For Quick Alerts
    ALLOW NOTIFICATIONS  
    For Daily Alerts

    ತೆರಿಗೆ ವಂಚನೆ: ಚೀನಾದ ಖ್ಯಾತ ನಟಿಗೆ ಬಿತ್ತು 46 ಮಿಲಿಯನ್ ಡಾಲರ್ ದಂಡ

    |

    ಚೀನಾದ ಖ್ಯಾತಿ ನಟಿ ಜೆಂಗ್ ಶುವಾಂಗ್ ಗೆ ತೆರಿಗೆ ವಂಚನೆ ಆರೋಪದ ಮೇಲೆ 299 ಮಿಲಿಯನ್ ಯುವಾನ್ (46 ಮಿಲಿಯನ್ ಡಾಲರ್) ದಂಡ ವಿಧಿಸಲಾಗಿದೆ. ನಟಿ ಮನರಂಜನಾ ಕ್ಷೇತ್ರದಿಂದ ಭಾರಿ ಪ್ರಮಾಣದಲ್ಲಿ ಹಣ ಸಂಪಾದಿಸುತ್ತಿದ್ದರೂ ತೆರಿಗೆ ಕಟ್ಟದೆ ವಂಚನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ದೊಡ್ಡ ಮೊತ್ತದ ದಂಡ ವಿಧಿಸಿದೆ. ಅಷ್ಟೆಯಲ್ಲ ಎಲ್ಲಾ ವಿಧದ ಕಾರ್ಯಕ್ರಮಗಳಿಂದ ನಟಿ ಜಿಂಗ್ ಶುವಾಂಗ್ ಅವರಿಗೆ ನಿಷೇಧ ಹೇರಲಾಗಿದೆ.

    ನ್ಯಾಷನಲ್ ರೇಡಿಯೋ ಮತ್ತು ಟೆಲಿವಿಷನ್ ಅಡ್ಮಿನಿಸ್ಟ್ರೇಷನ್ ಎಲ್ಲಾ ಪ್ರಸಾರಕರು ಮತ್ತು ವಿಡಿಯೋ ಪ್ಲಾಟ್ ಫಾರ್ಮ್ಸ ಗಳಲ್ಲಿ ಯಾವುದೇ ಪ್ರದರ್ಶನಗಳಲ್ಲಿ ಜಿಂಗ್ ಶುವಾಂಗ್ ಭಾಗಿ ನಿಷೇಧಿಸಲಾಗಿದೆ ಎಂದು ಚೀನಾದ ರಾಜ್ಯ ಮಾಧ್ಯಮ ಸಂಸ್ಥೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಜೊತೆಗೆ ಈಗಾಗಲೇ ನಟಿಸಿರುವ ಸಿನಿಮಾಗಳನ್ನು ಇನ್ಮುಂದೆ ಪ್ರಸಾರಮಾಡುವಂತ್ತಿಲ್ಲ ಎಂದು ಸೂಚಿಸಿದೆ.

    ಶಾಂಘೈ ತೆರಿಗೆ ಪ್ರಾಧಿಕಾರ ಏಪ್ರಿಲ್ ತಿಂಗಳಿಂದ ಜೆಂಗ್ ಶುವಾಂಗ್ ಅವರನ್ನು ತೆರಿಗೆ ವಿಚಾರವಾಗಿ ಪ್ರಶ್ನೆ ಮಾಡುತ್ತಾ ಬಂದಿದೆ. ಆಕೆಯ ಮಾಜಿ ಪತಿ ಜಾಂಗ್ ಹೆಂಗ್ ಈ ಬಗ್ಗೆ ಬಹಿರಂಗ ಪಡಿಸಿದ ಬಳಿಕ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ಅಧಿಕಾರಿಗಳು ಭಾರಿ ಪ್ರಮಾಣದ ದಂಡ ವಿಧಿಸಿದ್ದಾರೆ. 2019 ಮತ್ತು 2020 ಅವಧಿಯಲ್ಲಿ ತೆರಿಗೆ ಉಲ್ಲಂಘಸಿದ ಆರೋಪದಿಂದ 30 ವರ್ಷದ ನಟಿ ಜೆಂಗ್ ಶುವಾಂಗ್ ದಂಡತೆತ್ತಿದ್ದಾರೆ.

    2009ರಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದ ಜೆಂಗ್ ಚೀನಾದಲ್ಲಿ ಭಾರಿ ಪ್ರಸಿದ್ಧಿ ಗಳಿಸಿದ್ದರು. ಬಳಿಕ ಜನಪ್ರಿಯ ಸರಣಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ಮುಂದೆ ಜಿಂಗ್ ಗೆ ಯಾವುದೇ ಅವಕಾಶ ನೀಡದಂತೆ ನಿರ್ಬಂಧ ಹೇರಲಾಗಿದೆ.

    ಈ ಹಿಂದೆ ನಟಿ ಜೆಂಗ್ ಬಾಡಿಗೆ ತಾಯ್ತನದ ಹಗರಣದಿಂದಾಗಿ ಅಂತರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿದ್ದರು. ಸಿಎನ್ ಎನ್ ವರದಿ ಪ್ರಕಾರ ಜೆಂಗ್ ಶುವಾಂಗ್ ಮತ್ತು ಮಾಜಿ ಪತಿ ಜಾಂಗ್ ಹೆಂಗ್ ಇಬ್ಬರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಇಬ್ಬರನ್ನು ನೇಮಕ ಮಾಡಿಕೊಂಡಿದ್ದರು. ಮಕ್ಕಳಾದ ಬಳಿಕ ನಟಿ ಜೆಂಗ್ ಶುವಾಂಗ್ ಪತಿ ಹಾಂಗ್ ಹೆಂಗ್ ಮತ್ತು ಇಬ್ಬರು ಮಕ್ಕಳನ್ನು ಯು ಎಸ್ ನಲ್ಲಿ ಬಿಟ್ಟಿದ್ದಾರೆ ಎಂದು ಮಾಜಿ ಪತಿ ಆರೋಪ ಮಾಡಿದ್ದರು.

    ಚೀನಾದ ಹೊಸ ಸೈಬರ್ ನಿಯಂತ್ರಕ ನಿಯಾಮವಳಿಗಳನ್ನು ಶುಕ್ರವಾರ (ಆ.27) ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸೆಲೆಬ್ರಿಟಿಗಳ ರ್ಯಾಂಕಿಂಗ್ ಪಟ್ಟಿಯನ್ನು ನಿಷೇಧಮಾಡಲಾಗಿದೆ. ಜೊತೆಗೆ ಸೆಲೆಬ್ರಿಟಿ ಫ್ಯಾನ್ ಕ್ಲಬ್ ಮತ್ತು ಮ್ಯಾನೇಜೆ ಮೆಂಟ್ ಏಜೆನ್ಸಿ ಗಳ ಮೇಲು ನಿಯಂತ್ರಣ ಬಿಗಿಗೊಳಿಸಲಾಗಿದೆ ಎಂದು ವರದಿಯಾಗಿದೆ. ವಿಡಿಯೋ ಸ್ಟ್ರೀಮಿಂಗ iQiyi ಗುರುವಾರ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದೆ.

    English summary
    Famous Chinese Actress Zheng Shuang Fined $46 millions for tax evasion.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X