'19ನೇ ವಯಸ್ಸಿನಲ್ಲಿ ನನ್ನ ಮೇಲೆ ಪದೇ ಪದೇ ಅತ್ಯಾಚಾರವಾಗಿತ್ತು': ನೋವು ಬಿಚ್ಚಿಟ್ಟ ಗಾಯಕಿ

'19ನೇ ವಯಸ್ಸಿನಲ್ಲಿ ನನ್ನ ಮೇಲೆ ಪದೇ ಪದೇ ಅತ್ಯಾಚಾರ ನಡೆದಿತ್ತು' ಎನ್ನುವ ನೋವಿನ ಘಟನೆಯನ್ನು ಹಾಲಿವುಡ್ ನ ಖ್ಯಾತ ಗಾಯಕಿ ಲೇಡಿ ಗಾಗಾ ಈಗ ಬಹಿರಂಗ ಪಡಿಸಿದ್ದಾರೆ. ಲೇಡಿ ಗಾಗಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಸೂಪರ್ ಹಿಟ್ ಹಾಡುಗಳ ಮೂಲಕ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಗಾಗಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಾನು ಅನುಭವಿಸಿದ ನೋವಿನ ಘಟನೆಯನ್ನು ಬಹಿರಂಗ ಪಡಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ನಂತರ ಗಾಗಾ ತುಂಬ ಸಮಯ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರಂತೆ. ಚಿಕ್ಕ ವಯಸ್ಸಿನಲ್ಲಿಯೆ ಅತ್ಯಾಚಾರಕ್ಕೆ ಒಳಗಾದ ಕಾರಣ ಈ ಆಘಾತದಿಂದ ಹೊರಬರಲು ಸಾಧ್ಯವಾಗಿರಲ್ಲಿಲವಂತೆ. ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ಖಾಯಿಲೆಗೆ ತುತ್ತಾಗಿದ್ದರಂತೆ.

ನಂತರ ಕೆಲವೆ ಸಮಯದಲ್ಲಿ ಲೇಡಿ ಗಾಗಾ ಏಕಾಏಕಿ ಪ್ರಸಿದ್ಧಿ ಪಡಯುತ್ತಾರಂತೆ. ಇಡೀ ವಿಶ್ವಕ್ಕೆ ಅದ್ಭುತ ಗಾಯನದ ಮೂಲಕ ಲೇಡಿ ಗಾಗಾ ಮೋಡಿ ಮಾಡುತ್ತಾರೆ. ಆದರೆ ಅತ್ಯಾಚಾರಕ್ಕೆ ಒಳಗಾದ ನಂತರ ಗಾಗಾ ಅನುಭವಿಸಿದ ನೋವನ್ನು ಸಹ ಹಂಚಿಕೊಂಡಿದ್ದಾರೆ. ದೇಹದ ಪ್ರತಿಯೊಂದು ಭಾಗದಲ್ಲೂ ನೋವು ಕಾಣಿಸಿಕೊಳ್ಳುತ್ತಿತ್ತಂತೆ.

Famous Singer Lady Gaga Reveals She Was Raped At The Age Of 19

ಅಲ್ಲದೆ ಸಿಕ್ಕಾಪಟ್ಟೆ ಆಯಾಸವಾಗುತ್ತಿತ್ತಂತೆ. ಇದರಿಂದ ಹೊರಬರಲು ಗಾಗಾ ಮಾತ್ರೆಗಳ ಮೊರೆಹೋಗಿದ್ದರಂತೆ. ಅನೇಕರು ಮಾತ್ರೆ ಸೇವನೆಗೆ ಹೆದರುತ್ತಾರೆ, ಆದರೆ ನನಗೆ ಮಾತ್ರೆಗಳು ಸಹಾಯಮಾಡಿದೆ. ಹಾಗಾಗಿ ಅದರ ಸುತ್ತ ಇರುವ ಕಳಂಕ ತೊಡೆದು ಹಾಕಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

More from Filmibeat

English summary
Famous singer Lady Gaga reveals she was raped at the age of 19. after she was raped she suffered from PTSD.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X