twitter
    For Quick Alerts
    ALLOW NOTIFICATIONS  
    For Daily Alerts

    'ಫಾಸ್ಟ್ ಅಂಡ್ ಫ್ಯೂರಿಯಸ್ 7' ಬಾಕ್ಸ್ ಆಫೀಸ್ ಚಿಂದಿ

    By Rajendra
    |

    ಹಾಲಿವುಡ್ ಆಕ್ಷನ್ ಚಿತ್ರಗಳನ್ನು ಎದುರುನೋಡುತ್ತಿದ್ದ ಭಾರತೀಯ ಸಿನಿ ಪ್ರೇಮಿಗಳಿಗೆ 'ಫಾಸ್ಟ್ ಅಂಡ್ ಫ್ಯೂರಿಯಸ್ 7' ಚಿತ್ರ ಭರ್ಜರಿ ಮನರಂಜನೆ ನೀಡುತ್ತಿದೆ. ಏಪ್ರಿಲ್ 2ರಂದು ತೆರೆಗೆ ಬಂದ ಈ ಚಿತ್ರ ಭಾರತದ ಬಾಕ್ಸ್ ಆಫೀಸನ್ನು ಮೊದಲ ದಿನವೇ ಚಿಂದಿ ಉಡಾಯಿಸಿದೆ.

    ಭಾರತದಲ್ಲಿ ಇದುವರೆಗೂ ಯಾವ ಹಾಲಿವುಡ್ ಚಿತ್ರವೂ ಮಾಡದ ಮೋಡಿ ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರ ಮಾಡಿದೆ. ಭಾರತದಲ್ಲಿ ಮೊದಲ ದಿನವೇ ಅತ್ಯಧಿಕ ಕಲೆಕ್ಷನ್ ಮಾಡಿದ ಹಾಲಿವುಡ್ ಚಿತ್ರವಾಗಿ 'ಫ್ಯೂರಿಯಸ್' ಚಿತ್ರ ಹೊರಹೊಮ್ಮಿದೆ. [ಜೇಮ್ಸ್ ಬಾಂಡ್ ಹೊಚ್ಚ ಹೊಸ ಟೀಸರ್ ಪೋಸ್ಟರ್]

    Fast & Furious 7
    ಮೊಟ್ಟಮೊದಲ ದಿನವೇ ಈ ಚಿತ್ರ ದೇಶದಾದ್ಯಂತ ರು.12 ಕೋಟಿ ಕಲೆಕ್ಷನ್ ಮಾಡಿದೆ. ಇದುವರೆಗೂ ಭಾರತದಲ್ಲಿ ಬಿಡುಗಡೆಯಾದ ಹಾಲಿವುಡ್ ಚಿತ್ರಗಳಲ್ಲಿ ಅತ್ಯಧಿಕ ಕಲೆಕ್ಷನ್ ಇದಾಗಿದೆ. ಶುಕ್ರವಾರ ಗುಡ್ ಫ್ರೈಡೇ ಹಾಗೂ ವಾರಾಂತ್ಯದ ರಜೆಗಳ ಕಾರಣ ಬಾಕ್ಸ್ ಆಫೀಸಲ್ಲಿ ಇನ್ನಷ್ಟು ಸದ್ದು ಮಾಡುವ ಸಾಧ್ಯತೆಗಳು ಇವೆ.

    'ಫಾಸ್ಟ್ ಅಂಡ್ ಫ್ಯೂರಿಯಸ್ 7' ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಈ ಚಿತ್ರದಲ್ಲಿ ಅಭಿನಯಿಸಿದ್ದ ಹಾಲಿವುಡ್ ಸ್ಟಾರ್ ಪೌಲ್ ವಾಕರ್ ಅವರು ಕಾರು ಅಪಘಾತದಲ್ಲಿ ಮೃತಪಟ್ಟ ಕಾರಣ ಸಿನಿಮಾ ಬಿಡುಗಡೆ ತಡವಾಯಿತು.

    ವಿಶ್ವದಾದ್ಯಂತ ಸಾವಿರಾರು ಥಿಯೇಟರ್ ಗಳಲ್ಲಿ ಈ ಚಿತ್ರ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸರಿಸುಮಾರು ರು. 1 ಶತಕೋಟಿ ಡಾಲರ್ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಈ ಚಿತ್ರಕ್ಕೆ ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಇನ್ನಷ್ಟು ಕಲೆಕ್ಷನ್ ಗೆ ದಾರಿ ಮಾಡಿಕೊಡಬಹುದು. ಆಕ್ಷನ್ ಪ್ರಿಯರಿಗೆ ಹೇಳಿಮಾಡಿಸಿದ ಸಿನಿಮಾ ಇದು. (ಏಜೆನ್ಸೀಸ್)

    English summary
    Before the release of Furious 7, it was predicted that the movie will become one of the highest grosser of the year. Ever since the Fast and Furious franchise started, it has been increasing it's fan following and this seventh instalment is all the more special as it is the last film of Paul Walker.
    Saturday, April 4, 2015, 12:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X