For Quick Alerts
  ALLOW NOTIFICATIONS  
  For Daily Alerts

  ಮಿಯಾ ಖಲೀಫಾ ಟಿಕ್ ಟಾಕ್ ಬ್ಯಾನ್ ಮಾಡಿದ ಪಾಕ್: ಮಾಜಿ ನೀಲಿ ತಾರೆಯ ಖಡಕ್ ಉತ್ತರ

  |

  ಮಾಜಿ ನೀಲಿ ತಾರೆ ಮಿಯಾ ಖಲೀಫಾ ಟಿಕ್ ಟಾಕ್ ಅನ್ನು ಪಾಕಿಸ್ತಾನ ಮತ್ತೆ ಬ್ಯಾನ್ ಮಾಡುವ ಮೂಲಕ ಶಾಕ್ ನೀಡಿದೆ. ಮಿಯಾ ಖಲೀಫಾ ಟಿಕ್ ಟಾಕ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಮಿಯಾ ಪೋಸ್ಟ್ ಗಳನ್ನು ನೋಡಲು ಪಡ್ಡೆ ಹುಡುಗರು ಕಾಯುತ್ತಿರುತ್ತಾರೆ. ಆದರೆ ಪಾಕಿಸ್ತಾನ ಬ್ಯಾನ್ ಮಾಡುವ ಮೂಲಕ ಪಾಕ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

  ಟಿಕ್ ಟಾಕ್ ನಲ್ಲಿ ಮೌಲ್ಯವಿಲ್ಲದ ಮತ್ತು ಅನೈತಿಕ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ ಎಂದು ಎರಡನೇ ಬಾರಿ ಮಿಯಾ ಟಿಕ್ ಟಾಕ್ ಮೇಲೆ ಪಾಕ್ ನಿಷೇಧ ಹೇರಿದೆ. ಪಾಕಿಸ್ತಾನ ಟಿಕ್ ಟಾಕ್ ಬ್ಯಾನ್ ಮಾಡಿದೆ ಅಂತ ಮಿಯಾ ಸೈಲೆಂಟ್ ಆಗಿಲ್ಲ. ಖಡಕ್ ಉತ್ತರ ನೀಡುವ ಮೂಲಕ ಪಾಕ್ ಗೆ ತಿರುಗೇಟು ನೀಡಿದ್ದಾರೆ.

  ಈ ಮೊದಲು ಮಿಯಾ ಟಿಕ್ ಟಾಕ್ ಬ್ಯಾನ್ ಮಾಡಿ ಏಪ್ರಿಲ್ ನಲ್ಲಿ ನಿಷೇಧ ಹಿಂಪಡೆಯಲಾಗಿತ್ತು. ಆದರೆ ಅದೇ ರೀತಿಯ ಪೋಸ್ಟ ಗಳನ್ನು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಮತ್ತೀಗ ನಿಷೇಧ ಹೇರಲಾಗಿದೆ. ಆದರೆ ಮಿಯಾ ಖಲೀಫಾ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಪಾಕ್ ಟಿಕ್ ಟಾಕ್ ಮೇಲೆ ನಿಷೇಧ ಹೇರಿದ್ರೆ ಟ್ವಿಟ್ಟರ್ ನಲ್ಲಿ ಮರು ಪೋಸ್ಟ್ ಮಾಡುವುದಾಗಿ ಹೇಳಿದ್ದಾರೆ.

  'ನನ್ನ ಟಿಕ್ ಟಾಕ್ ಖಾತೆಯನ್ನು ನಿಷೇಧಿಸಿದ ಪಾಕಿಸ್ತಾನಕ್ಕೆ ನನ್ನ ಶೌಟೌಟ್. ಫ್ಯಾಸಿಸಂ ನಿಂದ ದೂರ ಉಳಿಯಲು ಬಯಸುವ ನನ್ನ ಪಾಕಿಸ್ತಾನಿ ಅಭಿಮಾನಿಗಳಿಗಾಗಿ ನಾನು ಈಗಿನಿಂದ ನನ್ನ ಎಲ್ಲಾ ಟಿಕ್ ಟಾಕ್ ಪೋಸ್ಟ ಗಳನ್ನು ಟ್ವಿಟ್ಟರ್ ನಲ್ಲಿ ಮರು ಪೋಸ್ಟ್ ಮಾಡುತ್ತೇನೆ' ಎಂದಿದ್ದಾರೆ.

  ಪಾಕಿಸ್ತಾನ ದೂರ ಸಂಪರ್ಕ ಪ್ರಾಧಿಕಾರ ಯಾವುದೇ ಅಧಿಕೃತ ಘೋಷಣೆ ಮಾಡದೆ ಮಿಯಾ ಖಾತೆಗೆ ನಿಷೇಧ ಹೇರಿದೆ. ಮಿಯಾ ಖಲೀಫಾ ಟಿಕ್ ಟಾಕ್ ನಲ್ಲಿ 22.2 ಮಿಲಿಯನ್ ಫಾಲೋವರ್ಸ್ ಮತ್ತು 270 ಮಿಲಿಯನ್ ಲೈಕ್ಸ್ ಹೊಂದಿದ್ದಾರೆ.

  Protima Bediಯ ಜೀವನ ಚರಿತ್ರೆ ವೆಬ್ ಸಿರೀಸ್ ನಲ್ಲಿ | Filmibeat Kannada

  ಮಿಯಾ ಖಲೀಫಾ ಟ್ವಿಟ್ಟರ್ ನಲ್ಲಿ ಈ ಹಿಂದೆ ಹಲವಾರು ವಿಷಯಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಇತ್ತೀಚಿಗೆ ಭಾರತದ ರೈತ ಹೋರಾಟದ ಬಗ್ಗೆಯೂ ಮಿಯಾ ಟ್ವೀಟ್ ಮಾಡಿ ಸುದ್ದಿಯಾಗಿದ್ದರು. ಇನ್ನು ಇದೇ ತಿಂಗಳಲ್ಲಿ ಇಸ್ರೇಲ್ ನಡೆದ ದಾಳಿಯ ಬಗ್ಗೆಯೂ ಹಲವಾರು ಟ್ವೀಟ್ ಗಳನ್ನು ಮಾಡಿದ್ದರು.

  English summary
  Former Adult Star Mia Khalifa tik tok account ban in Pakistan. Mia Khalifa response to Pakistan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X