ಮತ್ತೆ ಬೆಚ್ಚಿ ಬೀಳಿಸಲು ಬಂದ 'ಇವಿಲ್ ಡೆಡ್' ಸರಣಿ ಸಿನಿಮಾ: ಮಧ್ಯರಾತ್ರಿ 11.50ಕ್ಕೆ ಪ್ರೀಮಿಯರ್ ಶೋ
ಹಾರರ್ ಸಿನಿಮಾಗಳು ಅಂದ್ರೆ ಬಹುತೇಕರಿಗೆ ಭಯ. 'ಇವಿಲ್ ಡೆಡ್' ಸರಣಿ ಸಿನಿಮಾಗಳನ್ನು ನೆನಪಿಸಿಕೊಂಡರೆ ಮೈ ಜುಮ್ ಅನ್ನಿಸದೇ ಇರಲ್ಲ. ಇದೀಗ ಈ ಸರಣಿಯ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ವಾರ ಸಿನಿಮಾ ವಿಶ್ವದಾದ್ಯಂತ ತೆರಗಪ್ಪಳಿಸಲಿದ್ದು ಮಧ್ಯರಾತ್ರಿಯಿಂದಲೇ ಕೆಲವೆಡೆ ಪ್ರೀಮಿಯರ್ ಶೋಗಳು ಆರಂಭವಾಗಲಿದೆ. ಹಾರರ್ ಸಿನಿಪ್ರೇಮಿಗಳು ಈ ಸಿನಿಮಾ ನೋಡಲು ಬಹಳ ಕಾತರರಾಗಿದ್ದಾರೆ.
'ಇವಿಲ್ ಡೆಡ್' ಫ್ರಾಂಚೈಸಿಯಿಂದ 80ರ ದಶಕದ ಆರಂಭದಲ್ಲಿ 'ದಿ ಇವಿಲ್ ಡೆಡ್' ಎನ್ನುವ ಸಿನಿಮಾ ಬಂದಿತ್ತು. ಅಲ್ಲಿಂದ ಮುಂದೆ ಈ ಸರಣಿಯ ಮತ್ತೆರಡು ಸಿನಿಮಾಗಳು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ್ದವು. ಇದೀಗ 'ಇವಿಲ್ ಡೆಡ್ ರೈಸ್' ಸಿನಿಮಾ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಈ ಸರಣಿ ಸಿನಿಮಾಗಳನ್ನು ನೋಡಿದರೆ ಎದೆ ಝಲ್ ಎನಿಸುತ್ತೆ. ಇನ್ನು ಥಿಯೇಟರ್‌ನಲ್ಲಿ ಕತ್ತಲು ಕೋಣೆಯಲ್ಲಿ ಮತ್ತಷ್ಟು ಭಯ ಬೀಳೋದು ಗ್ಯಾರೆಂಟಿ. ಅಂತದ್ದರಲ್ಲಿ ಮಧ್ಯ ರಾತ್ರಿ ಶೋ ಅಂದ್ರೆ ಕಷ್ಟ ಕಷ್ಟ.

ಈಗಾಗಲೇ ವಿದೇಶಗಳಲ್ಲಿ 'ಇವಿಲ್ ಡೆಡ್ ರೈಸ್' ಪ್ರೀಮಿಯರ್ ಶೋಗಳು ಶುರುವಾಗಿದೆ. ಭಾರತದಲ್ಲಿ ಮುಂಬೈ, ಹೈದರಾಬಾದ್ ಸೇರಿದಂತೆ ಕೆಲವೆಡೆ ಇಂದು(ಏಪ್ರಿಲ್ 20) ಮಧ್ಯರಾತ್ರಿ 11.50ಕ್ಕೆ ಮೊದಲ ಪ್ರದರ್ಶನ ಶುರುವಾಗಿದೆ. ಹಾರರ್ ಥ್ರಿಲ್ಲರ್ ಸಿನಿಮಾಗಳನ್ನು ನೋಡುವುದು ಕೆಲವರಿಗೆ ಸಖತ್ ಥ್ರಿಲ್ ಕೊಡುತ್ತದೆ. ಅಂತಹವರು ಈಗಾಗಲೇ ಟಿಕೆಟ್ ಬುಕ್ ಮಾಡಿಕೊಂಡು 'ಇವಿಲ್ ಡೆಡ್ ರೈಸ್' ಸಿನಿಮಾ ನೋಡಲು ಕಾಯುತ್ತಿದ್ದಾರೆ.
ಲೀ ಕ್ರೊನಿನ್ ಈ ಸೂಪರ್ ನ್ಯಾಚುರಲ್ ಹಾರರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟ್ರೈಲರ್ ನೋಡುಗರಿಗೆ ಸಖತ್ ಥ್ರಿಲ್ ಕೊಟ್ಟಿತ್ತು. ಸಿನಿಮಾ ಮೇಲೆ ಕುತೂಹಲ ಕೆರಳುವಂತೆ ಮಾಡಿತ್ತು. ಬರೋಬ್ಬರಿ 10 ವರ್ಷಗಳ ನಂತರ 'ಇವಿಲ್ ಡೆಡ್' ಸರಣಿ ಸಿನಿಮಾ ಬರ್ತಿರುವುದು ಸಹಜವಾಗಿಯೇ ನಿರೀಕ್ಷೆ ಹುಟ್ಟಾಕ್ಕಿದೆ. ಎಲ್ಲಿಸಾ ಸುಥರ್‌ಲೆಂಡ್, ಲಿಲಿ ಸುಲ್ಲಿವನ್, ಮಾರ್ಗನ್ ಡೇವಿಯಸ್ 'ಇವಿಲ್ ಡೆಡ್ ರೈಸ್' ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ರಾಬರ್ಟ್ ಜಿ ಟಾಪೆರ್ಟ್ 'ಇವಿಲ್ ಡೆಡ್ ರೈಸ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸ್ಟೀಫನ್ ಮೆಕ್ಕಾನ್ ಸಂಗೀತ ಚಿತ್ರಕ್ಕಿದೆ. 4 ವರ್ಷಗಳ ಹಿಂದೆ ಈ ಸಿನಿಮಾ ಘೋಷಣೆ ಆಗಿತ್ತು. ಕೊರೊನಾ ಲಾಕ್‌ಡೌನ್‌ನಿಂದ ಸಿನಿಮಾ ಚಿತ್ರೀಕರಣ ತಡವಾಗಿ ಕೊನೆಗೂ ಈಗ ಬಿಡುಗಡೆ ಆಗುತ್ತಿದೆ. ಇನ್ನು ಟ್ರೈಲರ್ ನೋಡಿದರೆ ಸರಣಿಯ ಮೊದಲ ಸಿನಿಮಾ ಕಥೆಯನ್ನು ಕೊಂಚ ಹೋಲುವಂತಿದೆ. ಈಗಾಗಲೇ ಹೊರ ದೇಶಗಳಲ್ಲಿ ಸಿನಿಮಾ ಪ್ರದರ್ಶನವಾಗಿದ್ದು ಒಳ್ಳೆ ರೆಸ್ಪಾನ್ಸ್, ರಿವ್ಯೂ ಸಿಕ್ಕಿದೆ.
ಹಾಲಿವುಡ್ ಹಾರರ್ ಸಿನಿಮಾಗಳಲ್ಲಿ ರಕ್ತವನ್ನು ಎತ್ತೇಚ್ಛವಾಗಿ ಹರಿಸಲಾಗುತ್ತದೆ. 'ಇವಿಲ್ ಡೆಡ್ ರೈಸ್' ಚಿತ್ರಕ್ಕಾಗಿ 6500 ಲೀಟರ್ ನಕಲಿ ರಕ್ತವನ್ನು ಬಳಸಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಈ ಬಾರಿ ಸಿನಿಮಾ ಮತ್ತಷ್ಟು ಭಯಂಕರವಾಗಿ ಮೂಡಿ ಬಂದಿರುವ ಸಾಧ್ಯತೆಯಿದೆ. ಟ್ರೈಲರ್ ನೋಡಿದಾಗಲೇ ಕೆಲವರು ಬೆಚ್ಚಿ ಬಿದ್ದಿದ್ದರು. ಇನ್ನು ಸಿನಿಮಾ ನೋಡುವವರ ಕಥೆಯೇನು ಎನ್ನುವ ಮಾತುಗಳು ಕೇಳಿಬರ್ತಿದೆ. ಇಂಟರ್‌ವಲ್ ಇಲ್ಲದೇ ಸತತ 2 ಗಂಟೆಗಳ ಕಾಲ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ.

ಡೇವ್ ಗಾರ್ಬೆಟ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ವಾರ್ನರ್ ಬ್ರೋಸ್ ಸಂಸ್ಥೆ ಚಿತ್ರವನ್ನು ವಿಶ್ವದಾದ್ಯಂತ ವಿತರಣೆ ಮಾಡುತ್ತಿದೆ. ಬಹುಕೋಟಿ ವೆಚ್ಚದಲ್ಲಿ 'ಇವಿಲ್ ಡೆಡ್ ರೈಸ್' ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಜೂನ್ ವೇಳೆಗೆ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮೊದಲಿಗೆ ಈ ಚಿತ್ರವನ್ನು ನೇರವಾಗಿ ಓಟಿಟಿಗೆ ತರುವ ಲೆಕ್ಕಾಚಾರ ನಡೆದಿತ್ತು. ಆದರೆ ವಾರ್ನರ್ ಬ್ರೋಸ್ ಸಂಸ್ಥೆ ವಿತರಣೆ ಹಕ್ಕು ಖರೀಸಿದಿ ಥಿಯೇಟರ್‌ನಲ್ಲಿ ರಿಲೀಸ್ ಮಾಡಲು ಮುಂದಾಯಿತು.


Click it and Unblock the Notifications











