For Quick Alerts
  ALLOW NOTIFICATIONS  
  For Daily Alerts

  ಗಾಡ್ಜಿಲ್ಲಾ vs ಕಾಂಗ್: ಭಾರತದಲ್ಲಿ ಐದು ದಿನಕ್ಕೆ ಗಳಿದ್ದೆಷ್ಟು?

  |

  ಗಾಡ್ಜಿಲ್ಲಾ vs ಕಾಂಗ್ ಸಿನಿಮಾ ಕಳೆದ ಬುಧವಾರ ವರ್ಲ್ಡ್ ವೈಡ್ ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಹಾಲಿವುಡ್ ಚಿತ್ರಗಳಿಗೆ ಭಾರತದಲ್ಲಿ ಒಳ್ಳೆಯ ಓಪನಿಂಗ್ ಸಿಗುತ್ತದೆ. ಗಾಡ್ಜಿಲ್ಲಾ vs ಕಾಂಗ್ ಚಿತ್ರದ ಮೇಲೂ ಹೆಚ್ಚಿನ ನಿರೀಕ್ಷೆ ಇಡಲಾಗಿತ್ತು.

  ಆದರೆ, ಬಾಕ್ಸ್ ಆಫೀಸ್‌ನಲ್ಲಿ ಗಾಡ್ಜಿಲ್ಲಾ vs ಕಾಂಗ್ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ. ಕೊವಿಡ್ ಕಾರಣದಿಂದ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಕೊರತೆ ಎದುರಾಗಿದೆ. ಇದರ ಪರಿಣಾಮ ಗಳಿಕೆಯಲ್ಲೂ ಗಾಡ್ಜಿಲ್ಲಾ vs ಕಾಂಗ್ ಚಿತ್ರಕ್ಕೆ ಹಿನ್ನಡೆಯಾಗಿದೆ.

  ಜೇಮ್ಸ್ ಬಾಂಡ್ ಅಭಿಮಾನಿಗಳೇ ಅಟೆನ್ಷನ್: ಇಲ್ಲಿದೆ ಸಿನಿಮಾ ನೋಡಿ ಹಣ ಗೆಲ್ಲುವ ಸೂಪರ್ ಅವಕಾಶಜೇಮ್ಸ್ ಬಾಂಡ್ ಅಭಿಮಾನಿಗಳೇ ಅಟೆನ್ಷನ್: ಇಲ್ಲಿದೆ ಸಿನಿಮಾ ನೋಡಿ ಹಣ ಗೆಲ್ಲುವ ಸೂಪರ್ ಅವಕಾಶ

  ಗಾಡ್ಜಿಲ್ಲಾ vs ಕಾಂಗ್ ಸಿನಿಮಾ ಮೊದಲ ಐದು ದಿನಕ್ಕೆ ಭಾರತದಲ್ಲಿ ಒಟ್ಟು 28.96 ಕೋಟಿ ಗಳಿಕೆ ಕಂಡಿದೆ ಎಂದು ತರಣ್ ಆದರ್ಶ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

  ಗಾಡ್ಜಿಲ್ಲಾ vs ಕಾಂಗ್ ಗಳಿಕೆಯ ವಿವರ

  - ಮೊದಲ ದಿನ 6.40 ಕೋಟಿ

  - ಎರಡನೇ ದಿನ 5.40 ಕೋಟಿ

  - ಮೂರನೇ ದಿನ 4.22 ಕೋಟಿ

  - ನಾಲ್ಕನೇ ದಿನ 6.42 ಕೋಟಿ

  - ಐದನೇ ದಿನ 6.52 ಕೋಟಿ

  ಕೊರೊನಾ ಇಲ್ಲದೇ ಇದಿದ್ದರೆ ಗಾಡ್ಜಿಲ್ಲಾ vs ಕಾಂಗ್ ಸಿನಿಮಾ ಮೊದಲ ಮೂರು ಅಥವಾ ನಾಲ್ಕು ದಿನದಲ್ಲಿ 50 ಕೋಟಿ ಗಳಿಸುವ ಸಾಮರ್ಥ್ಯವಿತ್ತು. ಆದರೆ, ಕೊವಿಡ್ ಕಾರಣದಿಂದ ಹಿನ್ನಡೆ ಅನುಭವಿಸಿದೆ ಎಂದು ತರಣ್ ಆದರ್ಶ್ ಹೇಳಿದ್ದಾರೆ.

  ಮದಕರಿ ಸಿನಿಮಾಗೂ ಮುಂಚೆ ಗೋಲ್ಡ್ ರಿಂಗ್ ಮೂಲಕ ತೆರೆಮೇಲೆ ಬರಲಿದ್ದಾರೆ ಡಿ ಬಾಸ್ | Filmibeat Kannada

  ಗಾಡ್ಜಿಲ್ಲಾ, ಕಾಂಗ್: ಸ್ಕಲ್ ಐಲ್ಯಾಂಡ್, ಗಾಡ್ಜಿಲ್ಲಾ: ಕಿಂಗ್ ಆಫ್ ದಿ ಮಾನ್ಸ್ಟರ್ಸ್ ನಂತರ ಗಾಡ್ಜಿಲ್ಲಾ vs ಕಾಂಗ್ ಚಿತ್ರವೂ ಈ ಸರಣಿಯ ನಾಲ್ಕನೇ ಚಿತ್ರ ಇದಾಗಿದೆ. ಮಾರ್ಚ್ 24 ರಂದು ಭಾರತದಲ್ಲಿ ತೆರೆಕಂಡಿತ್ತು. ಎರಿಕ್ ಪಿಯರ್ಸನ್ ಮತ್ತು ಮ್ಯಾಕ್ಸ್ ಬೋರೆನ್‌ಸ್ಟೈನ್ ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಆಡಂ ವಿಂಗ್‌ಗರ್ಡ್ ನಿರ್ದೇಶಿಸಿದ್ದಾರೆ.

  English summary
  Godzilla vs Kong movie has collected 6.52 crores in Indian box office. total first 5 days gross is 28.96 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X