For Quick Alerts
  ALLOW NOTIFICATIONS  
  For Daily Alerts

  'ಹ್ಯಾರಿ ಪಾಟರ್' ಖ್ಯಾತಿಯ ನಟ ಪೌಲ್ ರಿಟರ್ ಬ್ರೇನ್ ಟ್ಯೂಮರ್‌ನಿಂದ ನಿಧನ

  |

  ಹಾಲಿವುಡ್‌ನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಬ್ರಿಟನ್‌ನ ಖ್ಯಾತ ನಟ ಪೌಲ್ ರಿಟರ್ ನಿಧನ ಹೊಂದಿದ್ದಾರೆ. ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ 54 ವರ್ಷದ ನಟ ಪೌಲ್ ರಿಟರ್ ಸೋಮವಾರ (ಏಪ್ರಿಲ್ 6) ರಾತ್ರಿ ತನ್ನ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ ರಿಟರ್ ಪರ ವಕ್ತಾರರು ಮಾಹಿತಿ ನೀಡಿದ್ದಾರೆ.

  ಸಿನಿಮಾ ಮಾತ್ರವಲ್ಲದೆ ಟಿವಿ ಮತ್ತು ರಂಗಭೂಮಿಯಲ್ಲಿ ಖ್ಯಾತಿಗಳಿಸಿದ್ದ ಪೌಲ್ ನಿಧನಕ್ಕೆ ಅಭಿಮಾನಿಗಳು ಮತ್ತು ಆಪ್ತರು ಸಂತಾಪ ಸೂಚಿಸುತ್ತಿದ್ದಾರೆ. ಹ್ಯಾರಿ ಪಾಟರ್ ಮತ್ತು ಹಾಫ್ ಬ್ಲಡ್ ಪ್ರಿನ್ಸ್ ಮತ್ತು ಕ್ವಾಂಟಮ್ ಆಫ್ ಸೊಲೇಸ್ ಸೇರಿದಂತೆ ಅನೇಕ ಜನಪ್ರಿಯ ಸಿನಿಮಾಗಳಲ್ಲಿ ರಿಟರ್ ನಟಿಸಿದ್ದರು.

  ನಟಿ ಪ್ರತಿಮಾದೇವಿ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ ಯಡಿಯೂರಪ್ಪನಟಿ ಪ್ರತಿಮಾದೇವಿ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ ಯಡಿಯೂರಪ್ಪ

  ಇನ್ನು ಫ್ರೈಡ್ ನೈಟ್ ಡಿನ್ನರ್ ಮತ್ತು ಚೆರ್ನೋಬಿಲ್ ಸೇರಿದಂತೆ ಅನೇಕ ಧಾರಾವಾಹಿಗಳಲ್ಲೂ ನಟಿಸಿದ್ದರು. ರಿಟರ್ ಒಬ್ಬ ಅದ್ಭುತ ರಂಗಭೂಮಿ ಕಲಾವಿದರಾಗಿದ್ದರು. 2006ರಲ್ಲಿ ರಿಟರ್ ಪ್ರತಿಷ್ಠಿತ ಆಲಿವಿಯರ್ ಪ್ರಶಸ್ತಿ ಮತ್ತು 2019ರಲ್ಲಿ ಟೋನಿ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿದ್ದರು.

  ಕಾಲು ಲಕ್ಷದ ಮಾಸ್ಕ್ ಹಾಕಿರೋ ಸೆಲ್ಫೀ ಫೋಟೋ ಶೇರ್ ಮಾಡಿದ ನಟಿ ಕರೀನಾ ಕಪೂರ್ | Filmibeat Kannada

  ಪೌಲ್ ರಿಟರ್ ನಿಧನದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಕ್ತಾರರು, 'ಪೌಲ್ ನಿಧನರಾದರು ಎಂದು ತೀವ್ರ ವಿಷಾದದೊಂದಿಗೆ ತಿಳಿಸುತ್ತಿದ್ದೇವೆ. ಅವರ ಕೊನೆಯ ಕ್ಷಣದಲ್ಲಿ ಅವರ ಜೊತೆ ಪತ್ನಿ ಮತ್ತು ಇಬ್ಬರು ಮಕ್ಕಳು ಜೊತೆಯಲ್ಲಿದ್ದರು. ಪೌಲ್ ರಿಟರ್ ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದರು' ಎಂದು ತಿಳಿಸಿದ್ದಾರೆ.

  English summary
  Harry Potter fame British Actor Paul Ritter dies of brain tumors at 54.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X