'ಅವತಾರ್' ಚಿತ್ರಕ್ಕೆ ಟೈಟಲ್ ಕೊಟ್ಟಿದ್ದೇ ಈ ಬಾಲಿವುಡ್ ನಟನಂತೆ.!
2009ರಲ್ಲಿ ತೆರೆಕಂಡಿದ್ದ ಹಾಲಿವುಡ್ ಸಿನಿಮಾ ಅವತಾರ್ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ವಿಶ್ವದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಅವತಾರ್ (2.790 billion) ಈಗ ಎರಡನೇ ಸ್ಥಾನಕ್ಕೆ ಕುಸಿದಿದೆ.
1997ರಲ್ಲಿ ಬಂದಿದ್ದ ಟೈಟಾನಿಕ್ ಚಿತ್ರವನ್ನ ಹಿಂದಿಕ್ಕಿ ಮೊದಲ ಸ್ಥಾನದಲ್ಲಿತ್ತು. ಇದೀಗ, ಅವೇಂಜರ್ಸ್ ಎಂಡ್ ಗೇಮ್ ಸಿನಿಮಾ ಅತಿ ಹೆಚ್ಚು ಗಳಿಕೆ ಕಂಡಿದೆ.
ಇಂತಹ ಸೂಪರ್ ಹಿಟ್ ಚಿತ್ರಕ್ಕೆ ಟೈಟಲ್ ಸೂಚಿಸಿದ್ದು ಬಾಲಿವುಡ್ ನಟ ಎಂಬುದು ಈಗ ಬಾಲಿವುಡ್ ನಲ್ಲಿ ಚರ್ಚೆಯಾಗ್ತಿದೆ. ಈ ವಿಷ್ಯವನ್ನ ಕೆಲವರು ಗಂಭೀರವಾಗಿ ಪರಿಗಣಿಸಿದ್ರೆ, ಮತ್ತೆ ಕೆಲವರು ಟ್ರೋಲ್ ಮಾಡ್ತಿದ್ದಾರೆ.

ಹೌದು, ಅವತಾರ್ ಚಿತ್ರಕ್ಕೆ ಟೈಟಲ್ ಕೊಟ್ಟಿದ್ದು ಬಾಲಿವುಡ್ ನಟ ಗೋವಿಂದ ಅಂತೆ. ಹೀಗಂತ ಸಂದರ್ಶನವೊಂದರಲ್ಲಿ ತಾವೇ ಹೇಳಿಕೊಂಡಿದ್ದಾರೆ. ಅವತಾರ್ ನಿರ್ದೇಶಕ ಜೇಮ್ಸ್ ಕ್ಯಾಮರೇನ್ ಗೆ ಅವತಾರ್ ಎಂದು ಶೀರ್ಷಿಕೆ ಸೂಚಿಸಿದ ಬಳಿಕ ಅದನ್ನ ಇಟ್ಟುಕೊಂಡರಂತೆ.
ಅಷ್ಟೇ ಅಲ್ಲ ಈ ಚಿತ್ರದಲ್ಲಿ ಒಂದು ಪಾತ್ರಕ್ಕೆ ಆಫರ್ ಕೂಡ ಮಾಡಿದ್ದರಂತೆ. ''ಸುಮಾರು ಏಳು ವರ್ಷ ಈ ಸಿನಿಮಾದ ಮೇಕಿಂಗ್ ಮಾಡಬೇಕಿತ್ತು. ಇದರಲ್ಲಿ 415 ದಿನದ ಕಾಲ್ ಶೀಟ್ ಕೇಳಿದ್ದರು. ಜೊತೆಗೆ ಇಡೀ ದೇಹಕ್ಕೆ ಬಣ್ಣ ಹಾಕಿ ನಟಿಸಬೇಕಿತ್ತು. ಅದು ನನ್ನಿಂದ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದೆ'' ಎಂದು ಬಹಿರಂಗಪಡಿಸಿದ್ದಾರೆ.
ಈ ವಿಷ್ಯವನ್ನಿಟ್ಟು ನಟ ಗೋವಿಂದ ಅವರನ್ನ ಟ್ರೋಲ್ ಮಾಡಲಾಗುತ್ತಿದೆ. ಅವತಾರ್ ಚಿತ್ರದಲ್ಲಿ ನಿಮಗೆ ಯಾವ ಪಾತ್ರಕ್ಕೆ ಅವಕಾಶ ಕೊಟ್ಟಿದ್ದರು? ಎಂದು ಟ್ರೋಲ್ ಮಾಡುತ್ತಿದ್ದಾರೆ. ನನಗೂ ಅವತಾರ್ ಚಿತ್ರಕ್ಕೆ ಆಫರ್ ಬಂದಿತ್ತು, ನಾನು ರಿಜೆಕ್ಟ್ ಮಾಡಿದೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











