ಇಸ್ರೇಲಿ ಸಂಗೀತ ಉತ್ಸವದ ಮೇಲೆ ನಡೆದ ಹಮಾಸ್ ಭೀಕರ ದಾಳಿ ಕುರಿತು ಸಾಕ್ಷ್ಯಚಿತ್ರ ನಿರ್ಮಾಣ
ಇಸ್ರೇಲ್ ಮತ್ತು ಹಮಾಸ್ ದಾಳಿಕೋರರ ನಡುವಿನ ಸಂಕಷ್ಟ ಇನ್ನು ನಡೆಯುತ್ತಲೆ ಇದೆ. ಇಸ್ರೇಲೆ ಮತ್ತು ಗಾಜಾ ಪಟ್ಟೊಯಲ್ಲಿ ರಕ್ತ ಚೆಲ್ಲುತ್ತಲೆ ಇದೆ. ಇದರ ನಡುವೆ ಇತ್ತೀಚೆಗೆ ಹಮಾಸ್ ಗ್ಯಾಂಗ್ ಗಾಜಾ ಪಟ್ಟಿಯಿಂದ ಕೇವಲ 14 ಕಿ.ಮೀ ದೂರದಲ್ಲಿನ ಕಿಬ್ಬುಟ್ಸ್ ಎಂಬ ಮರುಭೂಮಿಯಲ್ಲಿ ನಡೆಯುತ್ತಿದ್ದ ಸೂಪರ್ನೋವಾ ಸಂಗೀತ ಉತ್ಸವದ ಮೇಲೆ ದಾಳಿ ಮಾಡಿದ್ದರು.
ಅಕ್ಟೋಬರ್ 7 ರಂದು ನಡೆದ ಈ ಧಿಡೀರ್ ಹತ್ಯಾಕಾಂಡದಲ್ಲಿ ಕನಿಷ್ಠ 260 ಜನರು ಸಾವನ್ನಪ್ಪಿದರು. ಇಂತಹ ಘೋರ ಘಟನೆಯನ್ನು ವಿವರಿಸುವ ಸಾಕ್ಷ್ಯಚಿತ್ರ ನಿರ್ಮಾಣವಾಗುತ್ತಿದೆ. ಇಸ್ರೇಲಿ ನಿರ್ಮಾಣ ಕಂಪನಿ SIPUR ಭಯೋತ್ಪಾದಕ ದಾಳಿಯ ದುರಂತ ಮತ್ತು ಭಯಾನಕ ವಿವರಗಳನ್ನು ವಿವರಿಸುವ ಸಾಕ್ಷ್ಯಚಿತ್ರದಲ್ಲಿ ಕೆಲಸ ಮಾಡುತ್ತಿದೆ.

ಮನರಂಜನಾ ಸುದ್ದಿವಾಹಿನಿ ದಿ ಹಾಲಿವುಡ್ ರಿಪೋರ್ಟರ್ ವರದಿ ಮಾಡಿರುವ ಪ್ರಕಾರ, ಇಸ್ರೇಲ್‌ನ ದಕ್ಷಿಣ ಗಡಿಯಲ್ಲಿ ಹಮಾಸ್ ಹಠಾತ್ ದಾಳಿ ಮಾಡಿದಾಗ ಉಂಟಾದ ಹತ್ಯಾಕಾಂಡದ ಕುರಿತ ಸಾಕ್ಷ್ಯಚಿತ್ರ ರಚನೆಗಾಗಿ ಸಿಪೂರ್ ( SIPUR) ಇಸ್ರೇಲಿ ಮಾಧ್ಯಮಗಳಾದ HOT ಚಾನೆಲ್ 8 ಮತ್ತು HSCC ಗಳೊಂದಿಗೆ ಮಾತುಕತೆ ನಡೆಸುತ್ತಿದೆ.
ಈ ಸಾಕ್ಷ್ಯಚಿತ್ರವನ್ನು ಯಾರಿವ್ ಮೊಜರ್ ನಿರ್ದೇಶಿಸಲಿದ್ದಾರೆ. ಸಾಕ್ಷ್ಯಚಿತ್ರ ತಯಾರಕರು ಉತ್ಸವದಲ್ಲಿನ ಜನರ ದೃಶ್ಯಗಳನ್ನೇ ಬಳಸಲಿದ್ದಾರೆ ಎಂದು ವರದಿಯಾಗಿದೆ. ಇನ್ನು, ಸುಕ್ಕೋಟ್‌ನ ಯಹೂದಿ ರಜಾದಿನವನ್ನು ಆಚರಿಸುವ ಈ ನೃತ್ಯ ಸಂಗೀತ ಉತ್ಸವದಲ್ಲಿ ಕನಿಷ್ಠ 260 ಜನರು ಸಾವನ್ನಪ್ಪಿದರು. ಈ ಉತ್ಸವದಲ್ಲಿ ಸರಿಸುಮಾರು 3,000 ಜನರು ಭಾಗವಹಿಸಿದ್ದರು.

"ನಾನು ನನ್ನ ಜೀವನದಲ್ಲಿ ಹಲವು ಘಟನೆಗಳನ್ನು ನೋಡಿದ್ದೇನೆ. ನಾನು ಯುದ್ಧಗಳನ್ನು ದಾಟಿ ಬದುಕಿದ್ದೇನೆ. ಹಲವು ಯುದ್ಧಗಳಲ್ಲಿ ನಾನು ಹೋರಾಡಿದ್ದೇನೆ ಮತ್ತು ಯುದ್ಧದ ಸಮಯದಲ್ಲಿ ಚಿತ್ರೀಕರಿಸಿದ್ದೇನೆ. ಆದರೆ ನೋವಾ ಸಂಗೀತ ಉತ್ಸವದಲ್ಲಿ ನಡೆದ ಹತ್ಯಾಕಾಂಡದ ಅವಶೇಷಗಳಲ್ಲಿ ನಾನು ನೋಡಿದ ಚಿತ್ರಗಳು ಈ ಎಲ್ಲಾ ಅನುಭವಗಳನ್ನು ಮಣ್ಣಾಗಿಸಿದೆ" ಎಂದು ನಿರ್ದೇಶಕ ಯಾರಿವ್ ಮೊಜರ್ ಭಾವುಕರಾಗಿದ್ದಾರೆ.
"ಈ ಹತ್ಯಾಕಾಂಡದಲ್ಲಿ ಬದುಕುಳಿದವರ ಸಾಕ್ಷ್ಯಗಳು ಮತ್ತು ಭಯಾನಕ ಕಥೆಗಳನ್ನು ಜಗತ್ತಿಗೆ ತರುವುದು ಸಾಕ್ಷ್ಯಚಿತ್ರ ನಿರ್ಮಾಪಕನಾಗಿ ನನ್ನ ಕರ್ತವ್ಯವೆಂದು ನಾನು ಭಾವಿಸಿದ್ದೇನೆ. ಅಲ್ಲಿದ್ದ ಯುವಕ ಯುವತಿಯರು ಮಾಡಿದ ಏಕೈಕ ಪಾಪ್ ಕೆಲಸವೆಂದರೆ ಅವರಿಗೆ ಸಂಗೀತದ ಮೇಲಿದ್ದ ಆಸಕ್ತಿ. ಇದರ ಜೊತೆಗೆ ಪ್ರೀತಿ ಮತ್ತು ಸ್ವಾತಂತ್ರ್ಯ ಹಂಚುವುದು" ಎಂದು ಹೇಳಿದ್ದಾರೆ.
ಇನ್ನು, ಸಿಪೂರ್ ಸಿಇಒ ಎಮಿಲಿಯೊ ಸ್ಕೆಂಕರ್ ಈ ಸಾಕ್ಷ್ಯಚಿತ್ರದಲ್ಲಿ ಕೆಲಸ ಮಾಡಲು ನಿರ್ಧರಿಸಿರುವುದಕ್ಕೆ ತಮ್ಮ ಕಾರಣಗಳನ್ನು ವಿವರಿಸಿದ್ದಾರೆ. "ಸೂಪರ್ನೋವಾ ಸಂಗೀತ ಉತ್ಸವದಲ್ಲಿ ಸಂಭವಿಸಿದ್ದು, ಮಾನವೀಯತೆಯ ವಿರುದ್ಧ ವಿವರಿಸಲಾಗದ ಅಪರಾಧ. ಇದನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಸಂಪೂರ್ಣವಾಗಿ ನೋಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಜಗತ್ತು ಈ ಹತ್ಯಾಕಾಂಡವನ್ನು ಎಂದಿಗೂ ಮರೆಯಬಾರದು" ಎಂದು ನೋವಿನಲ್ಲಿ ತಿಳಿಸಿದ್ದಾರೆ.


Click it and Unblock the Notifications










