ಪಾಲ್ ವಾಕರ್ ಅರ್ಪಣೆಯಾದ ಟ್ರೇಲರ್ ಸೂಪರ್
ಹಾಲಿವುಡ್ ನ ಬಹು ಜನಪ್ರಿಯ ಚಿತ್ರ 'ಫಾಸ್ಟ್ ಅಂಡ್ ಫ್ಯೂರಿಯಸ್' ಸರಣಿಯ ನಟ ಪಾಲ್ ವಾಕರ್ ಕಳೆದ ವರ್ಷ ಲಾಸ್ ಏಂಜಲೀಸ್ ನಲ್ಲಿ ಅಪಘಾತಕ್ಕೀಡಾಗಿ ದುರಂತ ಸಾವು ಕಂಡಿದ್ದರು. ಅವರ ಕಟ್ಟ ಕಡೆಯ ಚಿತ್ರ ಫ್ಯೂರಿಯಸ್ 7 ಚಿತ್ರದ ಟ್ರೇಲರ್ ಸದ್ದು ಮಾಡತೊಡಗಿದೆ. ಟ್ರೇಲರ್ ರಿಲೀಸ್ ಆಗಿ ಮೂರು ದಿನಗಳಲ್ಲೇ ಭಾರಿ ಸದ್ದು ಮಾಡಿದೆ.
ಹೆಚ್ಚು ವೇಗವಾಗಿ ಕಾರು ಓಡಿಸುವ, ವೈವಿಧ್ಯಮಯ ಕಾರುಗಳನ್ನು ಬಳಸಿಕೊಂಡು ಮೈನವಿರೇಳಿಸುವ ಸಾಹಸ ಪ್ರದರ್ಶನ ನೀಡುವ ಸಾಹಸಭರಿತ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಪಾಲ್ ಅವರು ಕಾರು ಅಪಘಾತದಲ್ಲೇ ದುರಂತ ಸಾವನ್ನಪ್ಪಿದ್ದರು. "If one day the speed kills me, do not cry I because I was smiling." ಎಂದು ಹೇಳಿದ್ದ ಪಾಲ್ ಅವರ ರೋಚಕ ಸಾಹಸದ ಝಲಕ್ ಟ್ರೇಲರ್ ನಲ್ಲಿ ನೋಡಿ ಅಭಿಮಾನಿಗಳು ಧನ್ಯತೆ ಅನುಭವಿಸಿದ್ದಾರೆ.

ಟ್ರೇಲರ್ ನಲ್ಲಿ ಬಸ್ ಮೇಲಿಂದ ಪಾಲ್ ವಾಕರ್ ಜಿಗಿಯುವ ದೃಶ್ಯವಂತೂ ಮೈನವಿರೆಳಿಸುತ್ತದೆ.ನ.1 ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಆದ ಟ್ರೇಲರ್ ಈ ಸಮಯಕ್ಕೆ 17,437,756 ಬಾರಿ ವೀಕ್ಷಣೆ ಪಡೆದುಕೊಂಡಿದೆ. ಸುಮಾರು 138,944 likes ಹಾಗೂ 3215 ಬಾರಿ ಡಿಸ್ ಲೈಕ್ ಬಟನ್ ಒತ್ತಿಸಿಕೊಂಡಿದೆ. ಚಿತ್ರದ ಬಿಡುಗಡೆ ದಿನಾಂಕ ಏಪ್ರಿಲ್ 3, 2015 ರಂದು ಎಂದು ಈಗಾಗಲೇ ಘೋಷಿಸಲಾಗಿದೆ. [ಸಾಹಸಿ ಪಾಲ್ ವಾಕರ್ ಆಸಕ್ತ ಮಾಹಿತಿ]
ತನ್ನ ನಗು, ಸಾಹಸಮಯ ದೃಶ್ಯಗಳಲ್ಲಿ ಪಾಲ್ಗೊಳ್ಳುವ ಅವರ ಎದೆಗಾರಿಕೆ, ಬಡ, ಅಶಕ್ತ, ರೋಗಪೀಡಿತರಿಗಾಗಿ ತಮ್ಮ ಸಂಭಾವನೆಯನ್ನು ಧಾರೆ ಎರೆಯುತ್ತಾ ತಮ್ಮ ಎನ್ ಜಿಒ ಮೂಲಕ ಜನರಿಗೆ ಹತ್ತಿರವಾಗಿದ್ದ ಪಾಲ್ ಅವರಿಗೆ ಈ ಚಿತ್ರವನ್ನು ಚಿತ್ರ ತಂಡ ಅರ್ಪಣೆ ಮಾಡಿದೆ. ಪಾಲ್ ಅವರ ಅಭಿಮಾನಿಗಳು ಸೇರಿದಂತೆ ಸಾಹಸಪ್ರಿಯ ಸಿನಿಪ್ರೇಮಿಗಳಿಗೆ ಇಷ್ಟವಾಗಿರುವ ಟ್ರೇಲರ್ ಇಲ್ಲಿದೆ ನೋಡಿ...


Click it and Unblock the Notifications











