ಹಾಲಿವುಡ್ ನಟ ಡ್ವೇನ್ ಜಾನ್ಸನ್‌ಗೆ ಕೊರೊನಾ ಪಾಸಿಟಿವ್
ಹಾಲಿವುಡ್ ಸೂಪರ್ ಸ್ಟಾರ್ ನಟ ಡ್ವೇನ್ ಜಾನ್ಸನ್‌ಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಸ್ವತಃ ಡ್ವೇನ್ ಜಾನ್ಸನ್ ವಿಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪ್‌ಲೌಡ್ ಮಾಡಿದ್ದಾರೆ.
Recommended Video
''ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಕೊವಿಡ್ ಸೋಂಕು ತಗುಲಿದೆ ಕಳೆದ ಮೂರು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದೇವೆ' ಎಂದು ದಿ ರಾಕ್ ಖ್ಯಾತಿಯ ಜಾನ್ಸನ್ ಮಾಹಿತಿ ನೀಡಿದ್ದಾರೆ.
ಡ್ವೇನ್ ಜಾನ್ಸನ್, ಅವರ ಪತ್ನಿ ಹಾಗೂ ಇಬ್ಬರು ಪುತ್ರಿಯರಿಗೂ ಸೋಂಕು ತಗುಲಿದೆ. ವೈರಸ್ ಅಂಟಿಕೊಂಡಿರುವುದು ಖಚಿತವಾದ ಬಳಿಕ ವೈದ್ಯರು ಸಲಹೆ ಮೆರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

''ಕೊರೊನಾ ಪರಿಸ್ಥಿತಿಯ ಬಗ್ಗೆ ಅನುಭವ ಹಂಚಿಕೊಂಡಿರುವ ಡ್ವೇನ್ ಜಾನ್ಸನ್ ''ಕೊರೊನಾ ಸೋಂಕು ತಗುಲಿದೆ ಎಂದಾಗ ನನ್ನ ಕುಟುಂಬದ ಬಗ್ಗೆ ಬಹಳ ಚಿಂತೆಗೆ ಒಳಗಾಗಿದ್ದೆ. ನಂತರ ವೈದ್ಯರು ಸಲಹೆ ಹಾಗೂ ಅಗತ್ಯ ಚಿಕಿತ್ಸೆ ಪಡೆದ ಬಳಿಕ ನಿರಾಳ ಆಯಿತು'' ಎಂದು ರಾಕ್ ಹೇಳಿಕೊಂಡಿದ್ದಾರೆ.
ಕೊನೆಯದಾಗಿ ಜನಸಾಮಾನ್ಯರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಕುರಿತು ಮಾತನಾಡಿದ ದಿ ರಾಕ್ ''ಕೊರೊನಾ ವೈರಸ್ ಬಗ್ಗೆ ಜಾಗೃತಿ ವಹಿಸಿ, ಮಾರ್ಗಸೂಚಿಗಳನ್ನು ಪಾಲಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಹೆಚ್ಚು ಜನರು ಸೇರುವ ಕಡೆ ಎಚ್ಚರವಹಿಸಿ ಎಂದು ಸಲಹೆ ನೀಡಿದ್ದಾರೆ.


Click it and Unblock the Notifications











