Donald Trump: ಮಾಜಿ ನೀಲಿತಾರೆಗೆ ರಹಸ್ಯವಾಗಿ ಹಣ ವರ್ಗಾವಣೆ: ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಬಂಧನ ಸಾಧ್ಯತೆ?

By ಫಿಲ್ಮಿಬೀಟ್ ಡೆಸ್ಕ್

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಾಜಿ ನೀಲಿತಾರೆ ಸ್ಟಾರ್ಮಿ ಡೇನಿಯಲ್ಸ್‌ಗೆ ರಹಸ್ಯವಾಗಿ ಹಣ ವರ್ಗಾವಣೆ ಮಾಡಿರೋ ಆರೋಪ ಎದುರಿಸುತ್ತಾರೆ. ಈ ಪ್ರಕರಣದಲ್ಲಿ ಡೊನಾಲ್ಟ್ ಟ್ರಂಪ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ.

ಬುಧವಾರ(ಮಾರ್ಚ್ 22) ಈ ಸಂಬಂಧ ನ್ಯೂಯಾರ್ಕ್ ಪೊಲೀಸರು ನಗರದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಆದರೆ, ಟ್ರಂಪ್ ಕರೆಗೆ ಸೋಮವಾರ (ಮಾರ್ಚ್ 20) ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಂದ್ಮೇಳೆ ಟ್ರಂಪ್ ವಿರುದ್ಧವಾಗಿ ತೀರ್ಪು ಬಂದರೆ, ಬಂಧನಕ್ಕೊಳಗಾಗುವ ಮೊದಲ ಅಮೆರಿಕದ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಒಳಗಾಗಲಿದ್ದಾರೆ.

Donald Trump and Stormy Daniels Controversy: Former US President May Be Arrested In New York Hush Money Case

2016ರ ಚುನಾವಣೆ ಸಂದರ್ಭದಲ್ಲಿ ಅಡಲ್ಟ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್‌ಗೆ ತಮ್ಮ ನಡುವಿನ ವಿಷಯವನ್ನು ಬಹಿರಂಗ ಪಡಿಸದಂತೆ ಟ್ರಂಪ್ 130,000 ಯುಎಸ್ ಡಾಲರ್ ಹಣ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. ಆಗ ಟ್ರಂಪ್ ಖಾಸಗಿ ವಕೀಲರಾಗಿದ್ದ ಮೈಕೆಲ್ ಕೊಹೇನ್‌ ಮೂಲಕ ಹಣವನ್ನು ರವಾನೆ ಮಾಡಿದ್ದರು ಅನ್ನೋ ಗಂಭೀರ ಆರೋಪ ಇವರ ಮೇಲಿದೆ.

ಅಷ್ಟಕ್ಕೂ ಟ್ರಂಪ್ ಕೊಟ್ಟಿರುವ ಕಾನೂನು ಬಾಹಿರವಾಗೇನೂ ಇಲ್ಲ. ತನ್ನ ಮಾಜಿ ವಕೀಲ ಮೈಕೆಲ್ ಕೊಹೇನ್‌ಗೆ ಈ ಹಣವನ್ನು ಕಾನೂನು ಶುಲ್ಕ ನೀಡಿದ್ದಾಗಿ ಹೇಳಿಕೆ ದಾಖಲು ಮಾಡಿದ್ದಾರೆ. ಆದರೆ, ಸರ್ಕಾರಿ ವಕೀಲರು ಟ್ರಂಪ್ ಈ ಹಣವನ್ನು ದುರುದ್ದೇಶದಿಂದಲೇ ವರ್ಗಾವಣೆ ಮಾಡಿದ್ದಾರೆ. ಇದು ನ್ಯೂಯಾರ್ಕ್ ಕಾನೂನಿನ ಪ್ರಕಾರ ಅಪರಾಧ ಎಂದು ವಾದ ಮಂಡಿಸಿದ್ದರು.

Donald Trump and Stormy Daniels Controversy: Former US President May Be Arrested In New York Hush Money Case

ಟ್ರಂಪ್ ಚುನಾವಣಾ ಕಾನೂನನ್ನು ಮುರಿದಿದ್ದಾರೆ. ಯಾಕಂದ್ರೆ, ಮತದಾರರಿಗೆ ಸ್ಟಾರ್ಮಿ ಡೇನಿಯಲ್ಸ್ ಅವರೊಂದಿಗಿನ ಸಂಬಂಧದ ಬಗ್ಗೆ ತಿಳಿದೆ ಇರಲಿ ಎಂದು ಈ ಯತ್ನಕ್ಕೆ ಮುಂದಾಗಿದ್ದರು. ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ, ಆ ಮೂಲಕ ಅಪರಾಧವನ್ನು ಮುಚ್ಚಿಡುವುದು ಅಪರಾಧ. ಹೀಗಾಗಿ ಇದು ಗಂಭೀರವಾದ ಆರೋಪ ಎಂದು ಸರ್ಕಾರಿ ವಕೀಲರು ಟ್ರಂಪ್ ವಿರುದ್ಧ ವಾದ ಮಂಡಿಸಿದ್ದಾರೆ.

2016ರಲ್ಲಿ ಸ್ಟಾರ್ಮಿ ಡೇನಿಯಲ್ಸ್‌ ಹಾಗೂ ಟ್ರಂಪ್ ಪ್ರಕರಣವನ್ನು ಮ್ಯಾನ್ ಹಟನ್ ಡಿಸ್ಟ್ರಿಕ್ಟ್ ಅಟಾರ್ನಿ ಆಲ್ವಿನ್ ಬ್ರ್ಯಾಗ್ ತನಿಖೆ ನಡೆಸುತ್ತಿದ್ದಾರೆ. ಇವರ ವರದಿಯನ್ನೇ ಆಧಾರವಾಗಿಟ್ಟುಕೊಂಡು ನ್ಯಾಯಾಲಯ ತೀರ್ಪು ನೀಡಲಿದೆ. ಒಂದ್ವೇಳೆ ಬಂಧನವಾದರೆ, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ 76-ವರ್ಷದ ಟ್ರಂಪ್‌ಗೆ ತೀವ್ರ ಹಿನ್ನೆಡೆಯಾಗಲಿದೆ.

More from Filmibeat

English summary
Donald Trump and Stormy Daniels Controversy: Former US President May Be Arrested In New York Hush Money Case. Trump told his followers to protest against his arrest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X