Matthew Perry: 'ಫ್ರೆಂಡ್ಸ್' ನಟ ಮ್ಯಾಥ್ಯೂ ಪೆರ್ರಿ ನಿಧನ (54), ಬಾತ್ ಟಬ್‌ನಲ್ಲಿ ಮೃತದೇಹ ಪತ್ತೆ

10 ಸೀಸನ್‌ಗಳಲ್ಲಿ ಪ್ರಸಾರವಾದ ಎನ್‌ಬಿಸಿಯ ಜನಪ್ರಿಯ "ಫ್ರೆಂಡ್ಸ್" ಸೀರಿಸ್‌ನ ಸ್ಟಾರ್‌ಗಳಲ್ಲಿ ಒಬ್ಬರಾದ ಮ್ಯಾಥ್ಯೂ ಪೆರ್ರಿ ಶನಿವಾರ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿದೆ. 54 ವರ್ಷ ವಯಸ್ಸಿನ ಮ್ಯಾಥ್ಯೂ ಪೆರ್ರಿ, ತಮ್ಮ ಪೆಸಿಫಿಕ್ ಪಾಲಿಸೇಡ್ಸ್‌ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಲಾಸ್ ಏಂಜಲೀಸ್ ಟೈಮ್ಸ್‌ ವರದಿ ಮಾಡಿದೆ.

ಮ್ಯಾಥ್ಯೂ ಪೆರ್ರಿ ಅವರು ಲಾಸ್ ಏಂಜಲೀಸ್ ಪೆಸಿಫಿಕ್ ಪಾಲಿಸೇಡ್ಸ್‌ ಮನೆಯ ಹಾಟ್ ಟಬ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ಮೊದಲ ಪ್ರತ್ಯಕ್ಷ ಸಾಕ್ಷಿ ತಿಳಿಸಿದೆ. ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂಬುದನ್ನು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Friends Actor Matthew Perry Dies at 54, Body Found at His Home

ಈ ಸುದ್ದಿಯನ್ನು ಮೊದಲು ವರದಿ ಮಾಡಿದ ಲಾಸ್ ಏಂಜಲೀಸ್ ಟೈಮ್ಸ್ ಮತ್ತು ಟಿಎಂಝಡ್ ಎರಡೂ ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಸ್ಥಳದಲ್ಲಿ "ಯಾವುದೇ ಅನುಮಾನಾಸ್ಪದ" ಅಂಶಗಳು ಕಂಡು ಬಂದಿಲ್ಲ ಎಂದು ವರದಿ ಮಾಡಿವೆ. ಮೃತ ಮ್ಯಾಥ್ಯೂ ಪೆರ್ರಿ ಅವರು ನೋವು ನಿವಾರಕಗಳು ಮತ್ತು ಮದ್ಯದ ವ್ಯಸನಗಳಿಗೆ ಅಡಿಟ್ ಆಗಿ, ಹಲವು ವರ್ಷಗಳ ಕಾಲ ಹೋರಾಡಿದ್ದರು. ಅನೇಕ ಬಾರಿ ಪುನರ್ವಸತಿ ಚಿಕಿತ್ಸಾಲಯಗಳಕಲ್ಲಿ ಚಿಕಿತ್ಸೆ ಪಡೆದಿದ್ದರು.

ಘಟನೆ ಕುರಿತು ಪೊಲೀಸರಿಗೆ ಸಂಜೆ 4:07 ಕ್ಕೆ 911 ಕರೆ ಬಂದಿತು. ಸ್ಥಳೀಯ ಸಮಯ ಮತ್ತು ಕಾನೂನು ಜಾರಿ ಮೂಲಗಳ ಪ್ರಕಾರ ನೀರಿನ ಮುಳುಗಿ ಅವರು ಮೃತಪಟ್ಟಿದ್ದಾರೆ ಎಂದು ಪರಿಗಣಿಸಲಾಗಿದೆ. ಘಟನಾ ಸ್ಥಳದಲ್ಲಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ.ಸಾವಿಗೆ ಯಾವುದೇ ಕಾರಣ ತಿಳಿದಿಲ್ಲ ಎಂದು ಮೂಲಗಳು ತಿಳಿಸಿವೆ. ತನಿಖೆ ನಡೆಯುತ್ತಿದೆ. ಪಶ್ಚಿಮ ಲಾಸ್ಏಂಜಲಿಸ್ ವಿಭಾಗದ ಲಾಸ್ ಏಂಜಲೀಸ್ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.

ಮ್ಯಾಥ್ಯೂ ಪೆರ್ರಿ

1994 ರಿಂದ 2004 ರವರೆಗೆ 10 ಸೀಸನ್‌ಗಳಲ್ಲಿ ಪ್ರಸಾರವಾದ ಎನ್‌ಬಿಸಿಯ ಜನಪ್ರಿಯ "ಫ್ರೆಂಡ್ಸ್" ನಲ್ಲಿ ಚಾಂಡ್ಲರ್ ಬಿಂಗ್‌ನ ಪಾತ್ರದಿಂದ ಮ್ಯೂಥ್ಯೂ ಪೆರಿ ಹೆಚ್ಚು ಹೆಸರುವಾಸಿಯಾಗಿದ್ದರು. ಇತ್ತೀಚಿನ ದೂರದರ್ಶನದ "ಫ್ರೆಂಡ್ಸ್" ಗೆಟ್‌ ಟುಗೇದರ್‌ಸಂದರ್ಭದಲ್ಲಿ, ಧಾರಾವಾಹಿ ಚಿತ್ರೀಕರಣದ ಸಮಯದಲ್ಲಿ "ಪ್ರತಿ ರಾತ್ರಿ" ತೀವ್ರ ಆತಂಕವನ್ನು ಅನುಭವಿಸಿದ್ದನ್ನು ಒಪ್ಪಿಕೊಂಡಿದ್ದರು.

ಸುಮಾರು ಒಂದು ವರ್ಷದ ಹಿಂದೆ ಮ್ಯಾಥ್ಯೂ ಪೆರ್ರಿ ತಮ್ಮ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. "ಫ್ರೆಂಡ್ಸ್, ಲವರ್ಸ್ ಮತ್ತು ದಿ ಬಿಗ್ ಟೆರಿಬಲ್ ಥಿಂಗ್: ಎ ಮೆಮೊಯಿರ್" ಎಂದು ಇದಕ್ಕೆ ಹೆಸರಿಡಲಾಗಿದ್ದು, 2019 ರಲ್ಲಿ ಸಾವಿನ ಸಮೀಪದ ಅನುಭವವನ್ನು ಒಳಗೊಂಡಂತೆ ವ್ಯಸನದೊಂದಿಗಿನ ಅವರ ಹೋರಾಟದ ಬಗ್ಗೆ ತಿಳಿಸಲಿದೆ.

ಕೆನಡಾದ ಒಟ್ಟಾವಾದಲ್ಲಿ ಬಾಲ್ಯವನ್ನು ಕಳೆದ ಮ್ಯಾಥ್ಯೂ ಕೆನಡಾದ ಜೂನಿಯರ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರನಾಗಿ ಉತ್ತಮ ಕೆರಿಯರ್ ಹೊಂದಿದ್ದವರು. ಆದರೆ, 15 ನೇ ವಯಸ್ಸಿನಲ್ಲಿ ನಟನೆಗಾಗಿ ಟೆನಿಸ್ ಬಿಟ್ಟರು. 24 ನೇ ವಯಸ್ಸಿನಲ್ಲಿ "ಫ್ರೆಂಡ್ಸ್" ತಂಡಕ್ಕೆ ಸೇರಿದ್ದರು. ಬ್ಲಾಕ್‌ಬಸ್ಟರ್ "ಫ್ರೆಂಡ್ಸ್" ಜೊತೆಗೆ ಅವರು "ಬಾಯ್ಸ್ ವಿಲ್ ಬಿ ಬಾಯ್ಸ್," "ಗ್ರೋಯಿಂಗ್ ಪೇನ್ಸ್," ಬೆವರ್ಲಿ ಹಿಲ್ಸ್, 90210," "ದಿ ವೆಸ್ಟ್ ವಿಂಗ್" ಮತ್ತು "ಸ್ಕ್ರಬ್ಸ್" ಸೇರಿದಂತೆ ಹಲವಾರು ಇತರ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

More from Filmibeat

English summary
'Friends' Actor Matthew Perry dead at 54.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X