twitter
    For Quick Alerts
    ALLOW NOTIFICATIONS  
    For Daily Alerts

    ಅಂತರಿಕ್ಷದಲ್ಲಿ ಸಿನಿಮಾ: ಸಾಹಸಕ್ಕೆ ಮುಂದಾದ ರಷ್ಯಾ, ಅಮೆರಿಕದ ಜೊತೆ ಸ್ಪರ್ಧೆ

    |

    ಅಂತರಿಕ್ಷದ ಬಗ್ಗೆ ಈಗಾಗಲೇ ಹಲವಾರು ಸಿನಿಮಾಗಳು ಬಂದಿವೆ. ಅಂತರಿಕ್ಷವನ್ನೇ ಹೋಲುವ ಸೆಟ್‌ಗಳನ್ನು ಹಾಕಿ, ಗ್ರಾಫಿಕ್ಸ್, ವಿಎಫ್‌ಎಕ್ಸ್‌ ಬಳಸಿ ಅದ್ಭುತವಾದ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಆದರೆ ಅಂತರಿಕ್ಷದಲ್ಲಿಯೇ ಸಿನಿಮಾ ಚಿತ್ರೀಕರಣ ಈ ವರೆಗೆ ಮಾಡಲಾಗಿಲ್ಲ.

    ಟಾಮ್ ಕ್ರೂಸ್ ನಟನೆಯ 'ಮಿಷನ್ ಇಂಬಾಸಿಬಲ್' ಸರಣಿಯ ಹೊಸ ಸಿನಿಮಾವನ್ನು ಅಂತರಿಕ್ಷದಲ್ಲಿ ಚಿತ್ರೀಕರಿಸಲಾಗುತ್ತದೆ ಎನ್ನಲಾಗಿತ್ತು. ಆದರೆ ಕೊರೊನಾ ಹಾಗೂ ಇತರೆ ಕಾರಣಗಳಿಂದ ಯೋಜನೆ ಕೈಬಿಡಲಾಗಿದೆ.

    ಆದರೆ ಈಗ ರಷ್ಯಾವು ಅಂತರಿಕ್ಷದಲ್ಲಿ ಪೂರ್ಣ ಸಿನಿಮಾವನ್ನು ಚಿತ್ರೀಕರಿಸಲು ತಯಾರಾಗಿದೆ. ಆದರೆ ಇದಕ್ಕೆ ಕೆಲವು ಷರತ್ತುಗಳನ್ನು ಸಹ ವಿಧಿಸಲಾಗಿದೆ.

    First Movie On Space Comitation Between America And Russia

    ರಷ್ಯಾದ ಅಂತರಿಕ್ಷ ಕಾರ್ಯಕ್ರಮಗಳ ಮುಖ್ಯಸ್ಥ ಯೂರಿ ಬೊರಿಸೊವ್ ಮಾತನಾಡಿ, 'ನಟ-ನಟಿಯರು, ತಂತ್ರಜ್ಞರು ಅಂತರಿಕ್ಷದಲ್ಲಿ ಇರಲು ಖಾಸಗಿ ಹಣದ ವ್ಯವಸ್ಥೆ ಮಾಡಿಕೊಂಡರೆ ಹಾಗೂ ನಮ್ಮ ಐಎಸ್‌ಎಸ್‌ ಅಂತರಿಕ್ಷ ವಿಜ್ಞಾನ ಯೋಜನೆಗಳಿಗೆ ತೊಂದರೆ ಆಗದೇ ಚಿತ್ರೀಕರಣ ಮಾಡಲು ಒಪ್ಪಿದಲ್ಲಿ, ನಮ್ಮ ಸ್ಪೇಸ್‌ಶಿಪ್‌ ಬಳಸಿ ಅಂತರಿಕ್ಷದಲ್ಲಿ ಸಿನಿಮಾ ಚಿತ್ರೀಕರಿಸಿಕೊಳ್ಳಲು ಅಭ್ಯಂತರವಿಲ್ಲ' ಎಂದಿದ್ದಾರೆ.

    'ದಿ ಚಾಲೆಂಜ್' ಹೆಸರಿನಲ್ಲಿ ಈಗಾಗಲೇ ಸಿನಿಮಾದ ಘೋಷಣೆ ಆಗಿದೆ. ಸಿನಿಮಾಕ್ಕೆ ಸೂಕ್ತವಾದ ನಟ-ನಟಿಯರನ್ನು ಹುಡುಕುತ್ತಿದ್ದೇವೆ ಎಂದಿದ್ದಾರೆ ಸಿನಿಮಾದ ನಿರ್ಮಾಪಕ ಅಲೆಕ್ಸಿ ಟ್ರೋಕ್ಸ್ಯೋಕ್. 'ಸೂಪರ್ ವುಮನ್ ಸಿನಿಮಾ ಇದಾಗಿರಲಿದ್ದು, ಭೂಮಿಯ ಮೇಲೆ ಹಾಗೂ ಅಂತರಿಕ್ಷದಲ್ಲಿ ಅಲ್ಲಿನ ವ್ಯವಸ್ಥೆಗಳಿಗೆ ಸರಿಹೊಂದಬಲ್ಲ ನಟಿಯ ಹುಡುಕಾಟದಲ್ಲಿದ್ದೇವೆ' ಎಂದಿದ್ದಾರೆ ನಿರ್ಮಾಪಕ.

    ಇನ್ನೊಂದೆಡೆ ಅಮೆರಿಕದ ನಾಸಾ ಹಾಗೂ ಎಲಾನ್ ಮಸ್ಕ್‌ ರ 'ಸ್ಪೇಸ್ ಎಕ್ಸ್‌' ಜಂಟಿಯಾಗಿ ಅಂತರಿಕ್ಷದಲ್ಲಿ ಸಿನಿಮಾ ತೆಗೆಯಲು ಯೋಜನೆ ರೂಪಿಸಿದ್ದಾರೆ. ಆದರೆ ರಷ್ಯಾ ಅಥವಾ ಅಮೆರಿಕ ಎರಡು ದೇಶಗಳಲ್ಲಿ ಯಾರು ಮೊದಲಿಗೆ ಅಂತರಿಕ್ಷದಲ್ಲಿ ಸಿನಿಮಾ ತೆಗೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

    Recommended Video

    ಇದ್ದಕ್ಕಿದ್ದಂತೆ ಹೈದ್ರಾಬಾದ್ ಗೆ ಬಂದ ಧ್ರುವ ಸರ್ಜಾ, ನಂದಕಿಶೋರ್ | Filmibeat Kannada

    ಮೊದಲ ಅಂತರಿಕ್ಷ ಯಾನದ ಸಮಯದಲ್ಲಿಯೂ ರಷ್ಯಾ ಮತ್ತು ಅಮೆರಿಕ ನಡುವೆ ಇದೇ ರೀತಿಯ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಅಮೆರಿಕ ಮೊದಲ ಅಂತರಿಕ್ಷ ಯಾನ ಮಾಡಿ ಗೆದ್ದಿತು.

    English summary
    Russia gearing upto shoot first movie on space. America also planing to shoot its first movie on space.
    Tuesday, December 22, 2020, 15:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X