For Quick Alerts
  ALLOW NOTIFICATIONS  
  For Daily Alerts

  ಈ ಬಾರಿ ಆಸ್ಕರ್ ಪ್ರಶಸ್ತಿ ಸಮಾರಂಭ ವಿಭಿನ್ನ: ಹಲವು ದೇಶಗಳಿಂದ ಲೈವ್

  |

  ಈ ಬಾರಿಯ ಆಸ್ಕರ್ ಪ್ರಶಸ್ತಿ ಸಮಾರಂಭ ಸಂಪೂರ್ಣ ಭಿನ್ನವಾಗಿರಲಿದೆ. ಸಾಮಾನ್ಯವಾಗಿ ಆಸ್ಕರ್ ಪ್ರಶಸ್ತಿ ಸಮಾರಂಭವು ಕ್ಯಾಲಿಫೋರ್ನಿಯಾದ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತಿತ್ತು. ಈ ಬಾರಿಯೂ ಅಲ್ಲೇ ನಡೆಯುತ್ತದೆಯಾದರೂ ಸಮಾರಂಭ ಸಂಪೂರ್ಣ ಭಿನ್ನವಾಗಿರಲಿದೆ.

  ಕೊರೊನಾ ಕಾರಣ ಈ ಬಾರಿಯ ಸಮಾರಂಭದಲ್ಲಿ ಅತಿಥಿಗಳಿಗೆ ಆಹ್ವಾನವಿರುವುದಿಲ್ಲ. ಬದಲಿಗೆ ಕಾರ್ಯಕ್ರಮದ ಲೈವ್ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತದೆ.

  ಅಷ್ಟೇ ಅಲ್ಲದೆ, ಆಸ್ಕರ್ ನಾಮಿನೇಷನ್ ಆದ ಸಿನಿಮಾಗಳ ನಟ, ನಿರ್ದೇಶಕರು ಇರುವ ದೇಶಗಳಿಗೆ ತೆರಳಿ ಅಲ್ಲಿಂದಲೇ ಲೈವ್ ಮಾಡಿ, ಅಲ್ಲಿಯೇ ಗೆದ್ದವರ ಭಾಷಣಗಳನ್ನು ರೆಕಾರ್ಡ್ ಮಾಡಿ ಲೈವ್ ಮಾಡಲಾಗುತ್ತದೆ.

  ಹಲವು ಮುಂದೂಡಿಕೆಗಳ ಬಳಿಕ ಆಸ್ಕರ್ ಪ್ರಶಸ್ತಿ ಸಮಾರಂಭವು ಏಪ್ರಿಲ್ 25 ರಂದು ನಡೆಯಲಿದೆ. ಆಸ್ಕರ್ ನಾಮಿನೇಷನ್ ಪಟ್ಟಿಯನ್ನು ಮಾರ್ಚ್ 15 ಕ್ಕೆ ಘೋಷಿಸಲಾಗುತ್ತದೆ.

  ಪ್ರಶಾಂತ್ ನೀಲ್ ಹೇಳಿದ ಸುಳ್ಳನ್ನು ಮಾದ್ಯಮಗಳ ಮುಂದೆ ಬಿಚ್ಚಿಟ್ಟ ರವಿ ಬಸ್ರೂರ್

  ಈ ಬಾರಿ ಆಸ್ಕರ್‌ ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ ಮಲಯಾಳಂ ಸಿನಿಮಾ 'ಜಲ್ಲಿಕಟ್ಟು' ಈಗಾಗಲೇ ಆಸ್ಕರ್ ರೇಸ್‌ನಿಂದ ಹೊರಗೆ ಬಂದಿದೆ. ಅಂತರರಾಷ್ಟ್ರೀಯ ವಿಭಾಗದಲ್ಲಿ ಸ್ಪರ್ಧಿಸಿದ್ದ 'ಜಲ್ಲಿಕಟ್ಟು' ಕೊನೆಯ ಐದಿನೈದು ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.

  English summary
  Due to coronavirus pandemic 93 Oscar award function will be aired live from many locations.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X