ಆತ್ಮಹತ್ಯೆಗೆ ಶರಣಾಗಿ ಒಂದು ತಿಂಗಳ ನಂತರ ನಡೆಯಿತು ಖ್ಯಾತ ಗಾಯಕನ ಅಂತ್ಯಕ್ರಿಯೆ, ಸಾವಿಗೆ ಕಾರಣವೇನು...?
ಒನ್ ಡೈರೆಕ್ಷನ್ ಬ್ಯಾಂಡ್‌ನ ಹುಟ್ಟು ಹಾಕಿ ಜನ ಮನ ಗೆದ್ದವರು ಲಿಯಾಮ್ ಪೇನ್. ಇವರು ಬರೆದು ಹಾಡಿದ ಕಿಸ್ ಯು, ಮ್ಯಾಜಿಕ್, ಪರ್ಫೆಕ್ಟ್ ಮತ್ತು ಫಾರ್ ಯೂ ಹಾಡುಗಳು ಇವತ್ತು ಕೂಡ ಜನಪ್ರಿಯ. ಆದರೆ ದೌರ್ಭಾಗ್ಯ.. ಇನ್ನೂ ಬಾಳಿ ಬದುಕಬೇಕಿದ್ದ ಲಿಯಾಮ್ ಪೇನ್ ಕಳೆದ ಅಕ್ಟೋಬರ್ ಹದಿನಾರರಂದು ಆತ್ಮಹತ್ಯೆಗೆ ಶರಣಾಗಿದ್ದರು. ಮಾದಕ ಮಾಯಾಜಾಲದಲ್ಲಿ ಸಿಲುಕಿ ಅದರಿಂದ ಹೊರ ಬರಲಾರದೇ ತಮ್ಮ ಮೂವತ್ತೊಂದನೇ ವಯಸ್ಸಿನಲ್ಲಿ ಹೊಟೇಲ್‌ನ ಮೂರನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದರು.
ಇನ್ನೂ ಹೊಟೇಲ್‌ನ ಬಾಲ್ಕನಿಯಿಂದ ಜಿಗಿಯುವ ಮುನ್ನ ಲಿಯಾನ್ ಪೇನ್, ಹೊಟೇಲ್‌ನ ಲಾಬಿಯಲ್ಲಿ ವಿಲಕ್ಷಣವಾಗಿ ವರ್ತಿಸಿದ್ದರು. ತಮ್ಮ ಲ್ಯಾಪ್ ಟಾಪ್ ಒಡೆದು ಹಾಕಿದ್ದರು. ಲಿಯಾನ್ ಪೇನ್ ಅವರ ಈ ವರ್ತನೆಯಿಂದ ಆಶ್ಚರ್ಯಚಕಿತಗೊಂಡಿದ್ದ ಹೊಟೇಲ್‌ನ ಸಿಬ್ಬಂದಿ ಆ ನಂತರ ಅವರನ್ನು ಸಮಾಧಾನ ಪಡಿಸಿ ಕರೆದೊಯ್ದು ಬಿಟ್ಟು ಬಂದಿದ್ದರು.

ಆದರೆ ಅದಾಗಲೇ ಮಾದಕ ವಸ್ತು ಸೇವಿಸಿದ್ದ ಲಿಯಾನ್ ಪೇನ್ ಆ ನಂತರ ತಮ್ಮ ಹೊಟೇಲ್ ರೂಮ್‌ನ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೂ ಲಿಯಾಮ್ ಪೇನ್ ಸಾವಿನ ಸುತ್ತ ಮುತ್ತ ಅನುಮಾನ ಹುತ್ತ ಇತ್ತು. ಅನೇಕರಿಗೆ ಇದು ಆತ್ಮಹತ್ಯೆಯಲ್ಲ ಕೊಲೆಯಲ್ಲ ಎನ್ನುವ ಅನುಮಾನ ಇತ್ತು. ಈ ಕಾರಣಕ್ಕೆ ತನಿಖಾಧಿಕಾರಿಗಳು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಾಯದ ಅಧಿಕಾರಿಗಳು ಲಿಯಾಮ್ ಪೇನ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮಾಡುತ್ತಿದ್ದರು. ಲಿಯಾಮ್ ಪೇನ್ ಅವರ ದೇಹದಲ್ಲಿ ಡ್ರಗ್ಸ್ ಪತ್ತೆಯಾದ ಕಾರಣ ಟಾಕ್ಸಿಕಾಲಜಿ ಪರೀಕ್ಷೆಗೆ ಮೃತ ದೇಹವನ್ನು ಕಳುಹಿಸಿದ್ದರು.
ಇನ್ನೂ ಈ ಪರೀಕ್ಷೆಯಲ್ಲಿ ವರದಿ ಬರಲು ಕನಿಷ್ಠ ಎರಡು ಮೂರು ವಾರ ಬೇಕಾದ ಹಿನ್ನೆಲೆ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸದೇ ಲಿಯಾಮ್ ಪೇನ್ ಅವರ ಡೆಡ್ ಬಾಡಿಯನ್ನು ಪೊಲೀಸರು ತಮ್ಮ ಬಳಿ ಅರ್ಜೆಂಟೀನಾದಲ್ಲಿಯೇ ಇರಿಸಿಕೊಂಡಿದ್ದರು. ಈ ತನಿಖೆಯಲ್ಲಿ ಗೊತ್ತಾದ ಸತ್ಯವೇನು ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರು ಸದ್ಯಕ್ಕೆ ಲಿಯಾಮ್ ಪೇನ್ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಉಸಿರು ಚೆಲ್ಲಿ ಒಂದು ತಿಂಗಳ ನಂತರ ಲಿಯಾಮ್ ಪೇನ್ ಅವರ
ಅವರ ಅಂತ್ಯಕ್ರಿಯೆಯನ್ನು ಯುಕೆಯಲ್ಲಿ ಮಾಡಲಾಗಿದೆ.

ಲಿಯಾಮ್ ಅವರ ಅಂತ್ಯಕ್ರಿಯೆಯಲ್ಲಿ ಲಿಯಾಮ್ ಅವರ ಮಾಜಿ ಪ್ರಿಯತಮೆ ಕೇಟ್ ಕ್ಯಾಸಿಡಿ ಮತ್ತು ಅವರ ಕೆಲ ಸ್ನೇಹಿತರು ಭಾಗಿಯಾಗಿದ್ದರು. ಅಗಲಿದ ಸ್ನೇಹಿತನಿಗೆ ಅಶ್ರುತರ್ಪಣ ಸಲ್ಲಿಸಿದರು. ಲಿಯಾಮ್ ಪೇನ್ ಜೊತೆ ಇದ್ದ ನೆನಪುಗಳನ್ನು ಹಂಚಿಕೊಂಡು ಭಾವುಕರಾದರು.
ಅಂದ್ಹಾಗೇ ಲಿಯಾಮ್ ಪೇನ್ ತಮ್ಮ ಒಂದ್ಕಾಲದ ಸ್ನೇಹಿತ ನಿಯಾಲ್ ಹೊರನ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಜೆಂಟೆನಾದಲ್ಲಿದ್ದರು. ಇನ್ನೂ ಲಿಯಾನ್ ಪೇನ್ ಒನ್ ಡೈರೆಕ್ಷನ್ ತಂಡದ ಪ್ರಮುಖ ಸದಸ್ಯರಾಗಿದ್ದರು. ಈ ಬ್ಯಾಂಡ್‌ನಲ್ಲಿ ಹಾಡುವುದಲ್ಲದೇ ಸಾಹಿತ್ಯವನ್ನೂ ಕೂಡ ಲಿಯಾಮ್ ಪೇನ್ ಬರೆಯುತ್ತಿದ್ದರು. ಈ ಬ್ಯಾಂಡ್ ಮೂಲಕವೇ ಅತ್ಯಲ್ಪ ಅವಧಿಯಲ್ಲಿಯೇ ಖ್ಯಾತಿಯ ತುತ್ತ ತುದಿಯನ್ನು ಲಿಯಾಮ್ ಪೇನ್ ತಲುಪಿದ್ದರು. ಆದರೆ ಆ ನಂತರ ಆರು ವರ್ಷದಲ್ಲಿ ಅವರ ಅವರ ನಡುವೆ ಭಿನ್ನಾಭಿಪ್ರಾಯ ಶುರುವಾಗಿತ್ತು.
ಈ ಕಾರಣಕ್ಕೆ 2010ರಲ್ಲಿ ಆರಂಭವಾಗಿದ್ದ ಒನ್ ಡೈರೆಕ್ಷನ್ ಬ್ಯಾಂಡ್ 2016ರ ಹೊತ್ತಿಗೆ ಒಡೆದ ಮನೆಯಾಗಿತ್ತು. ಇಲ್ಲಿಂದಾಚೆ ಸ್ವತಂತ್ರ್ಯವಾಗಿ ಹಾಡು ಹಾಡಲು ಶುರು ಮಾಡಿದ್ದ ಲಿಯಾಮ್ ಪೇನ್ 2021ರಲ್ಲಿ ಮಾದಕ ಮಾಯಾಜಾಲದಲ್ಲಿ ಸಿಲುಕಿದರು. ಡ್ರಗ್ ಅಡಿಕ್ಟ್ ಆದರು. ಅನೇಕ ಬಾರಿ ಇದೆಲ್ಲದರಿಂದ ಹೊರ ಬರುವ ಪ್ರಯತ್ನವನ್ನು ಮಾಡಿದ್ದರು. ಆದರೆ ಅಂತಿಮವಾಗಿ ಹೊರ ಬರಲಾಗದೇ ಅನೇಕ ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನು ಮಾಡಿದ್ದರು.


Click it and Unblock the Notifications











