Oscars 2025 Winners List ; ಆಸ್ಕರ್‌ ಅಂಗಳದಲ್ಲಿ 'ಅನೋರಾ' ಅಬ್ಬರ, ಯಾರಿಗೆಲ್ಲ ಒಲಿಯಿತು ಅತ್ಯುನ್ನತ ಪ್ರಶಸ್ತಿ ?

ಚಲನಚಿತ್ರ ರಂಗದ ಅತ್ಯಂತ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭ ಇಂದು ಅದ್ಧೂರಿಯಾಗಿ ನಡೆಯುತ್ತಿದೆ. ಅಮೆರಿಕಾದ ಲಾಸ್ ಏಜಂಲಿಸ್‌ನಲ್ಲಿರುವ ಡಾಲ್ಭಿ ಥಿಯೇಟರ್‌ನಲ್ಲಿ ಈ ವರ್ಣ ರಂಜಿತ ಸಮಾರಂಭ ನಡೆಯುತ್ತಿದ್ದು ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಹಾಗಿದ್ದರೆ ಯಾರಿಗೆಲ್ಲ ಈ ಬಾರಿಯ ಆಸ್ಕರ್ ಸಿಕ್ಕಿದೆ. ಅತ್ಯುತ್ತಮ ನಾಯಕ ನಾಯಕಿ ಯಾರು ? ಬೆಸ್ಟ್ ಡೈರೆಕ್ಟರ್ ಎಂಬ ಪಟ್ಟ ಸಿಕ್ಕಿದ್ದು ಯಾರಿಗೆ ? ಯಾವ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಸಿಕ್ಕಿದೆ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Here Are the Winners from the 97th Academy Awards at the 2025 Oscars

ಅತ್ಯುತ್ತಮ ಪೋಷಕ ನಟ ಮತ್ತು ನಟಿ

ಎ ರಿಯಲ್ ಪೈನ್ ಚಿತ್ರದಲ್ಲಿನ ಅಭಿನಯಕ್ಕೆ ಕೀರನ್ ಕಲ್ಕಿನ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದರೆ, ಎಮಿಲಿಯಾ ಪೆರೆಜ್ ಚಿತ್ರದಲ್ಲಿನ ಅಭಿನಯಕ್ಕೆ ಜೊಯಿ ಸಲ್ಡಾನಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇನ್ನು ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ ಭಾವುಕರಾದ ಜೊಯಿ ತಮ್ಮ ಬೆನ್ನೆಲುಬಾದ ಕುಟುಂಬಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ.

ಅತ್ಯುತ್ತಮ ನಟ

ಇನ್ನು ಬೆಸ್ಟ್ ಆಕ್ಟರ್ ಪ್ರಶಸ್ತಿಯನ್ನು ಎ ಕಂಪ್ಲೀಟ್ ಅನ್‌ನೌನ್‌ ಚಿತ್ರಕ್ಕೆ ತಿಮೋಥಿ ಚಲಮೆಟ್ ಪಡೆಯಬಹುದು ಎಂದು ಅನೇಕರು ಅಂದುಕೊಂಡಿದ್ದರು. ತಿಮೋಥಿಗೆ ಸಿಗದೇ ಇದ್ದರೆ ದಿ ಬ್ರುಟ್ ಲಿಸ್ಟ್ ಚಿತ್ರದಲ್ಲಿನ ಅಭಿನಯಕ್ಕೆ ಆಡ್ರಿಯನ್ ಬ್ರಾಡಿ ಆಸ್ಕರ್‌ನ ಮುಡಿಗೇರಿಸಿಕೊಳ್ಳಬಹುದು ಎಂದು ಹಾಲಿವುಡ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಅದ್ರಂತೆ ತಿಮೋಥಿ ಚಲಮೆಟ್ ಅವರನ್ನು ಹಿಂದಿಕ್ಕಿ ಆಡ್ರಿಯನ್ ಬಾಡಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.

ಅತ್ಯುತ್ತಮ ನಟಿ

ಇನ್ನು ಬೆಸ್ಟ್ ಹೀರೋಯಿನ್ ವಿಭಾಗದಲ್ಲಿ ಅನೋರಾದಲ್ಲಿನ ತಮ್ಮ ಮನೋಜ್ಞ ಅಭಿನಯಕ್ಕೆ ಮೈಕಿ ಮ್ಯಾಡಿಸನ್‌ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಎಮಿಲಿಯಾ ಪರೆಜ್ ಚಿತ್ರದಲ್ಲಿನ ಅಭಿನಯಕ್ಕೆ ಡೆಮಿ ಮೂರ್‌ ಕೂಡ ಈ ವಿಭಾಗದಲ್ಲಿ ನಾಮಾಂಕಿತಗೊಂಡಿದ್ದರು.

ಅತ್ಯುತ್ತಮ ನಿರ್ದೇಶಕ

ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ 97ನೇ ಅಕಾಡೆಮಿ ಅವಾರ್ಡ್‌ನ ಸೀನ್ ಬೇಕರ್ ಪಡೆದುಕೊಂಡಿದ್ದಾರೆ. 'ಅನೋರಾ' ಸಿನಿಮಾದ ನಿರ್ದೇಶನಕ್ಕಾಗಿ ಈ ಪ್ರಶಸ್ತಿ ಲಭಿಸಿದೆ. ಐದು ವರ್ಷವಿರುವಾಗ ತನ್ನ ತಾಯಿ ಸಿನಿಮಾವನ್ನು ಪರಿಚಯಿಸಿದರು. ಇಂದು ಅವರ ಬರ್ತ್‌ಡೇ. ಅದೇ ದಿನ ಆಸ್ಕರ್ ಪ್ರಶಸ್ತಿ ಬಂದಿದೆ ಎಂದು ವೇದಿಕೆ ಮೇಲೆ ಹೇಳಿದ್ದಾರೆ ಸೀನ್ ಬೇಕರ್. ವಿಶೇಷ ಅಂದರೆ ಇದೇ ಚಿತ್ರದ ಎಡಿಟಿಂಗ್‌ನ ಕೂಡ ಸೀನ್ ಬೇಕರ್ ಮಾಡಿದ್ದಾರೆ. ಅತ್ಯುತ್ತಮ ಸಂಕಲನ ವಿಭಾಗದಲ್ಲಿ ಕೂಡ ಪ್ರಶಸ್ತಿ ಪಡೆದಿದ್ದಾರೆ.

ಅತ್ಯುತ್ತಮ ಚಿತ್ರ ಅನೋರಾ

ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ನಟಿ, ಹೀಗೆ ನಾಲ್ಕು ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದ ಅನೋರಾ ಅತ್ಯುತ್ತಮ ಚಿತ್ರವಾಗಿ ಕೂಡ ಈ ಬಾರಿಯ ಆಸ್ಕರ್‌ನಲ್ಲಿ ಹೊರ ಹೊಮ್ಮಿದೆ. ಈ ಮೂಲಕ ಎಲ್ಲರನ್ನು ಈ ಚಿತ್ರತಂಡ ನಿಬ್ಬೇರಗಾಗಿಸಿದೆ. ಇನ್ನುಳಿದಂತೆ ಉಳಿದ ಆಸ್ಕರ್ ವಿಜೇತರು ಯಾರು ಯಾರು ಎಂದು ತಿಳಿಯಲು ಮುಂದೆ ಓದಿ

ಆಸ್ಕರ್ 2024 ವಿಜೇತರ ಪಟ್ಟಿ

ಅತ್ಯುತ್ತಮ ಅಳವಡಿಸಿದ ಚಿತ್ರಕಥೆ - ಪೀಟರ್ ಸ್ಟ್ರೌಘನ್ ( ಕಾನ್‌ಕ್ಲೇವ್)

ಅತ್ಯುತ್ತಮ ಚಿತ್ರಕಥೆ - ಸೀನ್ ಬೇಕರ್ (ಅನೋರಾ)

ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ - 'ಐ ಆಮ್ ಸ್ಟಿಲ್ ಹಿಯರ್'
(ಬ್ರೆಜಿಲ್)

ಅತ್ಯುತ್ತಮ ಸಾಕ್ಷ್ಯಚಿತ್ರ - ನೋ ಅದರ್ ಲ್ಯಾಂಡ್

ಅತ್ಯುತ್ತಮ ಸಾಕ್ಷ್ಯ ಕಿರುಚಿತ್ರ - ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ

ಅತ್ಯುತ್ತಮ ಲೈವ್ ಆಕ್ಷನ್ಸ್‌ ಕಿರುಚಿತ್ರ - ಐ ಆಮ್ ನಾಟ್ ಎ ರೋಬೋಟ್

ಅತ್ಯುತ್ತಮ ಸಂಗೀತ - ಡೆನಿಯಲ್ ಬ್ಲೂಮ್‌ಬರ್ಗ್ ( ದಿ ಬ್ರುಟ್ ಲಿಸ್ಟ್)

ಅತ್ಯುತ್ತಮ ಮೂಲ ಗೀತೆ- ಎಲ್ ಮಾಲ್ ( ಎಮಿಲಿಯಾ ಪೆರೆಜ್)

ಅತ್ಯುತ್ತಮ ಸೌಂಡ್- ಡ್ಯೂನ್ ಪಾರ್ಟ್ 2

ಅತ್ಯುತ್ತಮ ಛಾಯಾಗ್ರಹಣ - ಲೋಲ್ ಕ್ರಾಲಿ (ದಿ ಬ್ರುಟಲಿಸ್ಟ್)

ಅತ್ಯುತ್ತಮ ವಿಷುವಲ್ ಎಫೆಕ್ಟ್‌ - ಡ್ಯೂನ್ ಪಾರ್ಟ್ 2

ಅತ್ಯುತ್ತಮ ನಿರ್ಮಾಣ ವಿನ್ಯಾಸ - ನಾಥನ್ ಕ್ರೌಲಿ ಮತ್ತು ಲೀ ಸ್ಯಾಂಡೇಲ್ಸ್ ( ವಿಕೆಡ್ )

ಅತ್ಯುತ್ತಮ ಸಂಕಲನ - ಸೀನ್ ಬೇಕರ್ ( ಅನೋರಾ )

ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ- ಫ್ಲೋ

ಅತ್ಯುತ್ತಮ ವಸ್ತ್ರ ವಿನ್ಯಾಸಕ - ಪಾಲ್ ತಾಜ್‌ವೆಲ್ (ವಿಕೆಡ್)

More from Filmibeat

Read more about: oscars 2025 filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X