ನೀಲಿಚಿತ್ರ ತಾರೆ ಜತೆಗಿನ ತನ್ನ ಅಕ್ರಮ ಸಂಬಂಧ ಮುಚ್ಚಿಡಲು ಹಣ ನೀಡಿದ್ದ ಟ್ರಂಪ್ ಬಂಧನ!

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ವಿಷಯಗಳಿಂದ ಆಗಾಗ ವಿವಾದಗಳನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ. ಟ್ರಂಪ್ ಕುರಿತಾದ ಹಲವಾರು ಗೌಪ್ಯ ವಿಷಯಗಳು ಆಗಾಗ ಬಹಿರಂಗಗೊಂಡಿವೆ. ಈ ಪೈಕಿ ಇತ್ತೀಚೆಗಷ್ಟೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಬಿಚ್ಚಿಟ್ಟ ದೊಡ್ಡ ರಹಸ್ಯ ಕೂಡ ಒಂದು.

ಹೌದು, ಮಾಧ್ಯಮದ ಮುಂದೆ ಬಂದಿದ್ದ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಡೊನಾಲ್ಡ್ ಟ್ರಂಪ್ ತನ್ನ ಜತೆ ಸಂಬಂಧವನ್ನು ಹೊಂದಿದ್ದರು ಹಾಗೂ ಅದನ್ನು ಮುಚ್ಚಿಡಲು ತನಗೆ ಹಣವನ್ನು ನೀಡಿದ್ದರು ಎಂಬ ಆರೋಪವನ್ನು ಮಾಡಿದ್ದರು. ಈ ಆರೋಪದ ಕುರಿತು ಮ್ಯಾನ್‌ಹ್ಯಾಟನ್ ನ್ಯಾಯಾಲಯ ವಿಚಾರಣೆ ನಡೆಸುವ ಮುನ್ನವೇ ಮಂಗಳವಾರ ಡೊನಾಲ್ಡ್ ಟ್ರಂಪ್ ಅವರ ಬಂಧನವಾಗಿದೆ.

Donald Trump arrested as pornstar Stormy Daniels suid a case against him

ಅಂದಹಾಗೆ ಡೊನಾಲ್ಡ್ ಟ್ರಂಪ್ 2017ರಿಂದ 2021ರವರೆಗೆ ಅಮೆರಿಕಾ ಅಧ್ಯಕ್ಷನಾಗಿ ಅಧಿಕಾರದಲ್ಲಿದ್ದರು. ಈ ಅಧಿಕಾರಕ್ಕೆ ಚುನಾವಣೆ ನಡೆಯುವ ಮುನ್ನ ಡೊನಾಲ್ಡ್ ಟ್ರಂಪ್ 2016ರಲ್ಲಿ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಜತೆ ಹೊಂದಿದ್ದ ಸಂಬಂಧವನ್ನು ಎಲ್ಲಿಯೂ ಬಾಯಿ ಬಿಡದಂತೆ ಮುಚ್ಚಿಡಲು ಬೆದರಿಕೆ ಹಾಕಿ 1.30 ಲಕ್ಷ ಡಾಲರ್ ಹಣವನ್ನು ನೀಡಿದ್ದರು ಎಂದು ತಿಳಿದು ಬಂದಿದೆ.

ಹೌದು, ತಮ್ಮ ಸಂಬಂಧದ ವಿಚಾರವನ್ನು ಬಹಿರಂಗಪಡಿಸದೇ ಇದ್ದದ್ದೇ ಇದೀಗ ಡೊನಾಲ್ಡ್ ಟ್ರಂಪ್ ಅವರಿಗೆ ಮುಳುವಾಗಿದೆ. ಮ್ಯಾನ್‌ಹಾಟನ್ ಜಿಲ್ಲಾ ಅಟಾರ್ನಿಯ ಕೋರ್ಟ್ ಸಭಾಂಗಣದಲ್ಲಿ ಟ್ರಂಪ್ ಶರಣಾಗತಿಗೊಳಗಾಗಿದ್ದಾರೆ. ಈ ಮೂಲಕ ಕ್ರಿಮಿನಲ್ ಪ್ರಕರಣದಲ್ಲಿ ಬಂಧಕ್ಕೊಳಗಾದ ಅಮೆರಿಕಾದ ಮೊದಲ ಅಧ್ಯಕ್ಷ ಎಂಬ ಕೆಟ್ಟ ಇತಿಹಾಸವನ್ನು ಡೊನಾಲ್ಡ್ ಟ್ರಂಪ್ ಬರೆದಿದ್ದಾರೆ.

ಇನ್ನು ಕಾನೂನು ಸಲಹಾ ಸಿಬ್ಬಂದಿ ಜತೆ ಹಾಜರಾಗಿದ್ದ ಡೊನಾಲ್ಡ್ ಟ್ರಂಪ್ ಇದರಲ್ಲಿ ನನ್ನ ತಪ್ಪಿಲ್ಲ, ನಾನು ನಿರ್ದೋಷಿ ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜುವಾನ್ ಮರ್ಚನ್ ಅವರ ಮುಂದೆ ಹೇಳಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಮನವಿಯನ್ನು ಪುರಸ್ಕರಿಸದ ಕಾರಣ ಟ್ರಂಪ್ ಬಂಧನಕ್ಕೆ ಒಳಗಾಗಿದ್ದಾರೆ.

ಇನ್ನು ಟ್ರಂಪ್ ಈ ಮೊದಲೇ ತಾನು ಬಂಧನಕ್ಕೊಳಗಾಗಲಿದ್ದೇನೆ ಎಂಬ ಸುಳಿವನ್ನು ನೀಡಿದ್ರು. ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದ ಟ್ರಂಪ್ ನ್ಯೂಯಾರ್ಕ್‌ನಲ್ಲಿ ನ್ಯಾಯಯುತ ವಿಚಾರಣೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದರು. ಅಲ್ಲದೇ ವಿಚಾರಣೆ ನಡೆಸುವ ನ್ಯಾಯಾಧೀಶ ಜುವಾನ್ ಮರ್ಚನ್ ಅವರನ್ನು ಟೀಕಿಸಿದ್ದರು. ಜುವಾನ್ ಮರ್ಚನ್ ಅವರಿಗೆ ನನ್ನ ಮೇಲೆ ದ್ವೇಷ ಇದೆ ಎಂದು ಹೇಳುವ ಮೂಲಕ ತಾನು ಬಂಧನಕ್ಕೊಳಗಾಗುವುದು ಖಚಿತ ಎಂಬ ಸುಳಿವು ನೀಡಿದ್ರು.

ವಿಚಾರಣೆ ಮುಗಿದ ಬಳಿಕ ಪೋಸ್ಟ್ ಮಾಡಿರುವ ಟ್ರಂಪ್ "ಮ್ಯಾನ್‌ಹ್ಯಾಟನ್ ನ್ಯಾಯಾಲಯ ತುಂಬಾ ಅತಿವಾಸ್ತವಿಕವಾಗಿ ತೋರುತ್ತಿದೆ - ವಾಹ್, ಅವರು ನನ್ನನ್ನು ಬಂಧಿಸಲು ಹೋಗುತ್ತಿದ್ದಾರೆ. ಇದು ಅಮೇರಿಕಾದಲ್ಲಿ ನಡೆಯುತ್ತಿದೆ ಎಂದು ನಂಬಲಾಗುತ್ತಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಡೊನಾಲ್ಡ್ ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸುವ ಯೋಜನೆಯಲ್ಲಿದ್ದರು. ಆದರೆ ಈ ಬಂಧನ ಟ್ರಂಪ್ ಅವರ ಯೋಜನೆಗಳಿಗೆ ಹಿನ್ನಡೆ ಉಂಟುಮಾಡಿವೆ.

ಇನ್ನು ಡೊನಾಲ್ಡ್ ಟ್ರಂಪ್ ಮೇಲೆ ಆರೋಪ ಮಾಡಿರುವ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್. 44 ವರ್ಷ ವಯಸ್ಸಿನ ಈಕೆ ಲೂಸಿಯಾನಾದ ಬ್ಯಾಟನ್ ರೋಗ್‌ನವರು. ಸುಮಾರು ಎರಡು ದಶಕಗಳ ಕಾಲ ನೀಲಿ ಚಿತ್ರ ಇಂಡಸ್ಟ್ರಿಯಲ್ಲಿ ಕೆಲಸ ನಿರ್ವಹಿಸಿದ್ದ ಇವರು ನೀಲಿ ಚಿತ್ರಗಳಲ್ಲಿ ನಟನೆ ಹಾಗೂ ನಿರ್ದೇಶನವನ್ನೂ ಸಹ ಮಾಡಿದ್ದಾರೆ.

More from Filmibeat

English summary
Donald Trump arrested as pornstar Stormy Daniels suid a case against him. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X