಜೊತೆಗೆ ನ್ಯಾಯಾಲಯದ ವಿಚಾರಣೆ ವೇಳೆ ಬಳಕೆಯಾದ, ಚಿತ್ರಗಳು, ವಿಡಿಯೋಗಳು, ಫೋನ್ ರೆಕಾರ್ಡ್‌ಗಳು ಇತರೆಗಳನ್ನು ಸಹ ಸಾಕ್ಷ್ಯಚಿತ್ರದಲ್ಲಿ ಪ್ರದರ್ಶಿಸಲಾಗುವುದು.

ಜಾನಿ ಪರ ಹೇಳಿಕೆ ನೀಡಿದ ಕೇಟ್
ಇನ್ನು, ಜಾನಿ ಡೆಪ್ ಹಾಗೂ ಅಂಬರ್ ಹರ್ಡ್ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು, ಮಾಡೆಲ್ ಕೇಟ್ ಮೋಸ್ ನಿನ್ನೆ ಪ್ರಕರಣ ಕುರಿತಂತೆ ಸಾಕ್ಷ್ಯ ನುಡಿದಿದ್ದಾರೆ. ಕೇಟ್ ಮೊಸ್, ಜಾನಿ ಡೆಪ್‌ರ ಮಾಜಿ ಗೆಳತಿಯಾಗಿದ್ದು, ಆಕೆಯನ್ನು ಮೆಟ್ಟಿಲಿನ ಮೇಲಿನಿಂದ ಜಾನಿ ಡೆಪ್ ತಳ್ಳಿದ್ದರು ಎಂದು ಅಂಬರ್ ಪರ ವಕೀಲರು ಆರೋಪಿಸಿದ್ದರು. ಹಾಗಾಗಿ ಕೇಟ್‌ನ ಹೇಳಿಕೆ ನೀಡಿದ್ದಾರೆ.

''ಜಾನಿ ಡೆಪ್ ನನ್ನನ್ನು ತಳ್ಳಲಿಲ್ಲ''
ನ್ಯಾಯಾಲಯಕ್ಕೆ ಹೇಳಿಕೆ ನೀಡಿರುವ ಕೇಟ್ ಮೋಸ್, ಜಾನಿ ಡೆಪ್ ತಮ್ಮನ್ನು ಮೆಟ್ಟಿಲಿನ ಮೇಲಿಂದ ತಳ್ಳಲಿಲ್ಲವೆಂದು ಹೇಳಿದ್ದಾರೆ. ನಾನು ರೂಮ್‌ನಿಂದ ಹೊರಬಂದಾಗ ನಾನೇ ಮೆಟ್ಟಿಲು ಗಮನಿಸದೆ ಜಾರಿ ಬಿದ್ದೆ. ನನಗೆ ಸಾಕಷ್ಟು ನೋವಾಯಿತು, ಕೂಡಲೇ ಬಂದ ಜಾನಿ ಡೆಪ್ ನನ್ನನ್ನು ಎತ್ತಿಕೊಂಡು ರೂಮ್‌ಗೆ ಕರೆದುಕೊಂಡು ಹೋಗಿ ಆರೈಕೆ ಮಾಡಿದರು'' ಎಂದು ಕೇಟ್ ಮೋಸ್ ಹೇಳಿದ್ದಾರೆ.

ಪರಸ್ಪರರ ಮೇಲೆ ಕೀಳು ಆರೋಪ
ಜಾನಿ ಡೆಪ್ ಹಾಗೂ ಅಂಬರ್ ನಡುವಿನ ಪ್ರಕರಣ ವಿಶ್ವದ ಗಮನ ಸೆಳೆದಿದ್ದು, ವಿಚಾರಣೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಬ್ಬರೂ ನಟರು ಪರಸ್ಪರರ ವಿರುದ್ಧ ಕೀಳು ಮಟ್ಟದ ಹೇಳಿಕೆಗಳನ್ನು ಮಾಡಿದ್ದಾರೆ. 'ಜಾನಿ ಡೆಪ್ ಮದ್ಯದ ಬಾಟಲಿಯನ್ನು ನನ್ನ ಜನನಾಂಗದ ಒಳಕ್ಕೆ ತುರುಕಿದ್ದ' ಎಂದು ಅಂಬರ್ ಆರೋಪ ಮಾಡಿದ್ದಾರೆ. ಮತ್ತೊಂದೆಡೆ, ಜಾನಿ ಡೆಪ್, 'ಅಂಬರ್ ಹರ್ಡ್, ನಾನು ಮಲಗುವ ಬೆಡ್ ಮೇಲೆ ಅಂಬರ್ ಮಲ ವಿಸರ್ಜನೆ ಮಾಡಿದ್ದಳು' ಎಂದು ಆರೋಪಿಸಿದ್ದಾರೆ.


Click it and Unblock the Notifications











