For Quick Alerts
  ALLOW NOTIFICATIONS  
  For Daily Alerts

  ಅರಮನೆಯನ್ನೇ ಖರೀದಿಸಿದ ಡ್ವೇನ್ ಜೋನ್ಸನ್, ಬೆಲೆ ಎಷ್ಟು ಗೊತ್ತೆ?

  |

  'ದಿ ರಾಕ್' ಎಂದೇ ಖ್ಯಾತವಾಗಿರುವ ಹಾಲಿವುಡ್ ಸೂಪರ್ ಸ್ಟಾರ್ ನಟ ಡ್ವೇನ್ ಜಾನ್ಸನ್ ಭಾರಿ ಐಶಾರಾಮಿ ಮನೆ ಖರೀದಿಸಿದ್ದಾರೆ.

  1993 ರಲ್ಲಿ ನಿರ್ಮಾಣವಾದ ಬೆವೆರ್ಲಿ ಪಾರ್ಕ್ ಮ್ಯಾನ್‌ಶನ್ ಎಂದು ಕರೆಯಲಾಗುತ್ತಿದ್ದ ಅರಮನೆಯಂಥ ಮನೆಯನ್ನು ಡ್ವೇನ್ ಖರೀದಿಸಿದ್ದು ಈ ಮನೆಗೆ 207 ಕೋಟಿಗೂ ಹೆಚ್ಚು ಹಣ ನೀಡಿದ್ದಾರೆ.

  ವಿಶ್ವದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರಾಗಿರುವ, ಅತಿ ಹೆಚ್ಚು ಸಂಪಾದಿಸುವ ಸೆಲೆಬ್ರಿಟಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಡ್ವೇನ್ ಜಾನ್ಸನ್‌ಗೆ 207 ಕೋಟಿ ದೊಡ್ಡ ಮೊತ್ತವೇನೂ ಅಲ್ಲ.

  ಡ್ವೇನ್ ಜಾನ್ಸನ್ ಐಷಾರಾಮಿ ಮನೆಯನ್ನು ಕೊಂಡುಕೊಳ್ಳುವ ಮೊದಲು ಅಲ್ಲಿ ನಟ ಪೌಲ್ ರೇಸರ್ ವಾಸವಿದ್ದರು. ಅವರಿಂದಲೇ ಡ್ವೇನ್ ಜಾನ್ಸನ್ ಮನೆ ಖರೀದಿಸಿದ್ದಾರೆ. ಪೌಲ್ ರೇಸರ್‌ಗೂ ಮುನ್ನ ಆ ಅರಮನೆಯಲ್ಲಿ ಅಲೆಕ್ಸ್ ವ್ಯಾನ್ ಹೆಲನ್ ವಾಸವಿದ್ದರು. ಅವರೇ ಆ ಮನೆಯನ್ನು 1993 ರಲ್ಲಿ ಕಟ್ಟಿಸಿದ್ದರು.

  ಎಕರೆಗಟ್ಟಲೆ ವಿಶಾಲವಾಗಿರುವ ಈ ಪ್ರಾಪರ್ಟಿ ಮೆಡಿಟೇರಿಯನ್ ಮಾದರಿ ರೆಸಾರ್ಟ್ ಆಗಿದ್ದು. ಈ ಮ್ಯಾನ್‌ಶನ್‌ನಲ್ಲಿ ಟೆನ್ನಿಸ್‌ ಬಾಲ್ ಕೋರ್ಟ್, ಬ್ಯಾಡ್‌ಮಿಂಟನ್ ಕೋರ್ಟ್, ಈಜುಕೊಳ, 12 ಬಾತ್‌ರೂಮ್‌ಗಳು, ಬಾರು ವಿಶಾಲವಾದ ಅತಿಥಿ ಗೃಹ ಎಲ್ಲವೂ ಇದೆ.

  ಬೆವೆರ್ಲಿ ಹಿಲ್ಸ್‌ ಅಮೆರಿಕದ ಸಿನಿಮಾ ಸೆಲೆಬ್ರಿಟಿಗಳು, ದೊಡ್ಡ ವರ್ಚಸ್ಸಿನ ರಾಜಕಾರಣಿಗಳು, ಉದ್ಯಮಿಗಳು ವಾಸವಿರುವ ಜಾಗ. ಈಗ ಡ್ವೇನ್ ಸಹ ಇದೇ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ. ಬೆವೆರ್ಲಿ ಹಿಲ್ಸ್ ಹೊರತಾಗಿ ಜಾರ್ಜಿಯಾದಲ್ಲಿಯೂ ಡ್ವೇನ್ ಜೋನ್ಸ್ ಹೆಸರಲ್ಲಿ ಭಾರಿ ಐಶಾರಾಮಿ ಮನೆ, ಆಸ್ತಿ ಇದೆ.

  ಫಸ್ಟ್ ಟೈಂ ನಾಯಕಿ ತುಟಿಗೆ ಕಿಸ್ ಮಾಡಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸಲ್ಮಾನ್‌ಖಾನ್

  ಕೋಟ್ಯಂತರ ಮೌಲ್ಯದ ಬಹುದೊಡ್ಡ ಕಾರುಗಳ ಕಲೆಕ್ಷನ್ ಸಹ ಹೊಂದಿರುವ ಡ್ವೇನ್ ಜೋನ್ಸ್ ರಾಜಕೀಯ ಪ್ರವೇಶಿಸುವ ಸುಳಿವನ್ನೂ ನೀಡಿದ್ದಾರೆ. ಅದಕ್ಕೆ ಮುನ್ನುಡಿಯಾಗಿಯೇ ಪ್ರಭಾವಿ ರಾಜಕಾರಣಿಗಳು, ಉದ್ಯಮಪತಿಗಳು ವಾಸವಿರುವ ಬೆವೆರ್ಲಿ ಹಿಲ್ಸ್‌ನಲ್ಲಿ ಮನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

  English summary
  Dwayne Johnson purchased Beverly park mansion from actor Paul Reiser for very big amount.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X