For Quick Alerts
  ALLOW NOTIFICATIONS  
  For Daily Alerts

  'ಗುಡ್ ಬೈ ಮದರ್ಲ್ಯಾಂಡ್': ಅಫ್ಘಾನಿಸ್ತಾನಕ್ಕೆ ವಿದಾಯ ಹೇಳಿದ ನಿರ್ದೇಶಕಿಯ ಭಾವುಕ ಪೋಸ್ಟ್

  |

  ಅಫ್ಘಾನಿಸ್ತಾನದ ಭೀಕರ ಪರಿಸ್ಥಿತಿಯಿಂದ ಅನೇಕರು ತಾಯ್ನಾಡು ತೊರೆದು ಬೇರೆ ಬೇರೆ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ರಕ್ತಪಾತವೇ ಹರಿಯುತ್ತಿದೆ. ತಾಲಿಬಾನಿಗಳ ಹಿಂಸೆ ತಾಳಲಾರದೇ ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಇದೀಗ ಅಫ್ಘಾನಿಸ್ತಾನದ ಖ್ಯಾತ ನಿರ್ದೇಶಕಿ ಮತ್ತು ಛಾಯಾಗ್ರಾಹಕಿ ರೋಯಾ ಹೈದರಿ ತನ್ನ ತಾಯ್ನಾಡಿನಿಂದ ಪಲಾಯನ ಮಾಡಿದ್ದಾರೆ. ಮಾತೃಭೂಮಿ ತೊರೆದ ಬಗ್ಗೆ ರೋಯಾ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

  ಹುಟ್ಟೂರು ಬಿಟ್ಟು ಹೋಗುತ್ತಿರುವ ಬಗ್ಗೆ ನಿರ್ದೇಶಕಿ ರೋಯಾ ಭಾವುಕರಾಗಿದ್ದಾರೆ. "ನನ್ನ ಧ್ವನಿ ಮುಂದುವರೆಸಲು ನಾನು ನನ್ನ ಇಡೀ ಜೀವನವನ್ನು, ನನ್ನ ಮನೆಯನ್ನು ತೊರೆಯುತ್ತಿದ್ದೇನೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಅಫ್ಘಾನಿಸ್ತಾನದ ಭೀಕರ ಪರಿಸ್ಥಿತಿ; ನಮ್ಮನ್ನು ಕೊಲ್ಲಲು ಬರ್ತಿದ್ದಾರೆ ಎಂದು ಓಡಿದ ನಿರ್ದೇಶಕಿಯ ವಿಡಿಯೋ ವೈರಲ್ಅಫ್ಘಾನಿಸ್ತಾನದ ಭೀಕರ ಪರಿಸ್ಥಿತಿ; ನಮ್ಮನ್ನು ಕೊಲ್ಲಲು ಬರ್ತಿದ್ದಾರೆ ಎಂದು ಓಡಿದ ನಿರ್ದೇಶಕಿಯ ವಿಡಿಯೋ ವೈರಲ್

  1996 ಮತ್ತು 2001ರ ಸಮಯದಲ್ಲಿ ತಾಲಿಬಾನಿಗಳ ವಶವಾಗಿದ್ದ ಅಘ್ಘಾನಿಸ್ತಾನದಲ್ಲಿ ಮಹಿಳೆಯರನ್ನು ಅನೇಕ ಕಡೆ ನಿಷೇಧಿಸಲಾಗಿತ್ತು. ಒಂಟಿಯಾಗಿ ಮಹಿಳೆಯರು ಹೊರಹೋಗುವ ಹಾಗೆ ಇರಲಿಲ್ಲ. ಬುರ್ಖಾ ಧರಿಸಿದೆ ಮನೆಯಿಂದ ಹೊರಬರುವ ಹಾಗಿರಲಿಲ್ಲ. ಇದೀಗ ಮತ್ತೆ ತಾಲಿಬಾನಿ ಉಗ್ರರ ವಶಕ್ಕೆ ಸಿಕ್ಕಿರುವ ಅಫ್ಘಾನಿಸ್ತಾನ ನಲುಗಿಹೋಗಿದೆ. ಮತ್ತದೆ ಪರಿಸ್ಥಿತಿ ಮರುಕಳಿಸಿದೆ. ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡುವುದನ್ನು ತಾಲಿಬಾನ್ ನಿಷೇದಮಾಡಿದೆ. ಮಹಿಳಾ ಪತ್ರಕರ್ತರು ಕೆಲಸ ಮಾಡದಂತೆ ನಿರ್ಬಂಧ ಹೇರಿದೆ.

  ನಿರ್ದೇಶಕಿ ಹೈದರಿ ಇಂಥ ಕೆಟ್ಟ ಪರಿಸ್ಥಿತಿಯಿಂದ ಪಾರಾಗಲು ದೇಶ ತೊರೆಯುತ್ತಿದ್ದಾರೆ. ಈ ಬಗ್ಗೆ ರೋಯಾ ಹೈದರಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ದೇಶದಿಂದ ಹೊರಹೋಗಲು ಕಾಬೂಲ್ ಏರ್ಪೋರ್ಟ್ ಒಂದೇ ಮಾರ್ಗ ಎಂದು ಹೇಳಿದ್ದಾರೆ. "ಮತ್ತೊಮ್ಮೆ ನಾನು ನನ್ನ ತಾಯ್ನಾಡು ಬಿಟ್ಟು ಓಡುತ್ತಿದ್ದೇನೆ. ಮತ್ತೊಮ್ಮೆ ನಾನು ನನ್ನ ಬದುಕನ್ನು ಶೂನ್ಯದಿಂದ ಪ್ರಾರಂಭ ಮಾಡಬೇಕು" ಎಂದು ಹೇಳಿದ್ದಾರೆ.

  ದೇಶ ಬಿಟ್ಟು ಹೋಗುವಾಗ ಜೊತೆಯಲ್ಲಿ ತನ್ನ ಕ್ಯಾಮರಾವನ್ನು ಮಾತ್ರ ಹಿಡಿದು ಹೊರಟಿರುವುದಾಗಿ ಹೇಳಿದ್ದಾರೆ. ಭಾರವಾದ ಹೃದಯದಿಂದ ದೇಶಬಿಡುತ್ತಿರುವ ಬಗ್ಗೆ ರೋಯಾ ಭಾವುಕರಾಗಿದ್ದಾರೆ. ನಾನು ನನ್ನ ಕ್ಯಾಮರಾವನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದೇನೆ. ಭಾರವಾದ ಹೃದಯದಿಂದ ಮಾತೃಭೂಮಿಗೆ ವಿದಾಯ ಹೇಳುತ್ತಿದ್ದೇನೆ. ಮತ್ತೆ ನಾವು ಭೇಟಿಯಾಗುವವರೆಗು" ಎಂದು ಬರೆದುಕೊಂಡಿದ್ದಾರೆ.

  ಅಲ್ ಜಜೀರಾ ವರದಿ ಮಾಡಿರುವ ಪ್ರಕಾರ ನಿರ್ದೇಶಕಿ ರೋಯಾ, 5 ದಿನಗಳ ಹಿಂದೆ ಕಾಬೂಲ್ ನಿಂದ ತಪ್ಪಸಿಕೊಂಡು ಪ್ರಾನ್ಸ್ ಗೆ ಬಂದು ನೆಲೆಸಿದ್ದಾರೆ ಎನ್ನಲಾಗಿದೆ. ತಾಲಿಬಾನ್ ಆಡಳಿತದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಭಯದಿಂದ ನಿರ್ದೇಶಕಕ್ಕೆ ದೇಶ ತೊರೆದಿದ್ದಾರೆ ಎಂದು ವರದಿ ಮಾಡಿದೆ.

  ಸಾವು ಒಮ್ಮೆ ಮಾತ್ರ ಬರುತ್ತದೆ. ನಾನು ಅವರ ಸಾಯಿಸುತ್ತಾರೆ ಎಂದು ಭಯ ಪಡುವುದಿಲ್ಲ. ನಾನು ಹೆದರಿ ಪಂಜರದಲ್ಲಿ ಇದ್ದರೆ ಹೊರಗೆ ಹೋಗಿ ನನ್ನ ಕೆಲಸವನ್ನು ಮುಂದುವರೆಸಲು ಸಾಧ್ಯವಿಲ್ಲ" ಎಂದಿದ್ದಾರೆ. ರೋಯಾ ಟ್ವೀಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

  ಇತ್ತೀಚಿಗೆ ಮತ್ತೋರ್ವ ನಿರ್ದೇಶಕಿ ಸಹ್ರಾ ಕರೀಮಿ ತಾಲಿಬಿನಿಗಳಿಂದ ತಪ್ಪಿಸಿಕೊಂಡು ಓಡುತ್ತಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ತಾಲಿಬಾನಿಗಳು ನನ್ನನ್ನು ಕೊಲ್ಲಲು ಬರ್ತಿದ್ದಾರೆ ಎಂದು ರಸ್ತೆಯಲ್ಲಿ ಓಡುತ್ತಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ದಯವಿಟ್ಟು ಇತ್ತ ಗಮನ ಹರಿಸಿ ಎಂದು ಸಹ್ರಾ ಕರೀಮಿ ಪೋಸ್ಟ್ ಹಾಕಿದ್ದರು.

  "ಅವರು ನಮ್ಮ ಜನರನ್ನು ಕೊಲ್ಲುತ್ತಿದ್ದಾರೆ. ಅವರು ಅನೇಕ ಮಕ್ಕಳನ್ನು ಅಪಹರಿಸಿದ್ದಾರೆ. ಹುಡುಗಿಯನ್ನು ಮಾರಾಟ ಮಾಡುತ್ತಿದ್ದಾರೆ. ಮಾನವೀಯ ಬಿಕ್ಕಟ್ಟು. ಇಡೀ ಪ್ರಪಂಚ ಮೌನವಾಗಿದೆ. ಅವರು ಎಲ್ಲಾ ಕಲೆಯನ್ನು ಬ್ಯಾನ್ ಮಾಡಿದ್ದಾರೆ. ನಾನು ಮತ್ತು ಇನ್ನು ಕೆಲವು ನಿರ್ದೇಶಕರು ಅವರ ಹಿಟ್ ಲಿಸ್ಟ್ ನಲ್ಲಿದ್ದೀವಿ" ಎಂದು ಬರೆದುಕೊಂಡಿದ್ದರು. ಸಹ್ರಾ ಪೋಸ್ಟ್ ಅನೇಕ ಪ್ರತಿಕ್ರಿಯೆ ನೀಡಿ ಬೆಂಬಲ ಸೂಚಿಸಿದ್ದರು.

  English summary
  Film Director Roya Heydari shares heartbreaking post on leaving Afghanistan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X