ಮಕ್ಕಳಿಗಾಗಿ 26 ಲಕ್ಷ ರೂಪಾಯಿ ಸಿಗರೇಟ್ ಬಿಟ್ಟ ತಂದೆ!
ಮಕ್ಕಳಿಗಾಗಿ ತಂದೆ ತಾಯಿ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಇಲ್ಲೊಬ್ಬ ತಂದೆ ತನ್ನ ಮಕ್ಕಳಿಗಾಗಿ ತಾನು ಸೇದುತ್ತಿದ್ದ 26 ಲಕ್ಷ ರೂಪಾಯಿ ಮೌಲ್ಯದ ಸಿಗರೇಟುಗಳನ್ನು ಸೇದದೇ, ಅವುಗಳನ್ನು ದಾಸ್ತಾನು ಇಟ್ಟು ನಿಬ್ಬೆರಗಾಗುವಂತೆ ಮಾಡಿದ್ದಾನೆ.
ಹೌದು, ಇಂಗ್ಲೆಂಡ್ ಗಾಯಕ ನೋಲ್ ಗ್ಯಾಲಗರ್ ಎಂಬುವರು ಶ್ರೀಮಂತರಾಗಿದ್ದು, ದುಬಾರಿ ಬೆಲೆಯ Marlboro gold ಸಿಗರೇಟ್' ಸೇದುವ ಅಭ್ಯಾಸ ಇಟ್ಟುಕೊಂಡಿದ್ದರು. ಆದರೆ, ತನ್ನ ಮಕ್ಕಳು ಸಹ ಸಿಗರೇಟ್ ಸೇದುವುದನ್ನು ನೋಡಿದ ನೋಲ್ ಗ್ಯಾಲಗರ್ ಸಿಗರೇಟ್ ಸೇದುವುದನ್ನು ಬಿಟ್ಟು ಬಿಟ್ಟಿದ್ದರು.

ನೋಲ್ ಗ್ಯಾಲಗರ್ ದಾಸ್ತಾನು ಇಟ್ಟ ಎಲ್ಲ ಸಿಗರೇಟುಗಳ ಬೆಲೆ ಅಂದಾಜು 26 ಲಕ್ಷ ರೂಪಾಯಿ ಎಂದು ದಿ ಸನ್ ವರದಿ ಮಾಡಿದೆ. ಸಂಗ್ರಹವಾಗಿರುವ ದುಬಾರಿ ಬೆಲೆಯ ಸಿಗರೇಟುಗಳನ್ನು ಶೋಕೇಸ್ ರೀತಿ ಮಾಡಿ, ಸಿಗರೇಟ್ ತ್ಯಜಿಸುವ ಸಂಬಂಧ ಅಭಿಯಾನ ನಡೆಸುವುದಾಗಿ ನೋಲ್ ಗ್ಯಾಲಗರ್ ಹೇಳಿಕೊಂಡಿದ್ದಾರೆ. Marlboro gold ಸಿಗರೇಟ್ ಬೆಲೆ ಭಾರತದಲ್ಲಿ 300 ರೂಪಾಯಿ ಇದೆ. ಇದು ಅಮೆರಿಕನ್ ಕಂಪೆನಿಯ ಸಿಗರೇಟ್.


Click it and Unblock the Notifications











