ಗಾಯಕಿಯ ದುರ್ವತನೆ: ಅಭಿಮಾನಿ ಮುಖಕ್ಕೆ ಮೂತ್ರ ವಿಸರ್ಜನೆ

ಇತ್ತೀಚೆಗೆ ಸಾಕಷ್ಟು ಕಲಾವಿದರು, ಸಂಗೀತಗಾರರು ಲೈವ್ ಕಾನ್ಸರ್ಟ್‌ಗಳನ್ನು ಮಾಡೋದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ ಕೂಡ. ಜನಪ್ರೀಯತೆ ಪಡೆದಿರೋ ಅದೆಷ್ಟೋ ಪ್ರಖ್ಯಾತ ಸಿಂಗರ್ಸ್ ಗಳು ತಮ್ಮ ಅಭಿಮಾನಿಗಳನ್ನು ಮೆಚ್ಚಿಸಲು ವಿಶೇಷ ಸಂದರ್ಭಗಳಲ್ಲಿ ಈ ರೀತಿ ಮ್ಯೂಸಿಕ್ ಲೈವ್ ಕಾನ್ಸರ್ಟ್‌ಗಳನ್ನು ಆಯೋಜಿಸುತ್ತಾರೆ. ದೊಡ್ಡ ಮಟ್ಟದಲ್ಲಿ ಈ ಕಾರ್ಯಕ್ರಮಗಳನ್ನು ನಡೆಸುವ ಅದೆಷ್ಟೋ ಮಂದಿ ಅಭಿಮಾನಿಗಳನ್ನು ಕೆಲವೊಮ್ಮೆ ಸ್ಟೇಜ್ ಮೇಲೆ ಕರೆಯೊದುಂಟು. ಈ ಸಂದರ್ಭದಲ್ಲಿ ಅವರೊಂದಿಗೆ ಹಾಡಿಸೋದು, ಸೆಲ್ಫಿ ನೀಡೋದು, ಹೆಚ್ಚೆಂದರೆ ಅವರನ್ನು ತಬ್ಬಿಕೊಂಡು ಫ್ಯಾನ್ಸ್‌ಗೆ ಖುಷಿ ಪಡಿಸುತ್ತಾರೆ. ಆದರೆ ಇಲ್ಲೊಬ್ಬ ಅಮೆರಿಕದ ಖ್ಯಾತ ಗಾಯಕಿ ತನ್ನದೇ ಲೈವ್ ಕಾನ್ಸರ್ಟ್‌ನಲ್ಲಿ ಅಸಹ್ಯಕರವಾಗಿ ವರ್ತಿಸಿ ಎಲ್ಲರ ಟೀಕೆಗೆ ಕಾರಣವಾಗಿದ್ದಾರೆ. ಅಸಲಿಗೆ ಆಕೆ ಮಾಡಿದ್ದು ಏನು ಮುಂದೆ ಓದಿ...

ಅಮೆರಿಕದಲ್ಲಿ ಮ್ಯೂಸಿಕ್‌ ಇಷ್ಟಪಡುವರು ಅದೆಷ್ಟೋ ಮಂದಿ ಇದ್ದಾರೆ. ಇದೇ ಕಾರಣಕ್ಕಾಗಿ ಅಲ್ಲಿ ಪದೇ ಪದೇ ಮ್ಯೂಸಿಕಲ್ ನೈಟ್ಸ್, ಮ್ಯೂಸಿಕ್ ಕಾನ್ಸರ್ಟ್‌ಗಳನ್ನು ಆಯೋಜನೆ ಮಾಡಲಾಗುತ್ತದೆ. ಅಂತೆಯೇ ಇತ್ತೀಚೆಗೆ ಖ್ಯಾತ ಗಾಯಕಿ, ಬರಹಗಾರ್ತಿ ಸೋಫಿಯಾ ಉರಿಸ್ಟ ಅವರ ಲೈವ್ ಕಾನ್ಸರ್ಟ್‌ಅನ್ನು ಆಯೋಜಿಸಲಾಗಿತ್ತು. ಸೋಫಿಯಾ ಉರಿಸ್ಟಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರ ಸಂಗೀತ ಕಾರ್ಯಕ್ರಮ ಎಂದರೇ ಲೆಕ್ಕವಿಲ್ಲದಷ್ಟು ಜನ ಬಂದು ಸೇರುತ್ತಾರೆ. ಅಂತೆಯೇ ಇತ್ತೀಚೆಗೆ ನಡೆದ ಇವರ ಸಂಗೀತ ಕಾರ್ಯಕ್ರಮಕ್ಕೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಸಂಗೀತ ಪ್ರೀಯರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಗಾಯಕಿ ಸೋಫಿಯಾ ಉರಿಸ್ಟ ತನ್ನ ಅಭಿಮಾನಿಯೊಬ್ಬನ್ನನ್ನು ವೇದಿಕೆಗೆ ಕರೆದು ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಎಲ್ಲರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಕೇಳೊದಕ್ಕೆ ಇದು ಅಸಹ್ಯ ಎನ್ನಿಸಿದರು ಇದು ನಿಜ. ಅಮೇರಿಕಾದಲ್ಲಿ ಆಗಾಗ ಸೋಫಿಯಾ ಉರಿಸ್ಟ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ. ಆದರೆ ಯಾವತ್ತೂ ಇಂತಹ ದುರ್ವರ್ತನೆ ತೋರಿರಲಿಲ್ಲ. ಹೀಗಾಗಿಯೇ ಈಕೆಯ ಸಂಗೀತಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಆದರೆ ಇತ್ತೀಚೆಗೆ ನಡೆದ ಈ ಕಾರ್ಯಕ್ರಮದಲ್ಲಿ ಸೋಫಿಯಾಗೆ ಅದೇನಾಯಿತೋ ಗೊತ್ತಿಲ್ಲ. ಸ್ಟೇಜ್ ಕೆಳಗೆ ಸೋಫಿಯಾ ಸಂಗೀತವನ್ನು ಎಂಜಾಯ್ ಮಾಡುತ್ತಿದ್ದ ಅಭಿಮಾನಿಯನ್ನು ಸ್ವತಃ ಸೋಫಿಯಾ ಅವರೇ ಸ್ಟೇಜ್‌ಗೆ ಕರೆಯುತ್ತಾರೆ. ಅಭಿಮಾನಿ ಕೂಡ ತುಂಬಾ ಖುಷಿಯಿಂದ ಆಗಮಿಸುತ್ತಾನೆ. ಬಂದವನನ್ನು ಅಲ್ಲೇ ಕೆಳಗೆ ಮಲಗಿಸಿ ಸೋಫಿಯಾ ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದಕ್ಕೆ ಅಲ್ಲಿ ನೆರೆದಿದ್ದವರು ಕೂಡ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.

Famous singer urinated on a fans face during her performance

ಅಲ್ಲದೇ ಸೋಫಿಯಾ ಹೀಗೆ ಮಾಡಿರುವುದಕ್ಕೆ ಕ್ಷಮೆ ಯಾಚಿಸಬೇಕು ಎಂಬ ಒತ್ತಾಯ ಹೆಚ್ಚಾದ ಬೆನ್ನಲ್ಲೆ ಸೋಫಿಯಾ ಕೂಡ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ತನ್ನ ನಡೆಯ ಬಗ್ಗೆ ಕ್ಷಮೆ ಕೇಳಿರುವ ಸೋಫಿಯಾ, "ಈ ಸಂದರ್ಭದಲ್ಲಿ ಯಾರನ್ನೂ ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲಾ" ಎಂದು ಬರೆದುಕೊಂಡಿದ್ದಾರೆ. ಹಿಂದೆ ಯಾವತ್ತೂ ಹೀಗೆ ವರ್ತಿಸದ ಸೋಫಿಯಾ ಜನರನ್ನು ಸೆಳೆಯೋದಕ್ಕೆ ಏನೋ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾರೆ.

Famous singer urinated on a fans face during her performance

ಸೋಫಿಯಾ ಉರಿಸ್ಟ ಕಾರ್ಯಕ್ರಮದಲ್ಲಿ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದವರು ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಸೋಫಿಯಾ ಈ ಕಾರ್ಯಕ್ರಮ ಮಾಡುವಾಗ ತುಂಬಾ ಉತ್ಸುಕರಾಗಿದ್ದರು. ಆದರೆ ಅವರಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲಾ. ನಮ್ಮ ಮುಂದಿನ ಕಾರ್ಯಕ್ರಮದಲ್ಲಿ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ"ಎಂದಿದ್ದಾರೆ. ಅಲ್ಲದೇ ಜನರಿಗೆ ಈ ವಿಷಯವಾಗಿ ಬೇಸರವಾಗಿರೋದು ಗೊತ್ತಿದೆ. ಹೀಗಾಗಿ ನಾವು ಕೂಡ ನಿಮ್ಮೊಂದಿಗೆ ಕ್ಷಮೆ ಕೇಳುತ್ತಿದ್ದೇವೆ ಎಂದಿದ್ದಾರೆ.

More from Filmibeat

English summary
Famous singer urinated on a fans face during her performance. Later apologises. Here is what happened
Read more about: hollywood singer ಗಾಯಕಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X