ಅಂಡರ್ ವೇರೇ ಹಾಕಿರಲಿಲ್ಲ ಆ ತಾರೆ ಶೇಮ್ ಶೇಮ್
ಕ್ಯಾನೆ (Cannes) ಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಹಿಂಗಾದ್ರೆ ಹೆಂಗೆ ಶಿವಾ. ಹಾಲಿವುಡ್ ತಾರೆಯೊಬ್ಬರ ಮಾನ ಮೂರು ಕಾಸಿಗೆ ಹರಾಜಾಗಿದೆ. ಕ್ಯಾನೆಯಲ್ಲಿ ಸಣ್ಣದಾಗಿ ಸುದ್ದಿಯಾದರೂ ಅದು ಮಾಧ್ಯಮಗಳಲ್ಲಿ ಆಟಂ ಬಾಂಬ್ ನಂತೆ ಸಿಡಿಯುತ್ತದೆ. ಇನ್ನು ಈ ರೀತಿ ಆದರೆ ಕಥೆ ಮುಗಿದೇ ಹೋಯಿತು.
ಹಾಲಿವುಡ್ ತಾರೆ ಇವಾ ಲಂಗೋರಿಯಾ ತಿಳಿನೀಲಿ ಗೌನ್ ನಲ್ಲಿ ಎಲ್ಲರ ಗಮನಸೆಳೆದರು. ಆದರೆ ಅವರಿಗೇ ಅರಿವಿಲ್ಲದಂತೆ ಅವರ ಖಾಸಗಿ ಆಸ್ತಿ ಬಹಿರಂಗವಾಗಿದೆ. ಇನ್ನೂ ಸೋಜಿಗದ ಸಂಗತಿ ಎಂದರೆ ಅವರು ಅಂಡರ್ ವೇರ್ ಹಾಕಿರಲಿಲ್ಲ ಎಂಬುದು! ಕೆಂಪುಹಾಸಿನ ಮೇಲೆ ಹೆಜ್ಜೆ ಹಾಕುತ್ತಾ ತಮ್ಮ ಖಾಸಗಿ ಆಸ್ತಿಪಾಸ್ತಿಯನ್ನು ಬಹಿರಂಗಪಡಿಸಿದ್ದೂ ಅಲ್ಲದೆ ಅದೇ ಚಿತ್ರಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಹಾಕಿಕೊಂಡಿದ್ದಾರೆ.

ಇಂತಹ ಸಂದರ್ಭದಲ್ಲಿ ಅಚಾನಕ್ ಆಗಿಯೋ ಅಥವಾ ಉದ್ದೇಶಪೂರ್ವಕವಾಗಿಯೋ ತಮ್ಮ ಸೀಕ್ರೆಟ್ ಪಾರ್ಟ್ಸ್ ಹೊರಗೆ ಇಣುಕಿಬಿಡುತ್ತವೆ. ಆಗ ಆಗುವ ಆಭಾಸ ಅಷ್ಟಿಷ್ಟಲ್ಲ ಬಿಡಿ. ಕೆಲವರಿಗೆ ಇರಿಸುಮುರಿಸು. ಇನ್ನೂ ಕೆಲವರಿಗೆ ಕನಸು ನನಸು! ಮತ್ತೂ ಕೆಲವರ ನೋಟಕ್ಕೆ, ಅಭಿರುಚಿಗೆ ಬಿಟ್ಟ ವಿಚಾರವಿದು. ಚಿಕ್ಕಮಕ್ಕಳು ನೋಡಿದರಂತೂ ವೇದಿಕೆ ಬಳಿಯೇ ಶೇಮ್ ಶೇಮ್ ಅಂದರೂ ಅನ್ನಬಹುದು.
ಅಂದಹಾಗೆ ಈ ಅಚಾನಕ್ ಘಟನೆಯನ್ನು ಇಂಗ್ಲಿಷ್ ಪರಿಭಾಷೆಯಲ್ಲಿ ಹೇಳುವುದಾದರೆ wardrobe malfunction ಎನ್ನುತ್ತಾರೆ. ಒಮ್ಮೆಮ್ಮೊ ಪ್ರಚಾರಕ್ಕಾಗಿಯೂ ಈ ಟ್ರಿಕ್ ಬಳಸುವುದುಂಟು. ಅದೇ ರೀತಿ ಇವಾ ಅವರು ಮಾಡಿಕೊಂಡಿದ್ದಾರೆ.


Click it and Unblock the Notifications











