twitter
    For Quick Alerts
    ALLOW NOTIFICATIONS  
    For Daily Alerts

    11 ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್: ಈ ಕಾಮಿಡಿ ಚಿತ್ರದಲ್ಲಿ ಅಂಥದ್ದೇನಿದೆ?

    |

    RRR ಚಿತ್ರದ 'ನಾಟು ನಾಟು' ಗೀತೆ 95ನೇ ಅಕಾಡೆಮಿ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮಿನೇಟ್ ಆಗಿರುವುದಕ್ಕೆ ಇಡೀ ಭಾರತೀಯ ಚಿತ್ರರಂಗವೇ ಸಂಭ್ರಮಿಸಿತ್ತು. ಆದರೆ ಹಾಲಿವುಡ್‌ನ ಅದೊಂದು ಸಿನಿಮಾ ಬರೋಬ್ಬರಿ 11 ವಿಭಾಗದಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅಂದರೆ 11 ವಿಭಾಗಗಳಲ್ಲಿ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ಅಂಥಾದ್ದು ಏನಿದೆ ಎಂದು ಕೆಲವರು ಈಗ ಮುಗಿಬಿದ್ದು ನೋಡುತ್ತಿದ್ದಾರೆ.

    ಹಾಲಿವುಡ್‌ನ 'ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್' ಸಿನಿಮಾ ಹಲವು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿದೆ. ಅಮೇರಿಕಾದ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಉತ್ತಮ ಚಿತ್ರ, ಉತ್ತಮ ನಿರ್ದೇಶಕ, ಉತ್ತಮ ನಟಿ, ಉತ್ತಮ ಒರಿಜಿನಲ್ ಸಾಂಗ್, ಉತ್ತಮ ಪೋಷಕ ನಟ, ಉತ್ತಮ ಪೋಷಕ ನಟಿ, ಉತ್ತಮ ಕಾಸ್ಟ್ಯೂಮ್ ಡಿಸೈನರ್, ಉತ್ತಮ ಸ್ಕ್ರೀನ್‌ಪ್ಲೇ ಹೀಗೆ 11 ವಿಭಾಗಗಳಲ್ಲಿ ಆಸ್ಕರ್‌ಗೆ ನಾಮಿನೇಟ್ ಆಗಿದೆ. ಡೇನಿಯಲ್ ಕ್ವಾನ್ ಹಾಗೂ ಡೇನಿಯಲ್ ಸ್ಕಿನರ್ಟ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಿಚ್ಚೆಲೆ ಯೆಹ್, ಸ್ಟೇಫನಿ ಹು ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

    ಭಾರತದ ಎರಡು ಡಾಕ್ಯುಮೆಂಟರಿಗಳ ಜೊತೆ ಆಸ್ಕರ್ ಹೊಸ್ತಿಲಿಗೆ ಬಂದ 'ನಾಟು ನಾಟು'ಭಾರತದ ಎರಡು ಡಾಕ್ಯುಮೆಂಟರಿಗಳ ಜೊತೆ ಆಸ್ಕರ್ ಹೊಸ್ತಿಲಿಗೆ ಬಂದ 'ನಾಟು ನಾಟು'

    Everything Everywhere All at Once has 11 Oscar nominations

    ಇತ್ತೀಚೆಗೆ ಈ ಸಿನಿಮಾ ಓಟಿಟಿ ಫ್ಲಾಟ್‌ಫಾರ್ಮ್‌ಗೂ ಬಂದಿದೆ. ಆಸ್ಕರ್ ಪ್ರಶಸ್ತಿಗೆ 11 ವಿಭಾಗದಲ್ಲಿ ನಾಮಿನೇಟ್ ಆದ ನಂತರ ಚಿತ್ರಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ. ಸಿನಿಮಾ ನೋಡಿದವರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಇನ್ನು ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದ್ದ 'ಚೆಲ್ಲೋ ಶೋ' ಸಿನಿಮಾ ನಾಮಿನೇಟ್ ಆಗುವಲ್ಲಿ ವಿಫಲವಾಗಿತ್ತು. ಆದರೆ RRR ಚಿತ್ರದ 'ನಾಟು ನಾಟು' ಹಾಡಿಗೆ ಪ್ರಶಸ್ತಿ ಸಿಗುವ ನಿರೀಕ್ಷೆ ಇದೆ.

    English summary
    The Daniels 'Everything Everywhere All at Once' is the most nominated film at this year’s Oscars with 11 nominations including Best Film. Know more.
    Friday, January 27, 2023, 19:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X