ಆಶೀರ್ವಾದದ ನೆಪದಲ್ಲಿ ನನ್ನ ಬ್ಲೌಸ್ ಒಳಗೆ ಕೈಹಾಕಿದ,ಪೂಜಾರಿಯಿಂದ ನಟಿಗೆ ಲೈಂಗಿಕ ಕಿರುಕುಳ.!
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಕೆಲವರು ಮುಂದೆ ಬಂದು ತಮ್ಮ ಮೇಲಾದ ದೌರ್ಜನ್ಯದ ವಿರುದ್ದ ಹೋರಾಡುತ್ತಾರೆ. ಧೈರ್ಯ ಮಾಡಿ ತಮಗಾದ ಅನ್ಯಾಯದ ವಿರುದ್ದ ಧ್ವನಿ ಎತ್ತುತ್ತಾರೆ. ಇದಕ್ಕೆ ಲಿಶಲ್ಲಿನಿ ಕನರನ್ ಸದ್ಯದ ಉದಾಹರಣೆ.
ಹೌದು, ಲಿಶಲ್ಲಿನಿ ಕನರನ್ .. 2020ರಲ್ಲಿ ಮಿಸ್ ಗ್ರ್ಯಾಂಡ್ ಸೆಲಾಂಗರ್ ಪ್ರಶಸ್ತಿ ಪಡೆದ ಚೆಲುವೆ. ಇಷ್ಟೇ ಅಲ್ಲ 2021ರಲ್ಲಿ ಮಿಸ್ ಗ್ರ್ಯಾಂಡ್ ಮಲೇಶಿಯಾ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡವರು ಇವರು. ಮಲೇಶಿಯಾದ ''ಜೀಯೂಮ್ ನೀಯೂಮ್'' ಮತ್ತು ''ಥಿಗಿಲ್'' ವೆಬ್ ಸರಣಿಯಲ್ಲಿ ಕೂಡ ಕಾಣಿಸಿಕೊಂಡಿರುವ ಲಿಶಲ್ಲಿನಿ ನಿರೂಪಕಿಯಾಗಿ ಕೂಡ ಹೆಸರು ಮಾಡಿದ್ದಾರೆ.

ಇಂಥಾ ಲಿಶಲ್ಲಿನಿ ಕನರನ್ ಅವರ ಮೇಲೆ ಭಕ್ತಿಯ ಹೆಸರಿನಲ್ಲಿ ಮಲೇಷ್ಯಾದ ಸೆಪಾಂಗ್ನಲ್ಲಿರುವ ಮಾರಿಯಮ್ಮನ್ ದೇವಸ್ಥಾನದಲ್ಲಿನ ಭಾರತದ ಅರ್ಚಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದು ತಮ್ಮ ನೋವನ್ನು ಲಿಶಲ್ಲಿನಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹೊರ ಹಾಕಿದ್ದಾರೆ.
ಈ ಕುರಿತು ತಮ್ಮ ಸೋಶೀಯಲ್ ಮೀಡಿಯಾದಲ್ಲಿ ಸುದೀರ್ಘವಾದ ಬರಹವನ್ನು ಬರೆದುಕೊಂಡಿರುವ ಲಿಶಲ್ಲಿನಿ ನಾನೇನೂ ತುಂಬಾ ಧಾರ್ಮಿಕ ವ್ಯಕ್ತಿತ್ವದವಳಲ್ಲ. ನನಗೆ ಸರಿಯಾಗಿ ಪ್ರಾರ್ಥನೆ ಕೂಡ ಮಾಡಲು ಬರುವುದಿಲ್ಲ. ಈಗೀಗ ನನ್ನ ಮನಸು ಈ ಆಧ್ಯಾತ್ಮದತ್ತ ವಾಲುತ್ತಿದೆ. ಹೀಗಾಗಿ ನನ್ನ ತಾಯಿ ಭಾರತಕ್ಕೆ ತೆರಳಿರುವುದರಿಂದ ನಾನು ಒಬ್ಬಳೇ ಮಲೇಷ್ಯಾದ ಸೆಂಪಾಂಗ್ ನಲ್ಲಿರುವ ಮಾರಿಯಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ದೇವಾಲಯದ ಆಚರಣೆಗಳ ಪರಿಚಯವಿಲ್ಲದ ಕಾರಣ, ನಾನು ಸಾಮಾನ್ಯವಾಗಿ ಮಾರ್ಗದರ್ಶನಕ್ಕಾಗಿ ನನ್ನ ಅರ್ಚಕರನ್ನು ಅವಲಂಬಿಸಿದ್ದೆ ಎಂದಿರುವ ಲಿಶಲ್ಲಿನಿ ಕನರನ್ ನಾನು ದೇವರಿಗೆ ನಮಸ್ಕರಿಸುತ್ತಿದ್ದೆ ಆ ಸಮಯದಲ್ಲಿ ಬಂದ ಆ ಅರ್ಚಕರು ಆಶೀರ್ವಾದದ ರೂಪದಲ್ಲಿ ಪವಿತ್ರ ನೀರು ಮತ್ತು ರಕ್ಷಣಾತ್ಮಕ ದಾರ ಕೊಡುವುದಾಗಿ ಹೇಳಿದರು. ಈ ಹಿನ್ನೆಲೆ ನಾನು 90 ನಿಮಿಷಗಳ ಕಾಲ ಅವರಿಗಾಗಿ ಕಾದೆ ಎಂದು ಹೇಳಿದ್ದಾರೆ.
ಮುಂದುವರೆದು ಆ ನಂತರ ಬಂದ ಅರ್ಚಕರು ನನ್ನನ್ನು ಹಿಂಬಾಲಿಸು ಎಂದು ಹೇಳಿದರು.
ನಾನೂ ಕೂಡ ಅವರ ಹಿಂದೆಯೇ ಹೋದೆ. ಈ ವೇಳೆ ಪೂಜಾರಿ ಒಂದು ಸುವಾಸನೆ ಭರಿತ ನೀರನ್ನು ತೋರಿಸಿ ಇದು ಭಾರತದಿಂದ ಬಂದ ಪವಿತ್ರ ನೀರು. ಸಾಮಾನ್ಯ ಜನರಿಗೆ ಇದನ್ನು ನಾವು ನೀಡುವುದಿಲ್ಲ ಎಂದು ಗುಲಾಬಿ ಸಾರ ಇರುವ ನೀರನ್ನು ಮೈಮೇಲೆ ಎರಚಿದರು. ಕಣ್ಣಿನ ಮೇಲೆ ನೀರು ಬಿದ್ದ ಕಾರಣ ತೆರೆಲಾಗಲಿಲ್ಲ ಎಂದು ಬರೆದುಕೊಂಡಿರುವ ಲಿಶಲ್ಲಿನ್ ಇದೇ ಸಮಯದಲ್ಲಿ ಆ ಅರ್ಚಕರು ಧರಿಸಿದ್ದ ಬಟ್ಟೆ ತೆಗೆಯುವಂತೆ ಸೂಚಿಸಿದರು ಆಗ ನಾನು ಅದು ತುಂಬಾ ಬಿಗಿಯಾಗಿದೆ, ತೆಗೆಯಲು ಆಗುವುದಿಲ್ಲ ಎಂದು ಹೇಳಿದೆ. ಆಗ ನನನ್ನು ಗದರಿಸಿ ಅಷ್ಟೊಂದು ಬಿಗಿ ಬಟ್ಟೆ ಧರಿಸಬಾರದು ಎಂದು ಹೇಳಿ ಹಿಂದೆ ಬಂದು ನಿಂತುಕೊಂಡರು ಎಂದು ಲಿಶಲ್ಲಿನ್ ಹೇಳಿದ್ದಾರೆ.
ಆ ನಂತರ ತಕ್ಷಣವೇ ಏನೋ ಗೊಣುಗುತ್ತಾ, ನನ್ನ ಬ್ಲೌಸ್ ಒಳಗೆ ಕೈಹಾಕಿ ಅನುಚಿತವಾಗಿ ಮುಟ್ಟಲು ಆರಂಭಿಸಿದರು ಎಂದಿರುವ ಲಿಶಲ್ಲಿನ್ ನನಗೆ ಆ ಸಮಯದಲ್ಲಿ ಅಲ್ಲಿಂದ ಎದ್ದು ಹೋಗಲು ಸಾಧ್ಯವಾಗದೇ ಮಾತನಾಡಲು ಆಗದೇ ಏನು ಮಾಡಬೇಕೆಂದು ಗೊತ್ತಾಗದೇ ತಟಸ್ಥಳಾಗಿ ನಿಂತುಬಿಟ್ಟೆ ಎಂದು ಹೇಳಿದ್ಧಾರೆ.
ನನ್ನ ಎದೆಯೊಳಗೆ ಕೈಹಾಕಿ ನಾನು ಧರಿಸಿದ್ದ ಪಂಜಾಬಿ ಡ್ರೆಸ್ ತೆಗೆಯುವಂತೆ ಹೇಳಿದೆ. ಈ ವೇಳೆ ನಾನು ಡ್ರೆಸ್ ಟೈಟ್ ಇದೆ ಎಂದು ಡ್ರೆಸ್ ತೆರೆಯಲು ವಿರೋಧಿಸಿದೆ. ಈ ವೇಳೆ ಕೋಪಗೊಂಡ ಪೂಜಾರಿ ದೇಗುಲಕ್ಕೆ ಬಂದಾಗ ಇಂತಹ ಟೈಟ್ ಡ್ರೆಸ್ ಗಳನ್ನು ಧರಿಸಬಾರದು ಎಂದು ಗದರಿದ. ಬಳಿಕ ನನ್ನ ತಲೆ ಮೇಲೆ ಕೈ ಇಟ್ಟು ಬ್ಲೌಸ್ ನೊಳಗೆ ಕೈಹಾಕಿದ ಎಂದು ಬರೆದುಕೊಂಡಿದ್ದಾರೆ.
ಸದ್ಯ ತಮ್ಮ ಮೇಲೆ ನಡೆದ ಈ ಲೈಂಗಿಕ ದೌರ್ಜನ್ಯದ ಕುರಿತು ಸೆಪಾಂಗ್ ಜಿಲ್ಲಾ ಪೊಲೀಸರಿಗೆ ಲಿಶಲ್ಲಿನಿ ಕನರನ್ ಜುಲೈ.4 ರಂದು ದೂರು ನೀಡಿದ್ದಾರೆ. ಇನ್ನು ಅರ್ಚಕ ಸದ್ಯ ಪರಾರಿಯಾಗಿದ್ದು ದೂರು ದಾಖಲಿಸಿಕೊಂಡಿರುವ ಸೆಂಪಾಂಗ್ ಪೊಲೀಸರು ಪರಾರಿಯಾಗಿರುವ ಪೂಜಾರಿಗಾಗಿ ಶೋಧ ನಡೆಸುತ್ತಿದ್ದಾರೆ.


Click it and Unblock the Notifications