ಹಾಡು ಹಾಡುತ್ತಲೇ ಸಾವಿರಾರು ಪ್ರೇಕ್ಷಕರ ಮುಂದೆ ಬೆತ್ತಲಾದ ಖ್ಯಾತ ಗಾಯಕಿ, ಕಾರಣವೇನು ?
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂಗಿಕ ಹಿಂಸೆ ಅನುಭವಿಸುತ್ತಾರೆ. ಚಿತ್ರರಂಗದಲ್ಲಿರುವ ನಾಯಕಿಯರು.. ಗಾಯಕಿಯರು ಕೂಡ ಇದರಿಂದ ಹೊರತಾಗಿಲ್ಲ. ಅಭಿಮಾನದ ಹೆಸರಿನಲ್ಲಿ ಇಲ್ಲಿ ಹಲವರು ಮಾಡಬಾರದ್ದನ್ನೆಲ್ಲಾ ಮಾಡಲು ಮುಂದಾಗುತ್ತಾರೆ. ಗುಂಪಿನಲ್ಲಿ ಸೇರಿಕೊಂಡು ಹೆಣ್ಣು ಮಕ್ಕಳ ಖಾಸಗಿ ಭಾಗಕ್ಕೆ ಕೈ ಹಾಕುವ ಪ್ರಯತ್ನ ಮಾಡುತ್ತಾರೆ.
ಈ ಮೂಲಕ ತಮ್ಮ ವಿಕೃತ ಮನಸ್ಥಿತಿಯ ಪ್ರದರ್ಶನ ಮಾಡುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆಯೇ ಮೊನ್ನೆಯ ದಿವಸ ''ರೆಬೆಕಾ ಬೇಬಿ''ಯವರಿಗಾದ ಅನುಭವ. ಹೌದು.. ''ರೆಬೆಕಾ ಬೇಬಿ''.. ಫ್ರಾನ್ಸ್‌ನ ಪ್ರಖ್ಯಾತ ಗಾಯಕಿ. ಇವರ ಪಾಪ್ ಬ್ಯಾಂಡ್ ''ಲುಲು ವ್ಯಾನ್ ಟ್ರ್ಯಾಪ್''ಗೆ ವಿಶ್ವದೆಲ್ಲೆಡೆ ಅಪಾರವಾದ ಅಭಿಮಾನಿಗಳಿದ್ದಾರೆ.

ತಮ್ಮ ಬ್ಯಾಂಡ್ ಜೊತೆ ''ರೆಬೆಕಾ'' ಹಾಡಲು ಬರುತ್ತಿದ್ದಾರೆ ಅಂದರೆ ಸಾಕು ಸಾಗರೋಪಾದಿಯಲ್ಲಿ ಬಂದು ಜನ ಸೇರುತ್ತಾರೆ. ಮೊನ್ನೆ ಕೂಡ ''ಲೆ ಕ್ರಿ ಡೆಲಾ ಗೌಟ್'' ಸಂಗೀತ ಉತ್ಸವದಲ್ಲಿ ರೆಬಿಕಾ ತಮ್ಮ ಬ್ಯಾಂಡ್ ಜೊತೆ ಭಾಗವಹಿಸಿದಾಗ ಇದೇ ರೀತಿ ಜನ ಸೇರಿದ್ದರು. ''ರೆಬೆಕಾ ಕಂಠ ಅತ್ತ ವೇದಿಕೆ ಮೇಲೆ ಕುಣಿಯುತ್ತಿದ್ದರೆ, ಹಲವರು ನಿಂತಲ್ಲಿಯೇ ಕುಣಿಯುತ್ತಿದ್ದರು.
ನೆರೆದ ಜನಸ್ತೋಮ ಕಂಡು ಪುಳಕಿತರಾದ ''ರೆಬೆಕಾ'' ಇದೇ ಸಮಯದಲ್ಲಿ ಎಂದಿನಂತೆ ಹಾಡುತ್ತಾ ಜನರ ನಡುವೆ ಹೋಗುವ ತೀರ್ಮಾನವನ್ನು ಮಾಡಿದರು. ಜನರ ನಡುವೆ ಹೋದರು. ''ರೆಬೆಕಾ'' ಮಾಡಿದ ತಪ್ಪು ಇದೆ. ''ರೆಬೆಕಾ'' ತಮ್ಮ ನಡುವೆ ಬಂದಿರುವುದನ್ನು ಕಂಡ ಹಲವು ಪುರುಷರು ಮುಟ್ಟಬಾರದ ಜಾಗವನ್ನೆಲ್ಲ ಮುಟ್ಟುವ ಪ್ರಯತ್ನ ಮಾಡಿದರು. ಅಸಭ್ಯವಾಗಿ ವರ್ತಿಸಿದರು.
ಜನರ ಈ ವರ್ತನೆಯಿಂದ ಸಹಜವಾಗಿ ಬೆಚ್ಚಿ ಬಿದ್ದ ''ರೆಬೆಕಾ'' ಆ ನಂತರ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ವೇದಿಕೆಗೆ ಮರಳಿ ಬಂದರು. ಆದರೆ.. ಹಾಡು ನಿಲ್ಲಿಸಿ ಅಲ್ಲಿಂದ ತೆರಳದೇ ಜನರ ಈ ವರ್ತನೆಯನ್ನು ಖಂಡಿಸಿ ಪ್ರತಿಭಟನೆ ಮಾಡಲು ಮುಂದಾದರು. ಹಾಡುತ್ತಾ.. ಹಾಡುತ್ತಲೇ ತಮ್ಮ ಮೈಮೇಲಿದ್ದ ಟಾಪ್ ತೆಗೆದು ಅರೆಬೆತ್ತಲಾದರು.
ಮುಂದುವರೆದು ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಒಂದು ನಾನು ಹಾಡು ಹಾಡುವುದನ್ನು ನಿಲ್ಲಿಸಬೇಕು. ಇಲ್ಲಿಂದ ಹೊರಡಬೇಕು ಈ ಮೂಲಕ ಹೆಣ್ಣಾಗಿ ಸೋಲನ್ನು ನಾನು ಒಪ್ಪಿಕೊಳ್ಳಬೇಕು. ಮತ್ತೊಂದು ನಾನು ಹಾಡುವುದನ್ನು ಮುಂದುವರೆಸಬೇಕು, ಹೆಣ್ಣು ಅಂದರೆ ಕೇವಲ ಭೋಗದ ವಸ್ತು ಅಲ್ಲ ಎಂದು ಮನವರಿಕೆ ಮಾಡಿಸಬೇಕು ಎಂದು ಹೇಳಿದರು. ಅರೆಬೆತ್ತಲೆಯಾಗಿ ಹಾಡು ಹಾಡುವುದನ್ನು ಮುಂದುವರೆಸಿದರು.

ಇನ್ನು ಈ ಘಟನೆಯನ್ನು ಖಂಡಿಸಿರುವ ಕಾರ್ಯಕ್ರಮದ ಆಯೋಜಕರು ನಮ್ಮ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾದ ಘಟನೆ ನಡೆದಿದೆ ಯಾರ ಭಯ ಇಲ್ಲದೇ ಯಾವುದೇ ಆತಂಕ ಇಲ್ಲದೇ ಸಂಗೀತ ಉತ್ಸವವನ್ನು ಆಯೋಜಿಸುವುದು ನಮ್ಮ ಗುರು ಆ ದಿಸೆಯಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ''ರೆಬಿಕಾ'' ಬೇಬಿ ಅರೆಬೆತ್ತಲೆಯಾಗಿ ಹಾಡಿದ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದ್ದು ರೆಬಿಕಾ ಅವರ ಈ ನಡೆಯನ್ನು ಹಲವಾರು ಜನ ಪ್ರಶಂಸೆ ಮಾಡಿದ್ದಾರೆ. ಅಸಭ್ಯವಾಗಿ ವರ್ತಿಸಿದ ಆ ಜನರನ್ನು ಪತ್ತೆ ಹಚ್ಚಲಾಗಿದೆಯಾ.. ? ಅವರನ್ನು ಬಂಧಿಸಲಾಗಿದೆಯಾ ? ಎಂದು ಪ್ರಶ್ನೆಯನ್ನು ಮಾಡುತ್ತಿದ್ದಾರೆ. ''ರೆಬಿಕಾ ಬೇಬಿ'' ಅವರ ಧೈರ್ಯಕ್ಕೆ ಸಲಾಂ ಹೊಡೆಯುತ್ತಿದ್ದಾರೆ


Click it and Unblock the Notifications











