For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಛೋಪ್ರಾರನ್ನ ಮದುವೆ ಆಗುವಂತೆ ಕೋರಿದ್ದರು ಹಾಲಿವುಡ್ಡಿನ 'ಈ' ನಟ.!

  By Harshitha
  |

  ಬಾಲಿವುಡ್ ಕ್ಕಿಂತ ಹಾಲಿವುಡ್ ನಲ್ಲಿಯೇ ಸಿಕ್ಕಾಪಟ್ಟೆ ಬಿಜಿಯಾಗಿರುವ ನಟಿ ಪ್ರಿಯಾಂಕಾ ಛೋಪ್ರಾ ಅಮೇರಿಕನ್ ಸಿಂಗರ್ ಕಮ್ ಆಕ್ಟರ್ ನಿಕ್ ಜೋನಾಸ್ ರನ್ನ ಡೇಟ್ ಮಾಡುತ್ತಿರುವ ಗುಸು ಗುಸು ಹೊಸದೇನಲ್ಲ.

  35 ವರ್ಷದ ಪ್ರಿಯಾಂಕಾ ಛೋಪ್ರಾ ಸೌಂದರ್ಯಕ್ಕೆ 25 ವರ್ಷದ ನಿಕ್ ಜೋನಾಸ್ ಕ್ಲೀನ್ ಬೌಲ್ಡ್ ಆಗಿರುವ ಸುದ್ದಿ ಹಾಲಿವುಡ್ ಅಂಗಳದಲ್ಲೂ ಕೇಳಿಬರುತ್ತಿದೆ. ಅಸಲಿಗೆ, ಪ್ರಿಯಾಂಕಾ ಬ್ಯೂಟಿಗೆ ನಿಕ್ ಜೋನಾಸ್ ಮಾತ್ರ ಅಲ್ಲ, ವರ್ಷಗಳ ಹಿಂದೆಯೇ ಪ್ರಿಯಾಂಕಾ ಸೊಬಗಿಗೆ ಹಾಲಿವುಡ್ ನ ಮತ್ತೋರ್ವ ನಟ ಫಿದಾ ಆಗಿದ್ದರು.

  ''ನನ್ನ ಮದುವೆ ಆಗುವೆಯಾ.?'' ಎಂದು ಪ್ರತಿ ಅರ್ಧ ಗಂಟೆಗೊಮ್ಮೆ ಹಾಲಿವುಡ್ ನ 'ಆ' ನಟ ಪ್ರಿಯಾಂಕಾರನ್ನ ಕೇಳಿಕೊಳ್ತಿದ್ರಂತೆ. ಯಾರು 'ಆ' ಅಂತ ನಿಮಗೆ ಗೊತ್ತಾ.? ಇಲ್ಲಾಂದ್ರೆ, ಫೋಟೋ ಸ್ಲೈಡ್ ಗಳಲ್ಲಿ ನೋಡಿರಿ...

  ಪ್ರಿಯಾಂಕಾ ಕಂಡ್ರೆ ಜೆರಾರ್ಡ್ ಬಟ್ಲರ್ ಗೆ ಇಷ್ಟ

  ಪ್ರಿಯಾಂಕಾ ಕಂಡ್ರೆ ಜೆರಾರ್ಡ್ ಬಟ್ಲರ್ ಗೆ ಇಷ್ಟ

  ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅಂದ್ರೆ ಹಾಲಿವುಡ್ ನಟ ಜೆರಾರ್ಡ್ ಬಟ್ಲರ್ ಗೆ ಇಷ್ಟ. ಈ ವಿಷಯ ಅರಿತಿದ್ದ ಪ್ರಿಯಾಂಕಾ ಛೋಪ್ರಾ, 2009 ರಲ್ಲಿ ಜೆರಾರ್ಡ್ ಬಟ್ಲರ್ ಗಾಗಿ ಒಂದು ಪಾರ್ಟಿಯನ್ನ ಆಯೋಜಿಸಿದ್ದರು.

  ನಟಿ ಪ್ರಿಯಾಂಕಾ ಛೋಪ್ರಾ ಬಾಯ್ ಫ್ರೆಂಡ್ ಇವರೇನಾ.?ನಟಿ ಪ್ರಿಯಾಂಕಾ ಛೋಪ್ರಾ ಬಾಯ್ ಫ್ರೆಂಡ್ ಇವರೇನಾ.?

  ಮದುವೆ ಆಗುವೆಯಾ.?

  ಮದುವೆ ಆಗುವೆಯಾ.?

  ಪ್ರಿಯಾಂಕಾ ಛೋಪ್ರಾ ಸೌಂದರ್ಯಕ್ಕೆ ಮರುಳಾಗಿದ್ದ ಜೆರಾರ್ಡ್ ಬಟ್ಲರ್, ಆ ಪಾರ್ಟಿಯಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ''ನನ್ನ ಮದುವೆ ಆಗುವೆಯಾ.?'' ಎಂದು ಪ್ರಿಯಾಂಕಾ ಬಳಿ ಪ್ರಪೋಸ್ ಮಾಡುತ್ತಿದ್ದರಂತೆ.

  ನಕ್ಕು ರಿಜೆಕ್ಟ್ ಮಾಡಿದ್ದ ಪ್ರಿಯಾಂಕಾ

  ನಕ್ಕು ರಿಜೆಕ್ಟ್ ಮಾಡಿದ್ದ ಪ್ರಿಯಾಂಕಾ

  ''ನನ್ನ ಮದುವೆ ಆಗುವೆಯಾ.?'' ಜೆರಾರ್ಡ್ ಪ್ರಪೋಸ್ ಮಾಡಿದಾಗೆಲ್ಲ, ಜೋರಾಗಿ ನಕ್ಕು ರಿಜೆಕ್ಟ್ ಮಾಡಿದ್ದರಂತೆ ನಟಿ ಪ್ರಿಯಾಂಕಾ ಛೋಪ್ರಾ. ಬಹುಶಃ ಮಿಸಸ್ ಬಟ್ಲರ್ ಆಗುವ ಇಚ್ಛೆ ಅವರಿಗೆ ಇರಲಿಲ್ಲವೇನೋ.!

  ಪ್ರಿಯಾಂಕಾಗಾಗಿ ಕಾಯುತ್ತಿರುವೆ ಎಂದಿದ್ದ ಜೆರಾರ್ಡ್

  ಪ್ರಿಯಾಂಕಾಗಾಗಿ ಕಾಯುತ್ತಿರುವೆ ಎಂದಿದ್ದ ಜೆರಾರ್ಡ್

  ''ನಾನಿನ್ನೂ ಒಂಟಿಯಾಗಿ ಇದ್ದೇನೆ. ಯಾಕಂದ್ರೆ, ನಾನು ಪ್ರಿಯಾಂಕಾಗಾಗಿ ಕಾಯುತ್ತಿರುವೆ'' ಎಂದು ಸಂದರ್ಶನವೊಂದರಲ್ಲಿ ಜೆರಾರ್ಡ್ ಜೋಕ್ ಕೂಡ ಮಾಡಿದ್ದರು. ಇಷ್ಟೆಲ್ಲ ಆಗಿದ್ದರೂ, ಪ್ರಿಯಾಂಕಾ ಮನಸ್ಸು ಜೆರಾರ್ಡ್ ಕಡೆ ವಾಲಲಿಲ್ಲ. ಇದೀಗ ಪ್ರಿಯಾಂಕಾ ಹೆಸರು ನಿಕಾ ಜೋನಾಸ್ ಜೊತೆಗೆ ತಳುಕು ಹಾಕಿಕೊಂಡಿದೆ. ಅದು ನಿಜವೋ, ಇಲ್ಲ ಜಸ್ಟ್ ಗಾಸಿಪ್ಪೋ.. ಅವರೇ ಸ್ಪಷ್ಟನೆ ಕೊಡಬೇಕು.

  English summary
  Did you know: Hollywood Actor Gerard Butler had proposed marriage to Bollywood Actress Priyanka Chopra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X