Grammy Awards 2026 : ಯಾರ್ಯಾರ ಪಾಲಾಯ್ತು ಈ ಬಾರಿಯ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ? ಇಲ್ಲಿದೆ ಸಂಪೂರ್ಣ ಪಟ್ಟಿ

ಪ್ರಶಸ್ತಿಗಳು ಬಂದರೆ ಮಾತ್ರ ಚಿತ್ರ ಗೆದ್ದಂತೆ ಅಲ್ಲ. ಪ್ರಶಸ್ತಿ ಒಲಿದರೆ ಮಾತ್ರ ಅಭಿನಯಕ್ಕೆ ಬೆಲೆ ಸಿಕ್ಕಿದೆ ಎಂದಲ್ಲ. ಚಿತ್ರ ನೋಡಿದ ಪ್ರೇಕ್ಷಕರು ಭೇಷ್ ಎಂದಾಗಲೇ ಅದು ಚಿತ್ರವೊಂದರ ಗೆಲುವು. ಅಭಿನಯಕ್ಕೆ ಮನ ಸೋತು ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದರೆ ಅದು ಕೂಡ ಗೆಲುವು. ಪ್ರಶಸ್ತಿ ಇವತ್ತ್ ಬಂದರೆ ನಾಳೆ ಮರೆತು ಹೋಗುತ್ತೆ. ಆದರೆ ಚಿತ್ರಪ್ರೇಕ್ಷಕರು ಸಿನಿಮಾವನ್ನು ಗೆಲ್ಲಿಸಿದರೆ ಅದು ಮರೆಯಲಾಗದ ನೆನಪು.

ಆದರೂ ಕೂಡ ಪ್ರಶಸ್ತಿಗಳ ಬೆಲೆ ಕಡಿಮೆಯಾಗಿಲ್ಲ. ಅದರಲ್ಲಿಯೂ ಕೆಲ ಪ್ರಶಸ್ತಿಗಳಿಗೆ ಎಲ್ಲಿಲ್ಲದ ಮಹತ್ವ ಇದೆ. ಪ್ರಾಮುಖ್ಯತೆ ಇದೆ. ಆ ಪೈಕಿ ಗ್ರ್ಯಾಮಿ ಅವಾರ್ಡ್ ಕೂಡ ಒಂದು. ಹೌದು. 2026ರ ಗ್ರ್ಯಾಮಿ ಪ್ರಶಸ್ತಿ ಸಮಾರಂಭ ಲಾಸ್ ಏಂಜಲೀಸ್‌ನ ಕ್ರಿಪ್ಟೋ.ಕಾಮ್ ಅರೆನಾದಲ್ಲಿ ಅದ್ಧೂರಿಯಾಗಿ ನಡೆದಿದೆ. ಆರು ಬಾರಿ ನಿರೂಪಣೆ ಮಾಡಿ ಜನ ಮನ ಗೆದ್ದ ನೋವಾ ತಮ್ಮ ಕೊನೆಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗ್ರ್ಯಾಮಿ ನಿರೂಪಣೆಗೆ ವಿದಾಯ ಹೇಳಿದರು.

grammys-2026-bad-bunny-makes-history-with-album-of-the-year-kendrick-lamar-shatters-records-winn

ಪಾಪ್ ಸಂಗೀತದಿಂದ ಹಿಡಿದು ಜಾಜ್ ಸಂಗೀತದವರೆಗೆ 95 ವಿಭಾಗಗಳಲ್ಲಿ ಈ ಪ್ರಶಸ್ತಿಯನ್ನು ನೀಡಲಾಯ್ತು. ಬ್ಯಾಡ್ ಬನ್ನಿಯ ಸ್ಪ್ಯಾನಿಷ್ ಆಲ್ಬಂ ವರ್ಷದ ಆಲ್ಬಂ ಪ್ರಶಸ್ತಿಗೆ ಭಾಜನವಾಯ್ತು. ಸ್ಪ್ಯಾನಿಷ್ ಭಾಷೆಯ ಹಾಡೊಂದು ವರ್ಷದ ಆಲ್ಬಂ ಆಗಿ ಹೊರ ಹೊಮ್ಮಿದ್ದು ಐತಿಹಾಸಿಕ ಸಾಧನೆ. ಇದಲ್ಲದೇ ಬ್ಯಾಡ್ ಬನ್ನಿ ಅವರದ್ದೇ ಆದ ''ಡೆಬಿ ಟಿರಾರ್ ಮಾಸ್ ಫೋಟೋಸ್'' ಆಲ್ಬಂಗೆ ವರ್ಷದ ಆಲ್ಬಂ ಪ್ರಶಸ್ತಿ ಲಭಿಸಿತು. ಮತ್ತು ಅತ್ಯುತ್ತಮ ಮ್ಯೂಸಿಕಾ ಅರ್ಬನಾ ಆಲ್ಬಂ' ಸೇರಿ ಎರಡು ಟ್ರೋಫಿಗಳನ್ನು ಕೂಡ ಗೆದ್ದುಕೊಂಡಿತು.

ಕೆಂಡ್ರಿಕ್ ಲಾಮರ್ ಮತ್ತು ಎಸ್‌ಜೆಎಯ "ಲೂಥರ್"ಗೆ ವರ್ಷದಲ್ಲಿ ದಾಖಲೆ ಬರೆದ ಹಾಡು ಮತ್ತು ಬಿಲ್ಲಿ ಐಲಿಶ್‌ರ "ವೈಲ್ಡ್‌ಫ್ಲವರ್"ಗೆ 'ವರ್ಷದ ಹಾಡು ಪ್ರಶಸ್ತಿಯನ್ನು ನೀಡಲಾಯ್ತು. ಲೇಡಿ ಗಾಗಾ ಅವರ ''ಮೇಹೆಮ್'' ಆಲ್ಬಂ ಅತ್ಯುತ್ತಮ ಪಾಪ್ ವೋಕಲ್ ಆಲ್ಬಂ ಪ್ರಶಸ್ತಿಯನ್ನು ಬಾಚಿಕೊಂಡರೆ, ಒಲಿವಿಯಾ ಡೀನ್ ಅವರಿಗೆ ಅತ್ಯುತ್ತಮ ಹೊಸ ನಟಿ ಪ್ರಶಸ್ತಿಯನ್ನು ನೀಡಲಾಯ್ತು.

grammys-2026-bad-bunny-makes-history-with-album-of-the-year-kendrick-lamar-shatters-records-winn

2026ರ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದವರ ಸಂಪೂರ್ಣ ಪಟ್ಟಿ ಈ ಕೆಳಗಿನಂತೆ ಇದೆ.

ವಿಭಾಗ ಗೆದ್ದವರು ಹಾಡು
ವರ್ಷದ ಅಲ್ಬಮ್ ಬ್ಯಾಡ್ ಬನ್ನಿ ಡೆಬಿ ತಿರಾರ್ ಮಾಸ್ ಫೋಟೋಸ್
ವರ್ಷದ ರೆಕಾರ್ಡ್ ಕೆಂಡ್ರಿಕ್ ಲಾಮರ್ ಮತ್ತು ಎಸ್‌ಝಡ್‌ಎ ಲೂಥರ್
ವರ್ಷದ ಹಾಡು ಬಿಲ್ಲೀ ಐಲಿಶ್ ವೈಲ್ಡ್‌ಫ್ಲವರ್
ಅತ್ಯುತ್ತಮ ಹೊಸ ಕಲಾವಿದರು ಒಲಿವಿಯಾ ಡೀನ್ -
ಅತ್ಯುತ್ತಮ ಪಾಪ್ ವೋಕಲ್ ಅಲ್ಬಮ್ ಲೇಡಿ ಗಾಗಾ ಮೇಹೆಮ್
ಅತ್ಯುತ್ತಮ ಪಾಪ್ ಸೋಲೋ ಪರ್ಫಾರ್ಮೆನ್ಸ್ ಲೋಲಾ ಯಂಗ್ ಮೆಸ್ಸಿ
ಅತ್ಯುತ್ತಮ ರಾಪ್ ಅಲ್ಬಮ್ ಕೆಂಡ್ರಿಕ್ ಲಾಮರ್ ಜಿಎನ್‌ಎಕ್ಸ್
ಅತ್ಯುತ್ತಮ ರಾಕ್ ಅಲ್ಬಮ್ ಟರ್ನ್‌ಸ್ಟೈಲ್ ನೆವರ್ ಇನಫ್
ಅತ್ಯುತ್ತಮ ಮ್ಯೂಸಿಕಾ ಅರ್ಬನಾ ಅಲ್ಬಮ್ ಬ್ಯಾಡ್ ಬನ್ನಿ ಡೆಬಿ ತಿರಾರ್ ಮಾಸ್ ಫೋಟೋಸ್
ಅತ್ಯುತ್ತಮ ಆರ್ ಆಂಡ್ ಬಿ ಅಲ್ಬಮ್ ಲಿಯಾನ್ ಥಾಮಸ್ ಮಟ್
ವಿಷುವಲ್ ಮೀಡಿಯಾಕ್ಕಾಗಿ ಬರೆದ ಅತ್ಯುತ್ತಮ ಹಾಡು ಕೆ-ಪಾಪ್ ಡೆಮನ್ ಹಂಟರ್ಸ್ ಗೋಲ್ಡನ್
ಅತ್ಯುತ್ತಮ ಸಂಗೀತ ಚಿತ್ರ ಸ್ಟೀವನ್ ಸ್ಪಿಲ್ಬರ್ಗ್ (ನಿರ್ಮಾಪಕ) ಮ್ಯೂಸಿಕ್ ಬೈ ಜಾನ್ ವಿಲಿಯಮ್ಸ್

ಇನ್ನು 68ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟಿಬೆಟಿಯನ್ ಧರ್ಮಗುರು ದಲೈಲಾಮ ಅವರಿಗೆ ಕೂಡ ಪ್ರಶಸ್ತಿಯನ್ನು ನೀಡಲಾಯ್ತು. ದಲೈಲಾಮಾ ಅವರ ಪರವಾಗಿ ಗಾಯಕ-ಗೀತರಚನೆಕಾರ ರೂಫಸ್ ವೈನ್‌ರೈಟ್ ಪ್ರಶಸ್ತಿಯನ್ನು ಸ್ವೀಕರಿಸಿದರು. ದಲೈಲಾಮಾ ಅವರ ''ಮೆಡಿಟೇಷನ್ಸ್ : ದಿ ರಿಫ್ಲೆಕ್ಷನ್ ಆಫ್ ಹೀಸ್ ಹೋಲಿನೆಸ್ ದಿ ದಲೈಲಾಮ'' ಎಂಬ ಆಡಿಯೋ ಬುಕ್‌ಗಾಗಿ ಈ ಪ್ರಶಸ್ತಿಯನ್ನು ನೀಡಲಾಯ್ತು.

ಈ ವಿಭಾಗದಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆಟಾಂಜಿ ಬ್ರೌನ್ ಜಾಕ್ಸನ್, ಹಾಸ್ಯನಟ ಟ್ರೆವರ್ ನೋಹ್, ನಟಿ ಕ್ಯಾಥಿ ಗಾರ್ವರ್ ಹಾಗೂ ಫ್ಯಾಬ್ ಮೋರವನ್ ಸೇರಿದಂತೆ ಹಲವು ಪ್ರಮುಖನ್ನು ಹಿಂದಿಕ್ಕಿ ದಲೈಲಾಮ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು ವಿಶೇಷ.

ಇನ್ನುಳಿದಂತೆ ಈ ಬಾರಿ ಭಾರತದ ಅನಿಷ್ಕಾ ಶಂಕರ್ ಮತ್ತು ಶಕ್ತಿ ಬ್ಯಾಂಡ್ ನಾಮಿನೇಟ್ ಆಗಿದ್ದರು. ಆದರೆ ಪ್ರಶಸ್ತಿಯಿಂದ ಇವರು ವಂಚಿತರಾಗಿದ್ದಾರೆ. ಇನ್ನು ಈಗಾಗಲೇ 3 ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದು ಇತಿಹಾಸ ನಿರ್ಮಾಣ ಮಾಡಿರುವ ಕನ್ನಡಿಗ ರಿಕ್ಕಿ ಕೇಜ್ ಈ ಬಾರಿ ನಾಮಿನೇಟ್ ಆಗಿರಲಿಲ್ಲ. ಆದರೆ ರೆಡ್ ಕಾರ್ಪೆಟ್‌ನಲ್ಲಿ ರಿಕ್ಕಿ ಕೇಜ್ ಮಿಂಚಿದರು.

More from Filmibeat

English summary
Who won at the 68th Grammy Awards? Check the full 2026 winners list, from Bad Bunny’s historic Album of the Year to Kendrick Lamar’s record-breaking night.
Read more about: grammy award grammy awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X