For Quick Alerts
  ALLOW NOTIFICATIONS  
  For Daily Alerts

  'ಫಾಸ್ಟ್ ಆಂಡ್ ಫ್ಯೂರಿಯಸ್ 9' ಭಾರತದಲ್ಲಿ ಬಿಡುಗಡೆ ದಿನಾಂಕ ನಿಗದಿ: 'ಬ್ಲ್ಯಾಕ್ ವಿಡೊ' ಯಾವಾಗ?

  |

  ವಿಶ್ವದ ಜನಪ್ರಿಯ ಸಿನಿಮಾ ಸರಣಿಗಳಲ್ಲಿ ಒಂದಾಗಿರುವ 'ಫಾಸ್ಟ್ ಆಂಡ್ ಫ್ಯೂರಿಯಸ್'ನ ಸರಣಿಯ ಒಂಬತ್ತನೇ ಸಿನಿಮಾ ಭಾರತದಲ್ಲಿ ಬಿಡುಗಡೆ ಆಗಲು ದಿನಾಂಕ ನಿಗದಿಪಡಿಸಿಕೊಂಡಿದೆ.

  'ಫಾಸ್ಟ್ ಆಂಡ್ ಫ್ಯೂರಿಯಸ್ 9' ಸಿನಿಮಾವು ಈಗಾಗಲೇ ಅಮೆರಿಕ, ಕೆನಡ ಸೇರಿದಂತೆ ಕೆಲವು ದೇಶಗಳಲ್ಲಿ ಬಿಡುಗಡೆ ಆಗಿ ಕೋಟ್ಯಂತರ ಹಣ ಗಳಿಸಿದೆ. ಆದರೆ ಭಾರತದಲ್ಲಿ ಚಿತ್ರಮಂದಿರಗಳು ತೆರೆದಿರದೇ ಇದ್ದ ಕಾರಣದಿಂದ ಇಲ್ಲಿ ಬಿಡುಗಡೆ ಆಗಿರಲಿಲ್ಲ.

  ಇದೀಗ ಕೊರೊನಾ ಎರಡನೇ ಅಲೆ ಭಾರತದಲ್ಲಿ ನಿಧಾನಕ್ಕೆ ಇಳಿಕೆ ಆಗುತ್ತಿದ್ದು, ಚಿತ್ರಮಂದಿರಗಳು ಕೆಲವು ರಾಜ್ಯಗಳಲ್ಲಿ ತೆರೆಯುತ್ತಿವೆ. ಹಾಗಾಗಿ 'ಫಾಸ್ಟ್ ಆಂಡ್ ಫ್ಯೂರಿಯಸ್ 9'ನ ಭಾರತದ ವಿತರಕರು ಸಿನಿಮಾವನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಸಿನಿಮಾವು ಆಗಸ್ಟ್ 05 ರಂದು ಭಾರತದಾದ್ಯಂತ ಇಂಗ್ಲೀಷ್, ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

  ರೇಸಿಂಗ್ ಕಾರುಗಳೇ ಸಿನಿಮಾದ ಮುಖ್ಯ ಅಂಶ

  ರೇಸಿಂಗ್ ಕಾರುಗಳೇ ಸಿನಿಮಾದ ಮುಖ್ಯ ಅಂಶ

  ದರೋಡೆ, ಪೊಲೀಸ್, ಅಂತರಾಷ್ಟ್ರೀಯ ಭದ್ರತೆ, ತಂತ್ರಜ್ಞಾನ ಆಧಾರಿತ ಭಯೋತ್ಪಾದನೆ ಹಾಗೂ ಎಲ್ಲಕ್ಕಿಂತಲೂ ಮುಖ್ಯವಾಗಿ ರೇಸಿಂಗ್ ಕಾರುಗಳನ್ನು ಬಳಸಿಕೊಂಡು 'ಫಾಸ್ಟ್ ಆಂಡ್ ಫ್ಯೂರಿಯಸ್'ನ ಕತೆ ಹೆಣೆಯಲಾಗಿರುತ್ತದೆ. ಈ ವರೆಗೆ ಎಂಟು 'ಫಾಸ್ಟ್ ಆಂಡ್ ಫ್ಯೂರಿಯಸ್' ಸಿನಿಮಾಗಳು ಬಂದಿದ್ದು, ಈಗ ಒಂಬತ್ತನೇ ಸಿನಿಮಾ ಬಿಡುಗಡೆ ಆಗಿದೆ.

  ಅದೇ ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗುತ್ತದೆ

  ಅದೇ ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗುತ್ತದೆ

  ಈವರೆಗಿನ ಎಲ್ಲ 'ಫಾಸ್ಟ್ ಆಂಡ್ ಫ್ಯೂರಿಯಸ್' (ಒಂದು ಸಿನಿಮಾ ಬಿಟ್ಟು) ವಿನ್ ಡೀಸೆಲ್ ನಾಯಕ. ಮೊದಲಿನಿಂದಲೂ ಅದೇ ಪಾತ್ರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಭರ್ಜರಿ ಆಕ್ಷನ್ ಜೊತೆಗೆ ತುಸು ರೊಮಾನ್ಸ್ ಹಾಗೂ ಸೆಂಟಿಮೆಂಟ್ ಬೆರೆಸಿ ಹದವಾದ ಚಿತ್ರಕತೆ ಹೆಣೆದು ಈ ಸಿನಿಮಾಗಳನ್ನು ನಿರ್ಮಾಣ ಮಾಡಲಾಗಿರುತ್ತದೆ.

  ಸ್ಕಾರ್ಲೆಟ್ ಜಾನ್ಸನ್ ನಟಿಸುವ ನತಾಶಾ ರೊಮನಾಫ್ ಪಾತ್ರ

  ಸ್ಕಾರ್ಲೆಟ್ ಜಾನ್ಸನ್ ನಟಿಸುವ ನತಾಶಾ ರೊಮನಾಫ್ ಪಾತ್ರ

  ಮಾರ್ವೆಲ್ ಸ್ಟುಡಿಯೋಸ್‌ನ ನತಾಶಾ ರೊಮನಾಫ್ ಪಾತ್ರ ಆಧರಿಸಿದ ಸೋಲೊ ಸಿನಿಮಾ 'ಬ್ಲ್ಯಾಕ್ ವಿಡೊ' ಜುಲೈ 9 ಕ್ಕೆ ಬಿಡುಗಡೆ ಆಗಿದೆ. ಆದರೆ ಭಾರತದ ವೀಕ್ಷಕರಿಗೆ ಸಿನಿಮಾ ನೋಡುವ ಅವಕಾಶ ಸಿಕ್ಕಿಲ್ಲ. ವಿಶ್ವದ ಕೆಲವೆಡೆ ಚಿತ್ರಮಂದಿರಗಳಲ್ಲಿ, ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಆದರೆ ಭಾರತದ ಡಿಸ್ನಿ ಹಾಟ್‌ಸ್ಟಾರ್ ಬಳಕೆದಾರರಿಗೆ ಈ ಸಿನಿಮಾ ದೊರೆತಿಲ್ಲ.

  ಟೀಮ್ ಇಂಡಿಯಾ ಆಟಗಾರ್ತಿಯ ಅತ್ಯದ್ಭುತ ಕ್ಯಾಚ್ ಫುಲ್ ವೈರಲ್ | Filmibeat Kannada
  ಅಕ್ಟೋಬರ್ 08ಕ್ಕೆ ಭಾರತದಲ್ಲಿ ಬಿಡಗುಡೆ

  ಅಕ್ಟೋಬರ್ 08ಕ್ಕೆ ಭಾರತದಲ್ಲಿ ಬಿಡಗುಡೆ

  ಕೆಲವು ಕಾರಣಗಳಿಂದಾಗಿ 'ಬ್ಲ್ಯಾಕ್ ವಿಡೊ' ಸಿನಿಮಾವು ಅಕ್ಟೋಬರ್ 8 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆಯಂತೆ ಅದೂ ಚಿತ್ರಮಂದಿರಗಳು ಮತ್ತು ಡಿಸ್ನಿ ಹಾಟ್‌ಸ್ಟಾರ್ ಒಟಿಟಿ ಎರಡರಲ್ಲೂ ಒಟ್ಟಿಗೆ ಈ ಸಿನಿಮಾ ಬಿಡಗುಡೆ ಆಗಲಿದೆ ಎನ್ನಲಾಗುತ್ತಿದೆ. 'ಅವೆಂಜರ್ಸ್', 'ಐರನ್ ಮ್ಯಾನ್' ಸರಣಿಗಳಲ್ಲಿ ಕಾಣಿಸಿಕೊಳ್ಳುವ ನತಾಶಾ ರೊಮನಾಫ್ ಅಥವಾ ಬ್ಲ್ಯಾಕ್ ವಿಡೊ ಪಾತ್ರದ ಮೊದಲ ಸೋಲೊ ಸಿನಿಮಾ ಇದಾಗಿದೆ.

  English summary
  Fast And Furious 9 movie scheduled to release on August 09 in India in several languages. Black Widow movie will release on October 08.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X