ಕನ್ನಡದಲ್ಲಿ ಬರುತ್ತಿದೆ 'ಫಾಸ್ಟ್ ಅಂಡ್ ಫ್ಯೂರಿಯಸ್' ಚಿತ್ರ
ಹಾಲಿವುಡ್ ನ ಜನಪ್ರಿಯ ಸಿನಿಮಾ ಸರಣಿ 'ಫಾಸ್ಟ್ ಅಂಡ್ ಫ್ಯೂರಿಯಸ್' ಈಗ ಕನ್ನಡದಲ್ಲಿ ಬರುತ್ತಿದೆ. ಆಕ್ಷನ್ ಪ್ರಿಯರ ರೋಮಾಂಚಕ ಸಿನಿಮಾ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದೆ.
'ಫಾಸ್ಟ್ ಅಂಡ್ ಫ್ಯೂರಿಯಸ್' ಸರಣಿಯ ಹೊಸ ಸಿನಿಮಾ 'ಹೋಬ್ಬ್ಸ್ ಅಂಡ್ ಷಾ' ಕನ್ನಡಕ್ಕೆ ಡಬ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜಪೂರಿ, ಮಲೆಯಾಳಂ, ಗುಜರಾತಿ ಹೀಗೆ ಭಾರತದ ಈ ಹತ್ತು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.
ಕನ್ನಡದಲ್ಲಿ ಡಬ್ಬಿಂಗ್ ವಿರುದ್ಧದ ಹೋರಾಟಗಳು ಕಡಿಮೆ ಆಗುತ್ತಿದ್ದಂತೆ, ಒಂದರ ನಂತರ ಒಂದು ಸಿನಿಮಾಗಳ ಬರುತ್ತಿದೆ.

'ಫಾಸ್ಟ್ ಅಂಡ್ ಫ್ಯೂರಿಯಸ್' ಸಿನಿಮಾದ ಹೊಸ ಪೋಸ್ಟರ್ ಗಳು ಬಿಡುಗಡೆಯಾಗಿವೆ. ಡೇವಿಡ್ ಲೇಯ್ತ್ಚ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ದ್ವಾಯ್ನ್ ಜಾನ್ಸನ್ ಹಾಗೂ ಜಾಸನ್ ಸತತಂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. 'ಫಾಸ್ಟ್ ಅಂಡ್ ಫ್ಯೂರಿಯಸ್' ಸರಣಿಯ 11ನೇ ಸಿನಿಮಾ ಇದಾಗಿದೆ.
2 ಆಗಸ್ಟ್ 2019ರಲ್ಲಿ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಅದೇ ತಿಂಗಳು ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳು ಕೂಡ ರಿಲೀಸ್ ಆಗುತ್ತಿವೆ.


Click it and Unblock the Notifications











