ಟಾಮ್ ಕ್ರೂಸ್‌ನ ಹಿಂದಿಕ್ಕಿದ ರಾಮ್‌ಚರಣ್: ಶೀಘ್ರದಲ್ಲೇ ಹಾಲಿವುಡ್ ಅಖಾಡಕ್ಕೆ 'ಚಿರು'ತ ಎಂಟ್ರಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ಆರ್ಭಟ ಜೋರಾಗಿದೆ. ಸದ್ಯ ಅಮೆರಿಕಾದಲ್ಲಿ ಬೀಡು ಬಿಟ್ಟಿರುವ ಚರಣ್ ಆಸ್ಕರ್ ಪ್ರಮೋಷನ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಹಾಲಿವುಡ್‌ನ ಪ್ರತಿಷ್ಠಿತ ಪ್ರಶಸ್ತಿಗಳ ನಾಮಿನೇಷನ್ಸ್‌ನಲ್ಲಿ 'RRR' ಸಿನಿಮಾ ಕಾಣಿಸಿಕೊಂಡಿದೆ. ಓರಿಜಿನಲ್ ಸಾಂಗ್ ವಿಭಾಗದಲ್ಲಿ ಚಿತ್ರದ 'ನಾಟು ನಾಟು' ಸಾಂಗ್ ಆಸ್ಕರ್‌ಗೂ ನಾಮಿನೇಟ್ ಆಗಿದೆ. ಮಾರ್ಚ್ 12ಕ್ಕೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

15 ದಿನ ಮೊದಲೇ ರಾಮ್‌ಚರಣ್ ಹಾಗೂ ರಾಜಮೌಳಿ ಅಮೆರಿಕಾ ತಲುಪಿದ್ದಾರೆ. ಚಿತ್ರಕ್ಕೆ 4 ವಿಭಾಗಗಳಲ್ಲಿ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ ಸಿಕ್ಕಿದೆ. ಮೌಳಿ- ಚರಣ್ ಅದನ್ನು ಸ್ವೀಕರಿಸಿದ್ದಾರೆ. ಬರೀ ಸಿನಿಮಾ ಮಾತ್ರವಲ್ಲ ಈಗ ರಾಮ್‌ಚರಣ್ ಹಾಗೂ ತಾರಕ್ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ 'ಬೆಸ್ಟ್ ಆಕ್ಷನ್ ಇನ್ ಆಕ್ಷನ್ ಮೂವಿ' ಕ್ಯಾಟಗರಿಯಲ್ಲಿ ನಾಮಿನೇಟ್ ಆಗಿದ್ದಾರೆ. ಟಾಮ್ ಕ್ರೂಜ್, ಬ್ರಾಡ್ ಪಿಟ್, ನಿಕೋಲಸ್ ಕೇಜ್‌ರಂತಹ ಹಾಲಿವುಡ್ ಹೀರೊಗಳಿಗೆ ಪೈಪೋಟಿ ಕೊಡುತ್ತಿದ್ದಾರೆ.

HCA Awards: Once I finished my commitments, Ill try to debut in Hollywood Says RRR actor Ramcharan

ನಾಮಿನೇಷನ್‌ನಲ್ಲಿ ನಿಕೋಲಸ್ ಕೇಜ್ ಮೊದಲ ಸ್ಥಾನದಲ್ಲಿ ಇದ್ದರೆ, ಟಾಮ್ ಕ್ರೂಸ್‌ನ ಹಿಂದಿಕ್ಕಿ ಚರಣ್ 2ನೇ ಸ್ಥಾನಕ್ಕೇರಿದ್ದಾರೆ. ಸದ್ಯ ತೆಲುಗು ಮಾಧ್ಯಮಗಳಲ್ಲಿ ಮಾತ್ರವಲ್ಲ ಹಾಲಿವುಡ್ ಮಾಧ್ಯಮಗಳಲ್ಲೂ ರಾಮ್ ಚರಣ್ ಹೆಸರು ಜೋರಾಗಿ ಸದ್ದು ಮಾಡ್ತಿದೆ. ಇನ್ನು ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ಸ್‌ನಲ್ಲಿ ಸ್ಪಾಟ್‌ಲೈಟ್ ಅವಾರ್ಡ್ ಪಡೆದು ರಾಮ್‌ಚರಣ್ ಪೋಸ್ ಕೊಟ್ಟಿದ್ದಾರೆ. ಈ ಪ್ರಶಸ್ತಿ ಪಡೆದ ಮೊದಲ ಭಾರತದ ನಟ ಎನಿಸಿಕೊಂಡಿದ್ದಾರೆ. ಒಟ್ನಲ್ಲಿ ಎಲ್ಲೆಲ್ಲೂ ಈಗ ಮೆಗಾ ಪವರ್ ಸ್ಟಾರ್ ದರ್ಬಾರ್ ನಡೀತಿದೆ.

ಹಾಲಿವುಡ್‌ ಹೆಸರಾಂತ ಟಾಕ್ ಶೋಗಳಲ್ಲಿ ರಾಮ್‌ಚರಣ್ ಭಾಗವಹಿಸುತ್ತಿದ್ದಾರೆ. ಅಮೆರಿಕಾಗೆ ಅಡಿ ಇಡುತ್ತಿದ್ದಂತೆ 'ಗುಡ್ ಮಾರ್ನಿಂಗ್ ಅಮೆರಿಕಾ' ಶೋನಲ್ಲಿ ಭಾಗವಹಿಸಿದ್ದರು. ನಂತರ ABC ಮಾಧ್ಯಮಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಹಾಲಿವುಡ್ ಎಂಟ್ರಿ ಬಗ್ಗೆ ರಾಮ್‌ಚರಣ್ ಮಾತನಾಡಿದ್ದಾರೆ. ಈ ಸುದ್ದಿ ಅಭಿಮಾನಿಗಳ ಮನಗೆದ್ದಿದೆ. ಈಗಾಗಲೇ ಭಾರತದ ಸಾಕಷ್ಟು ಕಲಾವಿದರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಯಾರು ಸದ್ದು ಮಾಡಿಲ್ಲ.

"ಸದ್ಯ ನನ್ನ ಕೈಯಲ್ಲಿ ಒಂದಷ್ಟು ಪ್ರಾಜೆಕ್ಟ್‌ಗಳಿವೆ. ಅವುಗಳನ್ನು ಮುಗಿಸಬೇಕು. ಅದೆಲ್ಲಾ ಮುಗಿದ ಮೇಲೆ ಹಾಲಿವುಡ್‌ಗೆ ಬರುವ ಬಗ್ಗೆ ಯೋಚನೆ ಮಾಡುತ್ತೇನೆ. ಹಾಲಿವುಡ್ ಫಿಲ್ಮ್ ಮೇಕರ್ಸ್ ಭಾರತದ ಪ್ರತಿಭೆಗಳನ್ನು ಗುರುತಿಸಬೇಕು. ಶೀಘ್ರದಲ್ಲೇ ನನಗೂ ಒಳ್ಳೆ ಕರೆಗಳು ಬರುತ್ತದೆ ಎಂದುಕೊಂಡಿದ್ದೇನೆ" ಎಂದು ರಾಮ್‌ಚರಣ್ ಹೇಳಿದ್ದಾರೆ. ಈ ಸುದ್ದಿ ಸಹಜವಾಗಿಯೇ ಮೆಗಾ ಫ್ಯಾಮಿಲಿ ಅಭಿಮಾನಿಗಳಿಗೆ ಸಂತಸ ತಂದಿದೆ.

HCA Awards: Once I finished my commitments, Ill try to debut in Hollywood Says RRR actor Ramcharan

ಮಾರ್ಚ್ 12ಕ್ಕೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅದರಲ್ಲಿ 'RRR' ಚಿತ್ರತಂಡ ಭಾಗಿ ಆಗಲಿದೆ. ಆ ದಿನ ಚರಣ್ ಹಾಗೂ ತಾರಕ್‌ಗೆ ಹಾಲಿವುಡ್ ಫಿಲ್ಮ್ ಮೇಕರ್ಸ್‌ ಪರಿಚಯವಾಗಲಿದೆ. ಇನ್ನು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ 'ಜೇಮ್ಸ್‌ ಬಾಂಡ್' ಹಾಗೂ 'ಫಾಸ್ಟ್ ಫ್ಯೂರಿಯಸ್' ಸರಣಿಯ ಮುಂದಿನ ಸಿನಿಮಾದಲ್ಲಿ ಚರಣ್ ನಟಿಸಿದರೆ ಚೆನ್ನಾಗಿರುತ್ತದೆ ಎನ್ನುವ ಟ್ರೆಂಡ್ ಶುರುವಾಗಿದೆ. ಶೀಘ್ರದಲ್ಲೇ ಅಂತಾದೊಂದು ಬ್ರೇಕಿಂಗ್ ನ್ಯೂಸ್ ಸಿಕ್ಕರೂ ಅಚ್ಚರಿಯಿಲ್ಲ.

ಶಂಕರ್ ನಿರ್ದೇಶನದ ಚಿತ್ರದಲ್ಲಿ ಸದ್ಯ ರಾಮ್‌ಚರಣ್ ನಟಿಸುತ್ತಿದ್ದಾರೆ. ಇನ್ನು ಹೆಸರಿಡದ ಈ ಚಿತ್ರದಲ್ಲಿ ಚರಣ್ ಡಬಲ್ ರೋಲ್ ಪ್ಲೇ ಮಾಡ್ತಿದ್ದಾರೆ. 'ಉಪ್ಪೆನ' ಸಿನಿಮಾ ನಿರ್ದೇಶಕ ಬುಚ್ಚಿಬಾಬು ನಿರ್ದೇಶನದ ಚಿತ್ರಕ್ಕೂ ಸೈ ಎಂದಿದ್ದಾರೆ. ಮತ್ತೆರಡು ಸಿನಿಮಾಗಳಿಗೆ ಚರಣ್ ಕಮಿಟ್ ಆಗಿದ್ದಾರೆ. ಇನ್ನು 'ರಚ್ಚ' ಚಿತ್ರದಲ್ಲಿ ಟೈಟಲ್ ಸಾಂಗ್‌ನಲ್ಲಿ ರಾಮ್‌ಚರಣ್‌ನ ಗ್ಲೋಬಲ್ ಸ್ಟಾರ್ ಎಂದು ಕರೆದಿದ್ದರು. ಈಗ ಅದು ನಿಜವಾಗಿದೆ ಎಂದು ಚಿತ್ರದ ನಿರ್ದೇಶಕ ಟ್ವೀಟ್ ಮಾಡಿದ್ದಾರೆ.

More from Filmibeat

English summary
HCA Awards: Once I finished my commitments, I'll try to debut in Hollywood Says RRR actor Ramcharan. He Reveals in his latest media interaction. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X