twitter
    For Quick Alerts
    ALLOW NOTIFICATIONS  
    For Daily Alerts

    ಗಾಂಧಿಯನ್ನು ಬೆಳ್ಳಿತೆರೆಗೆ ತಂದ ರಿಚರ್ಡ್ ಇನ್ನಿಲ್ಲ

    By * ಜೇಮ್ಸ್ ಮಾರ್ಟಿನ್
    |

    ಆಸ್ಕರ್ ವಿಜೇತ ಬ್ರಿಟೀಷ್ ಚಿತ್ರಕರ್ಮಿ ರಿಚರ್ಡ್ ಅಟೆನ್ ಬರೋ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಮಹಾತ್ಮ ಗಾಂಧೀಜಿ ಕುರಿತ ಚಿತ್ರವನ್ನು ಬೆಳ್ಳಿತೆರೆಗೆ ತಂದ ರಿಚರ್ಡ್ ಬ್ರಿಟನ್ನಿನ ಉತ್ತಮ ಕಲಾವಿದರಾಗಿದ್ದರು.

    ರಿಚರ್ಡ್ ಅವರ ಸಾವಿನ ಸುದ್ದಿಯನ್ನು ಬಿಬಿಸಿಗೆ ಅವರ ಮಗ ಮೈಕಲ್ ಅಟೆನ್ ಬರೋ ಮೊದಲಿಗೆ ತಿಳಿಸಿದರು. ಭಾನುವಾರ ಮಧ್ಯಾಹ್ನ ಊಟದ ವೇಳೆಗೆ ಅವರು ಮೃತಪಟ್ಟಿದ್ದಾರೆ. ರಿಚರ್ಡ್ ಅವರ ಸೋದರ ಡೇವಿಡ್ ಅಟೆನ್ ಬರೋ ಅವರು ಪರಿಸರವಾದಿಯಾಗಿ ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ಮನೆ ಮಾತಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

    ವಯೋಸಹಜ ನಿಶ್ಯಕ್ತಿಯಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗಿದೆ. ಲಾರ್ಡ್ ಅಟೆನೊ ಬರೋ ಅವರು 'ಗಾಂಧಿ' ಚಿತ್ರದ ನಿರ್ದೇಶನಕ್ಕಾಗಿ ಆಸ್ಕರ್ ಪ್ರಶಸ್ತಿ ಗಳಿಸಿದ್ದರು.

    Gandhi-movie maker director Sir Richard Attenborough dies at 90

    ಸುಮಾರು 6 ದಶಕಗಳ ಕಾಲ ನಟನೆ ಹಾಗೂ ನಿರ್ದೇಶನ ವಿಭಾಗದಲ್ಲಿ ಹೆಚ್ಚು ಹೆಸರು ಮಾಡಿದರು. ಬ್ರಿಗ್ಟನ್ ರಾಕ್, ವಿಶ್ವಯುದ್ಧ II ರ ಕೈದಿಗಳ ಕುರಿತಾದ 'ದಿ ಗ್ರೇಟ್ ಎಸ್ಕೇಪ್' ನಂತರ ಸೂಪರ್ ಹಿಟ್ ಚಿತ್ರ 'ಜುರಾಸಿಕ್ ಪಾರ್ಕ್' ನಲ್ಲಿ ಥೀಮ್ ಪಾರ್ಕ್ ಅಭಿವೃದ್ಧಿಪಡಿಸುವ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದರು.

    ಆದರೆ, ರಿಚರ್ಡ್ ಅವರನ್ನು ಇಂದಿಗೂ ಗಾಂಧಿ ಚಿತ್ರದ ನಿರ್ಮಾಣಗಾರ, ನಿರ್ದೇಶಕರಾಗೆ ಜನ ಗುರುತಿಸುತ್ತಾರೆ. ಅತ್ಯುತ್ತಮ ಚಿತ್ರ ಸೇರಿದಂತೆ 8 ಆಸ್ಕರ್ ಪ್ರಶಸ್ತಿಗಳನ್ನು ಈ ಚಿತ್ರ ಬಾಚಿಕೊಂಡಿತ್ತು.

    ರಿಚರ್ಡ್ ಸ್ಯಾಮುಯೆಲ್ ಅಟೆನ್ ಬರೋ ಅವರು ಆಗಸ್ಟ್ 29, 1923ರಂದು ಕೇಂಬ್ರಿಡ್ಜ್ ನಲ್ಲಿ ಜನಿಸಿದ ರಿಚರ್ಡ್ ಅವರು 1976ರಲ್ಲಿ 'ಸರ್' ಪದವಿಗೇರಿದರು. 1993ರಲ್ಲಿ ಬರೋನ್ ಎನಿಸಿದರು. 12ನೇ ವಯಸ್ಸಿನಲ್ಲೇ ಮೌಸ್ ಟ್ರ್ಯಾಪ್ ನಾಟಕದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಿಚರ್ಡ್ ವೃತ್ತಿ ಪರ ನಾಟಕಕಾರರಾಗಿ 18ನೇ ವಯಸ್ಸಿನ ತಮ್ಮ ಹಾದಿ ಕಂಡುಕೊಂಡರು.

    1942ರಲ್ಲಿ 'ಇನ್ ವಿಚ್ ವೀ ಸರ್ವ್' ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಗಾಂಧಿ ಚಿತ್ರ ನಿರ್ಮಿಸಿ ಭರ್ಜರಿ ಯಶಸ್ಸು ಗಳಿಸಿದ್ದಲ್ಲದೆ ಮಕ್ಕಳ ನಿಧಿ ಸಂಗ್ರಹ ಕಾರ್ಯದಲ್ಲೂ ತೊಡಗಿದರು. 2008ರಲ್ಲಿ ಪಾರ್ಶ್ವವಾಯು ಪೀಡಿತರಾಗಿ ವೀಲ್ಹ್ ಚೇರ್ ಮೇಲೆ ಕುಳಿತರೂ ಪತ್ನಿ, ನಟಿ ಶೀಲಾ ಸಿಮ್ ಜೊತೆ ಸದಾಕಾಲ ಚಿತ್ರರಂಗದ ಬಗ್ಗೆ ಚರ್ಚಿಸುತ್ತಿದ್ದರು ಎನ್ನಲಾಗಿದೆ. ಬ್ರಿಟಿಷರ ಹೆಮ್ಮೆಯ ಕಲಾವಿದ ಈಗ ನೆನಪು ಮಾತ್ರ(ಪಿಟಿಐ)

    English summary
    British actor and film director Richard Attenborough died on Sunday at the age of 90, the BBC reported, citing his son.
    Monday, August 25, 2014, 12:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X