ವೇನ್ ಡೀಸಲ್ ಮೇಲೆ ಮುನಿಸು 'ಫಾಸ್ಟ್ ಆಂಡ್ ಫ್ಯೂರಿಯಸ್‌'ಗೆ ಮರಳಲಾರೆ ಎಂದ ರಾಕ್

ದಿ ರಾಕ್ ಎಂದೇ ಜನಪ್ರಿಯವಾಗಿರುವ ಹಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆವ ನಟ ಡ್ವೇನ್ ಜಾನ್ಸನ್ ತಾವು 'ಫಾಸ್ಟ್ ಆಂಡ್ ಫ್ಯೂರಿಯಸ್' ಸಿನಿಮಾ ಸರಣಿಗೆ ಮರಳುವುದಿಲ್ಲ ಎಂದು ಖಾತ್ರಿಪಡಿಸಿದ್ದಾರೆ.

'ಫಾಸ್ಟ್ ಆಂಡ್ ಫ್ಯೂರಿಯಸ್' ಸಿನಿಮಾ ಸರಣಿಗಳು ವಿಶ್ವದ ಅತಿ ಜನಪ್ರಿಯ ಆಕ್ಷನ್ ಸಿನಿಮಾ ಸಿನಿಮಾ ಸರಣಿ ಆಗಿದ್ದು, ಈವರೆಗೆ ಸುಮಾರು 8 'ಫಾಸ್ಟ್ ಆಂಡ್ ಫ್ಯೂರಿಯಸ್' ಸಿನಿಮಾ ಸರಣಿ ನಿರ್ಮಾಣವಾಗಿವೆ.

'ಫಾಸ್ಟ್ ಆಂಡ್ ಫ್ಯೂರಿಯಸ್' ಸಿನಿಮಾ ಸರಣಿಯಲ್ಲಿ ವೇನ್ ಡೀಸಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಾ ಬಂದಿದ್ದಾರೆ. ಇದೇ ಸಿನಿಮಾ ಸರಣಿಯಲ್ಲಿ ಪೊಲೀಸ್ ಅಧಿಕಾರಿ ಹಾಬ್ಸ್ ಪಾತ್ರದಲ್ಲಿ ನಟ ಡ್ವೇನ್ ಜಾನ್ಸನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈವರೆಗೆ ನಾಲ್ಕು 'ಫಾಸ್ಟ್ ಆಂಡ್ ಫ್ಯೂರಿಯಸ್' ಸಿನಿಮಾಗಳಲ್ಲಿ ಡ್ವೇನ್ ಜಾನ್ಸನ್ ನಟಿಸಿದ್ದು, 2017 ರಲ್ಲಿ ಬಿಡುಗಡೆ ಆದ 'ದಿ ಫೇಟ್ ಆಫ್‌ ದಿ ಫ್ಯೂರಿಯಸ್' ಸಿನಿಮಾದ ಬಳಿಕ ಫಾಸ್ಟ್ ಆಂಡ್ ಫ್ಯೂರಿಯಸ್ ಸರಣಿ ಸಿನಿಮಾದಲ್ಲಿ ನಟಿಸುವುದು ನಿಲ್ಲಿಸಿದ್ದಾರೆ.

ಇದೀಗ 'ಫಾಸ್ಟ್ ಆಂಡ್ ಫ್ಯೂರಿಯಸ್‌' ಸಿನಿಮಾ ಸರಣಿಯ ಮುಖ್ಯ ಪಾತ್ರಧಾರಿ ವೇನ್ ಡೀಸೆಲ್ ಸ್ವತಃ ಡ್ವೇನ್ ಜಾನ್ಸನ್ ಅನ್ನು 'ಫಾಸ್ಟ್ ಆಂಡ್ ಫ್ಯೂರಿಯಸ್' ಸರಣಿಗೆ ವಾಪಸ್ ಬರುವಂತೆ ಕೇಳಿಕೊಂಡಿಕೊಂಡಿದ್ದಾರೆ. ಆದರೆ ತಾವು 'ಎಫ್‌ ಆಂಡ್ ಎಫ್' ಗೆ ಮರಳುವುದಿಲ್ಲ ಎಂದು ಡ್ವೇನ್ ಜಾನ್ಸನ್ ಖಚಿತಪಡಿಸಿದ್ದಾರೆ. ತಾವು 'ಎಫ್‌ ಆಂಡ್ ಎಫ್' ಸಿನಿಮಾ ಸರಣಿಗೆ ವಾಪಸ್ ಹೋಗದೇ ಇರಲು ಸ್ವತಃ ವೇನ್ ಡೀಸಲ್‌ ಕಾರಣ ಎಂದಿದ್ದಾರೆ.

ವಿನ್ ಡೀಸೆಲ್‌ಗೆ ನೇರವಾಗಿ ಹೇಳಿದ್ದೀನಿ: ದಿ ರಾಕ್

ವಿನ್ ಡೀಸೆಲ್‌ಗೆ ನೇರವಾಗಿ ಹೇಳಿದ್ದೀನಿ: ದಿ ರಾಕ್

ಸಿಎನ್‌ಎನ್‌ ಜೊತೆಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಡ್ವೇನ್ ಜಾನ್ಸನ್ ಅಲಿಯಾಸ್ ದಿ ರಾಕ್, ''ನಾನು ವೇನ್ ಡೀಸೆಲ್‌ಗೆ ನೇರವಾಗಿ ಹೇಳಿದ್ದೇನೆ ನಾನು ಇನ್ನು ಮುಂದೆ ಫಾಸ್ಟ್ ಆಂಡ್ ಫ್ಯೂರಿಯಸ್ ಸಿನಿಮಾದ ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು. ನಾನು ಆ ಸಿನಿಮಾದ ಪಾತ್ರವರ್ಗದವರಿಗೆ ಬೆಂಬಲಿಗನಾಗಿರುತ್ತೇನೆ, ಆ ಸಿನಿಮಾ ಸರಣಿ ಹಿಟ್ ಆಗಲಿ ಎಂದು ಆಶಿಸುತ್ತೇನೆ ಆದರೆ ಆ ಸಿನಿಮಾ ಸರಣಿಯಲ್ಲಿ ಮತ್ತೊಮ್ಮೆ ನಟಿಸುವುದಿಲ್ಲ'' ಎಂದಿದ್ದಾರೆ ಡ್ವೇನ್ ಜಾನ್ಸನ್.

ವೇನ್ ಡೀಸೆಲ್ ಅವಕಾಶವಾದಿ ವ್ಯಕ್ತಿ: ದಿ ರಾಕ್

ವೇನ್ ಡೀಸೆಲ್ ಅವಕಾಶವಾದಿ ವ್ಯಕ್ತಿ: ದಿ ರಾಕ್

ವೇನ್ ಡೀಸೆಲ್ರ ಇತ್ತೀಚಿನ ಸಾಮಾಜಿಕ ಜಾಲತಾಣ ಪೋಸ್ಟ್‌ ಬಗ್ಗೆಯೂ ಮಾತನಾಡಿರುವ ಡ್ವೇನ್ ಜಾನ್ಸನ್, ''ವೇನ್ ಡೀಸೆಲ್‌ನ ಆ ಪೋಸ್ಟ್ ಸಾಕು ಆತ ಎಂಥಹಾ ಲಾಭಕೋರ ವ್ಯಕ್ತಿ ಎಂದು ತಿಳಿಯುವುದಕ್ಕೆ. ತಮ್ಮ ಪೋಸ್ಟ್‌ನಲ್ಲಿ ಆತ ತನ್ನ ಮಕ್ಕಳು ಹಾಗೂ ನಿಧನ ಹೊಂದಿರುವ ಪಾಲ್ ವಾಕರ್ ಅನ್ನು ಎಳೆದು ತಂದಿದ್ದಾನೆ'' ಎಂದಿದ್ದಾರೆ.

ವೇನ್ ಡೀಸೆಲ್ ಬಹಿರಂಗ ಪತ್ರ

ವೇನ್ ಡೀಸೆಲ್ ಬಹಿರಂಗ ಪತ್ರ

ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಡ್ವೇನ್ ಜಾನ್ಸನ್‌ಗೆ ಬಹಿರಂಗ ಪತ್ರ ಬರೆದಿದ್ದ ವೇನ್ ಡೀಸೆಲ್, ''ಫಾಸ್ಟ್ ಆಂಡ್ ಫ್ಯೂರಿಯಸ್' ತನ್ನ ಕೊನೆಗೆ ಬಂದಿದೆ. ಈಗ ಹತ್ತನೇ ಫಾಸ್ಟ್ ಆಂಡ್ ಫ್ಯೂರಿಯಸ್ ನಿರ್ಮಾಣ ಆಗಬೇಕಿದೆ. ಈಗ ನಿನ್ನ ಅವಶ್ಯಕತೆ ಇದೆ. ನಿನ್ನನ್ನು ನನ್ನ ಮಕ್ಕಳು ಡ್ವೇನ್ ಅಂಕಲ್ ಎಂದು ಕರೆಯುತ್ತಾರೆ. ನೀನು ಹಾಗೂ ನನ್ನ ಕುಟುಂಬದವರು ಯಾವುದೇ ವಿಶೇಷ ಸಂದರ್ಭಗಳಿದ್ದರೂ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತೀರಿ. ಅಲ್ಲದೆ ನಾನು ಪೌಲ್ ವಾಕರ್‌ಗೆ ಮಾತು ಕೊಟ್ಟಿದ್ದೇನೆ, ಫಾಸ್ಟ್ ಆಂಡ್ ಫ್ಯೂರಿಯಸ್ ಗೆ ಒಂದು ಅದ್ಭುತ ಅಂತ್ಯ ಕೊಡುತ್ತೇನೆಂದು. ಹಾಗಾಗಿ ಈಗ ನಿನ್ನ ಅವಶ್ಯಕತೆ ಇದೆ. ಹಾಬ್ಸ್ ಪಾತ್ರವನ್ನು ನೀನಲ್ಲದೆ ಇನ್ನು ಯಾರೂ ಸಹ ಮಾಡಲಾರರು'' ಎಂದು ವೇನ್ ಡೀಸೆನ್ ಬರೆದುಕೊಂಡಿದ್ದರು. ಅದನ್ನು ಡ್ವೇನ್ ಜಾನ್ಸನ್‌ಗೆ ಟ್ಯಾಗ್ ಮಾಡಿದ್ದರು.

ನಾಲ್ಕು 'ಎಫ್‌ ಆಂಡ್ ಎಫ್' ಸಿನಿಮಾಗಳಲ್ಲಿ ನಟಿಸಿರುವ ರಾಕ್

ನಾಲ್ಕು 'ಎಫ್‌ ಆಂಡ್ ಎಫ್' ಸಿನಿಮಾಗಳಲ್ಲಿ ನಟಿಸಿರುವ ರಾಕ್

ಡ್ವೇನ್ ಜಾನ್ಸನ್ ಅಲಿಯಾಸ್ ದಿ ರಾಕ್ 2011ರಲ್ಲಿ ಬಿಡುಗಡೆ ಆದ 'ಫಾಸ್ಟ್ ಆಂಡ್ ಫ್ಯೂರಿಯಸ್ 5' ಸಿನಿಮಾದಲ್ಲಿ ಮೊದಲ ಬಾರಿಗೆ ಹಾಬ್ಸ್ ಪಾತ್ರದಲ್ಲಿ ನಟಿಸಿದ್ದರು. ಬಳಿಕ 2013, 2015, 2017 ರಲ್ಲಿ ಬಿಡುಗಡೆ ಆದ ಫಾಸ್ಟ್ ಆಂಡ್ ಫ್ಯೂರಿಯಸ್ ಸರಣಿಯ ಸಿನಿಮಾಗಳಲ್ಲಿ ನಟಿಸಿದರು. ಆದರೆ 2017 ರ ಸಿನಿಮಾ ಬಳಿಕ ಸಿನಿಮಾದಲ್ಲಿ ನಟಿಸುವುದರಿಂದ ಹಿಂದೆ ಸರಿದರು. ಆದರೆ 'ಫಾಸ್ಟ್ ಆಂಡ್ ಫ್ಯೂರಿಯಸ್‌' ಸಿನಿಮಾದ ತಮ್ಮ ಪಾತ್ರ ಹಾಬ್ಸ್ ಅನ್ನು ಆಧರಿಸಿ ತಾವೇ ಒಂದು ಸಿನಿಮಾ ನಿರ್ಮಾಣ ಮಾಡಿದರು. ಡ್ವೇನ್ ಜಾನ್ಸನ್ ನಿರ್ಮಾಣದ 'ಹಾಬ್ಸ್ ಆಂಡ್ ಶಾ' 2019 ರಲ್ಲಿ ಬಿಡುಗಡೆ ಆಗಿ ಹಿಟ್ ಆಯಿತು. ಸಿನಿಮಾದಲ್ಲಿ ಶಾ ಪಾತ್ರಧಾರಿಯಾಗಿ ಜೇಸನ್ ಸ್ಟಾಟಮ್ ನಟಿಸಿದ್ದರು.

ವಿಶ್ವದ ಅತಿ ಶ್ರೀಮಂತ ನಟ ಡ್ವೇನ್ ಜಾನ್ಸನ್

ವಿಶ್ವದ ಅತಿ ಶ್ರೀಮಂತ ನಟ ಡ್ವೇನ್ ಜಾನ್ಸನ್

2011ರಲ್ಲಿ ಡ್ವೇನ್ ಜಾನ್ಸನ್ ಮೊದಲ ಬಾರಿಗೆ ಫಾಸ್ಟ್ ಆಂಡ್ ಫ್ಯೂರಿಯಸ್ ಸಿನಿಮಾದಲ್ಲಿ ನಟಿಸಿದಾಗ ಅವರಿನ್ನು ಪೋಷಕ ನಟ ಅಷ್ಟೆ. ಆದರೆ ಈಗ ಡ್ವೇನ್ಸ್ ಜಾನ್ಸನ್ ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ನಟ. ನಟನೆಯಿಂದ ಡ್ವೇನ್ ಜಾನ್ಸನ್ ಸಂಪಾದಿಸುವಷ್ಟು ಹಣವನ್ನು ಪ್ರಪಂಚದ ಇನ್ನಾವ ನಟನೂ ಸಂಪಾದಿಸುವುದಿಲ್ಲ. ಡ್ವೇನ್ ಜಾನ್ಸನ್ ನಟಿಸಿರುವ 'ರೆಡ್ ನೋಟಿಸ್' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿ ಹಿಟ್ ಆಯಿತು. ಇದೀಗ 'ಬ್ಲ್ಯಾಕ್ ಆಡಮ್ಸ್' ಸಿನಿಮಾದಲ್ಲಿ ಡ್ವೇನ್ ನಟಿಸುತ್ತಿದ್ದಾರೆ. ಜೊತೆಗೆ ಡಿಸಿ ಲೀಗ್ ಆಫ್ ಸೂಪರ್ ಪೆಟ್ಸ್ ಹೆಸರಿನ ಕಾಮಿಕ್ಸ್‌ ಸಿನಿಮಾಕ್ಕೆ ತನ್ನ ದನಿ ನೀಡುತ್ತಿದ್ದಾರೆ.

More from Filmibeat

English summary
Actor Dwayne Johnson said he will never return to Fast and Furious movie franchise again. He called actor Vin Diesel is manipulator.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X