Oscars 2025 ; ಈ ವರ್ಷ ಯಾರ ಪಾಲಾಗಬಹುದು ಆಸ್ಕರ್ ? ರೇಸ್‍ನಲ್ಲಿ ಮುಂಚೂಣಿಯಲ್ಲಿರುವವರು ಯಾರು ?

ಇನ್ನೇನು ಕೆಲವೇ ಗಂಟೆ, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾಗಲಿದೆ.ಚಿತ್ರರಂಗದ ಅನೇಕರ ಕನಸು ನನಸಾಗಲಿದೆ.ಇನ್ನು ಹಲವರ ಕನಸು ಭಗ್ನವಾಗಲಿದೆ.ಇದರ ನಡುವೆ ಈ ವರ್ಷ ಯಾರೆಲ್ಲ ಗೆಲ್ಲಬಹುದು ಯಾರ ಮುಡಿಯನ್ನು ಆಸ್ಕರ್ ಸೇರಬಹುದು ಎನ್ನುವ ಲೆಕ್ಕಾಚಾರ ಕೂಡ ಜೋರಾಗಿದೆ. ಸಪ್ತಸಾಗರದಾಚೆ ನ್ಯೂಜೆರ್ಸಿ, ಮಿಚಿಗನ್, ಅರಿಜೋನಾ, ಸೇರಿ ಅನೇಕ ಕಡೆ ಆಸ್ಕರ್ ಹೆಸರಿನಲ್ಲಿ ಬೆಟ್ಟಿಂಗ್ ಕೂಡ ನಡೆಯುತ್ತಿದೆ.

ಈ ವರ್ಷದ ಲೆಕ್ಕಾಚಾರದ ಪ್ರಕಾರ ಎಮಿಲಿಯಾ ಪೆರೆಜ್ ಚಿತ್ರ ಆಸ್ಕರ್ ಅಂಗಳದಲ್ಲಿ ಮುಂಚೂಣಿಯಲ್ಲಿದೆ. 13 ವಿಭಾಗಗಳಲ್ಲಿ ಈ ಚಿತ್ರ ನಾಮ ನಿರ್ದೇಶನಗೊಂಡಿದೆ. ಇನ್ನು ಐ ಆಮ್ ಸ್ಟಿಲ್ ಹಿಯರ್ ಚಿತ್ರ ಕೂಡ ಅನೇಕರ ಫೇವರಿಟ್. ಹಾಲಿವುಡ್‌ನ ಹಲವು ಪಂಡಿತರ ಪ್ರಕಾರ ಆಸ್ಕರ್ ಗೆಲ್ಲುವ ಅರ್ಹತೆ ಮತ್ತು ಯೋಗ್ಯತೆ ಎರಡು ಈ ಚಿತ್ರಕ್ಕಿದೆ.

Final Oscar 2025 Predictions Who Will Win at the 97th Academy Awards

ಇನ್ನು ಕಳೆದ ವರ್ಷ ಒಪೆನ್ ಹೈಮರ್ ಚಿತ್ರ ಒಂದಲ್ಲ ಎರಡಲ್ಲ ಬದಲಿಗೆ ಏಳು ವಿಭಾಗದಲ್ಲಿ ಪ್ರಶಸ್ತಿಗಳನ್ನು ಗೆದ್ದಿತ್ತು. ಈ ಮೂಲಕ ಹೊಸ ಇತಿಹಾಸವನ್ನು ಬರೆದಿತ್ತು. ಆದರೆ ಈ ಬಾರಿ ಈ ಪವಾಡವನ್ನು ನಿರೀಕ್ಷೆ ಮಾಡಲು ಅಸಾಧ್ಯ. ಅನೋರಾ ಮತ್ತು ದಿ ಬ್ರೂಟಲಿಸ್ಟ್ ಹೆಚ್ಚೆಂದರೆ ಮೂರು ವಿಭಾಗದಲ್ಲಿ ಗೆಲ್ಲಬಹುದು ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಆ ಪೈಕಿ ಸೀನ್ ಬೇಕರ್ ನಿರ್ದೇಶನದ ಅನೋರಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆಲ್ಲುತ್ತೆ ಎನ್ನುವ ಭವಿಷ್ಯವಾಣಿ ಹಲವರದ್ದು.

ಇನ್ನು ಬೆಸ್ಟ್ ಹೀರೋ ಮತ್ತು ಹೀರೋಯಿನ್ ವಿಭಾಗದಲ್ಲಿ ಅನೋರಾದಲ್ಲಿ ತಮ್ಮ ಅಭಿನಯಕ್ಕೆ ಮೈಕಿ ಮ್ಯಾಡಿಸನ್‌ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆಯಬಹುದು. ಇವರನ್ನು ಹೊರತು ಪಡಿಸಿದರೆ ಡೆಮಿ ಮೂರ್‌ಗೆ ಅದೃಷ್ಟ ಒಲಿಯಬಹುದು. ಇನ್ನು ಬೆಸ್ಟ್ ಆಕ್ಟರ್ ಪ್ರಶಸ್ತಿಯನ್ನು ಎ ಕಂಪ್ಲೀಟ್ ಅನ್‌ನೌನ್‌ ಚಿತ್ರಕ್ಕೆ ಟಿಮೋಥಿ ಚಲಮೆಟ್ ಪಡೆಯಬಹುದು. ಇಲ್ಲವಾದಲ್ಲಿ ದಿ ಬ್ರೂಟ್ ಲಿಸ್ಟ್ ಚಿತ್ರದಲ್ಲಿನ ಅಭಿನಯಕ್ಕೆ ಆಡ್ರಿಯನ್ ಬ್ರಾಡಿ ಆಸ್ಕರ್‌ನ ಮುಡಿಗೇರಿಸಿಕೊಳ್ಳಬಹುದು. ಉಳಿದಂತೆ ಯಾರಿಗೆಲ್ಲ ಈ ಬಾರಿ ಆಸ್ಕರ್ ಸಿಗಬಹುದು ಎಂದು ತಿಳಿಯಲು ಮುಂದೆ ಓದಿ.

ಇವರಿಗೆಲ್ಲ ಸಿಗಬಹುದು ಆಸ್ಕರ್

ಅತ್ಯುತ್ತಮ ಪೋಷಕ ನಟ - ಕೀರನ್ ಕಲ್ಕಿನ್ - ಚಿತ್ರದ ಹೆಸರು ಎ ರಿಯಲ್ ಪೇನ್

ಅತ್ಯುತ್ತಮ ಪೋಷಕ ನಟಿ - ಜೊಯಿ ಸಲ್ಡಾನಾ- ಚಿತ್ರದ ಹೆಸರು ಎಮಿಲಿಯಾ ಪೆರೆಜ್

ಅತ್ಯುತ್ತಮ ಛಾಯಾಗ್ರಹಣ - ಲಾಲ್ ಕ್ರಾಲಿ - ಚಿತ್ರದ ಹೆಸರು ದಿ ಬ್ರೂಟ್ ಲಿಸ್ಟ್

ಅತ್ಯುತ್ತಮ ವೇಷಭೂಷಣ - ವಿಕೆಡ್

ಅತ್ಯುತ್ತಮ ಮೇಕಪ್, ಕೇಶ ವಿನ್ಯಾಸ್ - ಚಿತ್ರದ ಹೆಸರು ದಿ ಸಬ್‌ಸ್ಟೆನ್ಸ್

ಅತ್ಯುತ್ತಮ ಮೂಲ ಸಂಗೀತ - ಡೇನಿಯಲ್ ಬ್ಲಂಬರ್ಗ್ - ಚಿತ್ರದ ಹೆಸರು ದಿ ಬ್ರೂಟ್‌ಲಿಸ್ಟ್

ಇನ್ನುಳಿದಂತೆ ಡಾಕ್ಯುಮೆಂಟರಿ ಫೀಚರ್ ಫಿಲ್ಮ್.. ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ .. ಇಂಟರ್ ನ್ಯಾಷನಲ್ ಫೀಚರ್ ಫಿಲ್ಮ್.. ಮೇಕಪ್ ಹಾಗೂ ಕೇಶವಿನ್ಯಾಸ.. ಹಿನ್ನಲೆ ಸಂಗೀತ.. ಸಂಗೀತ ಆನಿಮೇಟಡ್ ಶಾರ್ಟ್ ಫಿಲ್ಮ್.. ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ .. ಸೌಂಡ್ ಹಾಗೂ ವಿಶ್ಯುವಲ್ ಎಫೆಕ್ಟ್.. ಹೀಗೆ 22 ವಿಭಾಗಗಳಲ್ಲಿ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಲಾಸ್ ಏಂಜಲೀಸ್‌ನ ಡಾಲ್ಬಿ ಚಿತ್ರಮಂದಿರದಲ್ಲಿ ನಾಳೆ ಬೆಳಗ್ಗೆ 05-30ರಿಂದ ಕಾರ್ಯಕ್ರಮ ಆರಂಭವಾಗಲಿದೆ. ಭಾರತದಲ್ಲಿ ಆಸ್ಕರ್ ನೋಡಲು ಬಯಸುವರು ಜಿಯೋ ಹಾಟ್‌ ಸ್ಟಾರ್‌ನಲ್ಲಿ ನೋಡಬಹುದು. ಜಿಯೋ ಇಲ್ಲದವರು ಸ್ಟಾರ್ ಮೂವೀಸ್‌ನಲ್ಲಿಯೂ ಈ ಭವ್ಯ ಸಮಾರಂಭವನ್ನು ಕಣ್ತುಂಬಿಕೊಳ್ಳಬಹುದು.

More from Filmibeat

Read more about: oscars 2025 filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X