ದರೋಡೆ ವೇಳೆ ದುಷ್ಕರ್ಮಿಗಳ ಗುಂಡೇಟಿಗೆ ಹಾಲಿವುಡ್ ನಟ ಬಲಿ
ಸಾವು ಯಾವಾಗ ಯಾರನ್ನು ಹೇಗೆ ಆವರಿಸುತ್ತದೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದವರು ನಾಳೆ ಇರಲ್ಲ. ಯಾರ ಪ್ರಾಣಕ್ಕೆ ಹೇಗೆ ಸಂಚಕಾರ ಬರುತ್ತದೋ ಗೊತ್ತಿಲ್ಲ. ಹಾಲಿವುಡ್ ನಟನ ಮೇಲೆ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿ ಆಗಿದ್ದಾರೆ. ಚಿಕಿತ್ಸೆ ಫಲಕಾರಿ ಆಗದೇ ಅವರು ನಿಧರಾಗಿದ್ದಾರೆ.
ಅಮೇರಿಕಾದಲ್ಲಿ ದುಷ್ಕರ್ಮಿಗಳು ದರೋಡೆಗೆ ಮುಂದಾಗಿದ್ದಾರೆ. ಈ ವೇಳೆ ತಡೆಯಲು ಹೋದ ನಟ ಜಾನಿ ವ್ಯಾಕ್ಟರ್ ಗುಂಡಿಕ್ಕಿದ್ದಾರೆ. 37 ವರ್ಷದ ನಟ ಜಾನಿ ಕೊನೆಯುಸಿರೆಳೆದಿದ್ದಾರೆ. ಶನಿವಾರ (ಮೇ 25) ಈ ಘಟನೆ ನಡೆದಿದೆ. 'ಜನರಲ್ ಹಾಸ್ಪಿಟಲ್' ಶೋನಲ್ಲಿ ಬ್ರಾಂಡೊ ಕಾರ್ಬಿನ್ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. 'ದಿ ಇಂಟ್ರಾಗೇಷನ್', 'ದಿ ರೆಲಿಕ್', 'ಟ್ರ್ಯಾಪರ್ಸ್ ಎಡ್ಜ್', 'ಸೂಪರ್ ಸೆಲ್' ಸೇರಿದಂತೆ ಕೆಲ ಸಿನಿಮಾಗಳಲ್ಲಿ ವ್ಯಾಕ್ಟರ್ ನಟಿಸಿದ್ದರು.

ದಕ್ಷಿಣ ಕೆರೊಲಿನಾದ ಚಾರ್ಲ್ಸ್ಟನ್‌ನಲ್ಲಿ ಹುಟ್ಟಿ ಬೆಳೆದ ನಟ ಜಾನಿ ವ್ಯಾಕ್ಟರ್ ಬಣ್ಣದಲೋಕದತ್ತ ಮುಖ ಮಾಡಿದ್ದರು. ಸ್ಫುರದ್ರೂಪಿ ನಟ ಬಹಳ ಬೇಗ ಜನಪ್ರಿಯತೆ ಗಳಿಸಿದ್ದರು. ದುಷ್ಕರ್ಮಿಗಳು ಆತನ ಕಾರಿನಲ್ಲಿದ್ದ ಕ್ಯಾಟಲಿಕ್ ಕನ್ವರ್ಟರ್ ದೋಚಲು ಯತ್ನಿಸಿದಾಗ ಅಡ್ಡ ಬಂದ ವ್ಯಾಕ್ಟರ್ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿ ಆಗಿದ್ದಾರೆ.
ಜಾನಿ ವ್ಯಾಕ್ಟರ್ ತಾಯಿ ಸ್ಕಾರ್ಲೆಟ್ ಮಾತನಾಡಿ "ನನ್ನ ಮಗ ದುಷ್ಕರ್ಮಿಗಳು ವಿರುದ್ಧ ಹೋಗಿರಲಿಲ್ಲ. ಆದರೆ ಅವರು ಓಡಿಹೋಗುವ ಮೊದಲು ಅವನ ಮೇಲೆ ಗುಂಡು ಹಾರಿಸಿದರು. ಆಸ್ಪತ್ರೆಗೆ ಧಾವಿಸಿದಾಗ, ಜಾನಿ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು. ಯಾವುದೇ ಶಂಕಿತರನ್ನು ಈವರೆಗೆ ಬಂಧಿಸಿಲ್ಲ" ಎಂದಿದ್ದಾರೆ.
ತಾಯಿ ಹಾಗೂ ಇಬ್ಬರು ಒಡಹುಟ್ಟಿದವರನ್ನು ಜಾನಿ ವ್ಯಾಕ್ಟರ್ ಅಗಲಿದ್ದಾರೆ. ಆತನ ನಿಧನದ ಸುದ್ದಿ ಹಾಲಿವುಡ್ ಚಿತ್ರರಂಗಕ್ಕೆ ದಿಗ್ಬ್ರಮೆ ಮೂಡಿಸಿದೆ. ಹಲವು ಸಂತಾಪ ಸೂಚಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಜಾನಿ ವ್ಯಾಕ್ಟರ್ ಸಹ-ನಟಿ ಸೋಫಿಯಾ ಮ್ಯಾಟ್ಸನ್ ನಟನ ಅಗಲಿಕೆ ಸಂತಾಪ ಸೂಚಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. "ನನ್ನ ಹೃದಯವು ಸಂಪೂರ್ಣವಾಗಿ ಛಿದ್ರವಾಗಿದೆ. ಜಾನಿ ಬಹಳ ಒಳ್ಳೆಯವನು, ಆತ ಬಹಳ ಪ್ರಾಮಾಣಿಕ, ಕಾಳಜಿಯುಳ್ಳವನಾಗಿದ್ದ. ಕೆಲಸದ ವಿಚಾರದಲ್ಲಿ ಬಹಳ ಪರಿಶ್ರಮ ಮತ್ತು ವಿನಮ್ರ. ತುಂಬಾ ದಯೆ ಮತ್ತು ಸಂತೋಷವನ್ನು ಹರಡುವ ದೊಡ್ಡ ಹೃದಯದಿಂದ ಅವನು ಯಾವಾಗಲೂ ತನ್ನ ಸುತ್ತಲಿರುವ ಪ್ರತಿಯೊಬ್ಬರನ್ನು ನೋಡುತ್ತಿದ್ದ. ಪ್ರೀತಿಸುತ್ತಿದ್ದ.
"ಆತನ ಬಗ್ಗೆ ಬಹಳ ಹೆಮ್ಮೆ, ನನಗೆ ಅವನ ಬಗ್ಗೆ ಚೆನ್ನಾಗಿ ಗೊತ್ತಿತ್ತು. ನಾವು ತೆರೆಯ ಮೇಲೆ ಮತ್ತು ಹೊರಗೆ ಹಲವು ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ನಾನು ಅದನ್ನೆಲ್ಲಾ ನನ್ನ ಹೃದಯದಲ್ಲಿ ಸದಾ ಇಟ್ಟುಕೊಂಡಿರುತ್ತೇನೆ. ನೀವು ನಿಜಕ್ಕೂ ಆತನನ್ನು ಮಿಸ್ ಮಾಡಿಕೊಳ್ಳುತ್ತೀರಿ. ನೀನು ಈಗಾಗಲೇ ಮೇಲಿರುವವ ಬಗ್ಗೆ ಕಾಳಜಿ ವಹಿಸಿದ್ದೀರಿ ಎಂದು ಭಾವಿಸಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಜಾನಿ ವ್ಯಾಕ್ಟರ್ ಆಪ್ತ ಡೇವಿಡ್ ಶಾಲ್ ಸಹ ಮಾಧ್ಯಮವೊಂದಕ್ಕೆ ಮಾತನಾಡಿದ್ದಾರೆ. "ತನ್ನ ಕಲೆಗೆ ಬದ್ಧನಾಗಿದ್ದ ಪ್ರತಿಭಾವಂತ ನಟ ಮಾತ್ರವಲ್ಲ, ಅವನನ್ನು ತಿಳಿದಿರುವ ಪ್ರತಿಯೊಬ್ಬರಿಗೂ ನಿಜವಾದ ನೈತಿಕ ಉದಾಹರಣೆ. ಕಠಿಣ ಪರಿಶ್ರಮ, ದೃಢತೆ ಮತ್ತು ಎಂದಿಗೂ ಬಿಟ್ಟುಕೊಡದ ಮನೋಭಾವಕ್ಕಾಗಿ ನಿಲ್ಲುವುದು. ಸವಾಲಿನ ವೃತ್ತಿಯ ಉತ್ತುಂಗ ಮತ್ತು ಕೆಳಮಟ್ಟದಲ್ಲಿ, ಅವರು ಯಾವಾಗಲೂ ತಮ್ಮ ಗಲ್ಲವನ್ನು ಮೇಲಕ್ಕೆ ಇಟ್ಟುಕೊಂಡು ಅವರು ಅತ್ಯುತ್ತಮವಾದದ್ದಕ್ಕಾಗಿ ಶ್ರಮಿಸುತ್ತಿದ್ದರು.
'ಜಾನಿ ಜೊತೆಗಿನ ನಮ್ಮ ಸಮಯ ಬಹಳ ಉತ್ತಮವಾಗಿತ್ತು. ಅವನು ಅಕ್ಷರಶಃ ಸದಾ ಎಲ್ಲರ ಬೆನ್ನಿಗೆ ನಿಲ್ಲುತ್ತಿದ್ದ. ಒಂದು ದಶಕಕ್ಕೂ ಹೆಚ್ಚು ಕಾಲ ಒಟ್ಟಿಗೆ ನಂತರ, ಅವರು ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೋವು ಬಿಟ್ಟು ಹೋಗಿದ್ದಾರೆ" ಎಂದಿದ್ದಾರೆ.


Click it and Unblock the Notifications










