ಕಡಿಮೆ ಬಟ್ಟೆ ಧರಿಸಲು ಹೆಚ್ಚು ಹಣ ಖರ್ಚು ಮಾಡುವ ನಟಿಯರಿವರು!

By ಫಿಲ್ಮಿಬೀಟ್ ಡೆಸ್ಕ್‌

ಸಿನಿಮಾ ನಟಿಯರು ಧರಿಸುವ ಬಟ್ಟೆ ಬಗ್ಗೆ ಕುತೂಹಲ ಹೆಚ್ಚು. ಬಣ್ಣ-ಬಣ್ಣದ ವಿವಿಧ ವಿನ್ಯಾಸದ ಉಡುಪುಗಳನ್ನು ನಟಿಯರು ಧರಿಸುತ್ತಾರೆ. ಒಮ್ಮೆ ಧರಿಸಿದ್ದನ್ನು ಪುನರಾವರ್ತಿಸದ ನಟಿಯರೂ ಸಹ ಬಾಲಿವುಡ್‌ನಲ್ಲಿದ್ದಾರೆ.

ಅವಾರ್ಡ್ ಕಾರ್ಯಕ್ರಮಗಳಲ್ಲಿಯಂತೂ ನಟೀಮಣಿಯರ ಉಡುಗೆ ಹೆಚ್ಚಿನ ರಂಗು, ವಿನ್ಯಾಸ ಪಡೆದುಕೊಂಡಿರುತ್ತದೆ. ನಟಿಯರ ಉಡುಗೆ ಬಗ್ಗೆ ಗಂಟೆಗಟ್ಟಲೆ ಸುದ್ದಿವಾಹಿನಿಗಳಲ್ಲಿ ಸಹ ಚರ್ಚೆ ಮಾಡಲಾಗುತ್ತದೆ.

ನಟಿಯರು ಭಿನ್ನವಾಗಿ, ಸುಂದರವಾಗಿ ಕಾಣಲು ಧರಿಸುವ ಉಡುಗೆಗಳಿಗೆ ಭಾರಿ ದೊಡ್ಡ ಬೆಲೆಯನ್ನೇ ತೆರುತ್ತಾರೆ. ಕೆಲವು ಹಾಲಿವುಡ್ ನಟಿಯರಂತೂ ಒಂದು ಉಡುಗೆಗೆ ಕೋಟ್ಯಂತರ ರುಪಾಯಿ ಹಣ ನೀಡುತ್ತಾರೆ. ಹಾಲಿವುಡ್‌ನ ಕೆಲವು ನಟಿಯರಂತೂ ಬಹಳ ಕಡಿಮೆ ಉಡುಗೆ ತೊಡುತ್ತಾರೆ ಆದರೂ ಅದಕ್ಕೆ ಲಕ್ಷಾಂತರ ರುಪಾಯಿ ಹಣ ನೀಡಿರುತ್ತಾರೆ. ಹೀಗೆ ಅತಿ ಕಡಿಮೆ ಬಟ್ಟೆ ತೊಡಲು ಕೋಟ್ಯಂತರ ಹಣ ಖರ್ಚು ಮಾಡುವ ಟಾಪ್ ಐದು ಹಾಲಿವುಡ್ ಸೆಲೆಬ್ರಿಟಿಗಳಿವರು.

ಗಾಯಕಿ ಚೀರ್ ಐದನೇ ಸ್ಥಾನದಲ್ಲಿ

ಗಾಯಕಿ ಚೀರ್ ಐದನೇ ಸ್ಥಾನದಲ್ಲಿ

ಚೀರ್, ಅಮೆರಿಕದ ಜನಪ್ರಿಯ ಹಾಡುಗಾರ್ತಿ, ಟಿವಿ ಸೆಲೆಬ್ರಿಟಿ, ನಟಿ ಹಾಗೂ ಮಾಡೆಲ್ ಸಹ. ಹಾಲಿವುಡ್ ಸಂಗೀತ ಲೋಕದ ದಿಗ್ಗಜೆ ಈಕೆ. ಈಕೆ ಲೈವ್ ಶೋಗಳಿಗೆ ಧರಿಸುವ ಕಿರು ಡ್ರೆಸ್‌ಗಳಿಗೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತಾಳೆ. ಚಿನ್ನದ ಅಲಂಕಾರವಿರುವ ಬಿಕಿನಿ ಮಾದರಿಯ ಆದರೆ ಬಿಕಿನಿ ಅಲ್ಲದ ಉಡುಗೆಗಳನ್ನು ಈಕೆ ಧರಿಸುತ್ತಾರೆ. ತಮ್ಮದೇ ಹೆಸರಿನ ಸೌಂದರ್ಯವರ್ಧಕ ಉತ್ಪನ್ನಗಳ ಬ್ರ್ಯಾಂಡ್ ಅನ್ನು ಸಹ ಚೀರ್ ಹೊಂದಿದ್ದಾರೆ. ಕಡಿಮೆ ಬಟ್ಟೆ ತೊಡಲು ಅತಿ ಹೆಚ್ಚು ಹಣ ವ್ಯಯಿಸುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಚೀರ್ ಐದನೇ ಸ್ಥಾನದಲ್ಲಿದ್ದಾರೆ.

ಸೆಕ್ಸಿ ಗಾಯಕಿ ಬಿಯಾನ್ಸೆ

ಸೆಕ್ಸಿ ಗಾಯಕಿ ಬಿಯಾನ್ಸೆ

ಗಾಯಕಿ, ಗೀತ ರಚನಕಾರ್ತಿ ಹಾಗೂ ನಟಿ ಆಗಿರುವ ಬಿಯಾನ್ಸೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 41 ವರ್ಷ ವಯಸ್ಸಿನ ಬಿಯಾನ್ಸೆ ಹಾಲಿವುಡ್ ಪಾಪ್ ಜಗತ್ತಿನ ಗ್ಲಾಮರಸ್ ಗಾಯಕಿ. ತಮ್ಮ ಉಡುಗೆಗಳಿಗಾಗಿ ಭಾರಿ ದುಬಾರಿ ಮೊತ್ತ ಖರ್ಚು ಮಾಡುತ್ತಾರೆ ಬಿಯಾನ್ಸೆ. ಅವರ ಇನ್‌ಸ್ಟಾಗ್ರಾಂ ಮೇಲೆ ಕಣ್ಣಾಡಿಸಿದರೆ ಸಾಕು ಅವರು ತಮ್ಮ ಉಡುಗೆಗಳನ್ನು ಹೇಗೆ ಅದ್ಧೂರಿಯಾಗಿ ವಿನ್ಯಾಸ ಮಾಡಿಸಿರುತ್ತಾರೆ ಎಂಬುದು ತಿಳಿಯುತ್ತದೆ. ರುಪಾಯಿ ಲೆಕ್ಕದಲ್ಲಿ ಸುಮಾರು 700 ಕೋಟಿ ನೆಟ್‌ವರ್ತ್‌ ಹೊಂದಿರುವ ಬಿಯಾನ್ಸೆಗೆ ಬಟ್ಟೆಗಳಿಗೆ ಕೋಟಿಗಟ್ಟಲೆ ಖರ್ಚು ಮಾಡುವುದು ದೊಡ್ಡ ಸಮಸ್ಯೆಯೇನಲ್ಲ.

ಬಿಗ್‌ಬಾಸ್‌ನಲ್ಲಿದ್ದ ಪಮೇಲಾ ಆಂಡರ್ಸನ್

ಬಿಗ್‌ಬಾಸ್‌ನಲ್ಲಿದ್ದ ಪಮೇಲಾ ಆಂಡರ್ಸನ್

ಕಡಿಮೆ ಬಟ್ಟೆ ತೊಡಲು ಅತಿ ಹೆಚ್ಚು ಹಣ ವ್ಯಯಿಸುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ನಟಿ, ಹಿಂದಿ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಪಮೇಲಾ ಆಂಡರ್ಸನ್‌. ಕೆನಡಾ ಮೂಲದ ಈ ನಟಿ ಹಾಗೂ ಮಾಡೆಲ್ ಅತಿ ಕಡಿಮೆ ಬಟ್ಟೆ ತೊಡಲು ಅತಿ ಹೆಚ್ಚು ಹಣ ಖರ್ಚು ಮಾಡುತ್ತಾರಂತೆ. ಭಾರಿ ದುಬಾರಿ ನೆಟ್‌ವರ್ತ್ ಹೊಂದಿರುವ ಪಮೇಲಾ ಆಂಡರ್ಸನ್ ಬಹುಪಾಲು ಬಿಕಿನಿ ಅಥವಾ ಇನ್ನಿತರೆ ಕಿರು ಗ್ಲಾಮರಸ್ ಉಡುಗೆಗಳಲ್ಲಿಯೇ ಕಾಣಿಸಿಕೊಳ್ಳುತ್ತಾರೆ.

ಜೆನ್ನಿಫರ್ ಲೋಪೇಜ್‌ಗೆ ಎರಡನೇ ಸ್ಥಾನ

ಜೆನ್ನಿಫರ್ ಲೋಪೇಜ್‌ಗೆ ಎರಡನೇ ಸ್ಥಾನ

ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ಜೆನ್ನಿಫರ್ ಲೋಪೆಜ್. ಅಮೆರಿಕದ ಜನಪ್ರಿಯ ಗಾಯಕಿ, ನಟಿ ಹಾಗೂ ಡ್ಯಾನ್ಸರ್ ಆಗಿರುವ ಜೆನ್ನಿಫರ್ ಲೋಪೆಜ್ ಗ್ಲಾಮರಸ್ ಆಗಿ ತಮ್ಮ ಶೋಗಳಲ್ಲಿ, ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಲಿವುಡ್‌ನ ಶ್ರೀಮಂತ ನಟಿಯರಲ್ಲಿ ಒಬ್ಬರಾಗಿರುವ ಜೆನ್ನಿಫರ್ ಲೋಪೆಜ್ ತಮ್ಮ ಬಟ್ಟೆಗಳಿಗಾಗಿ ಭಾರಿ ಮೊತ್ತದ ಹಣ ಖರ್ಚು ಮಾಡುತ್ತಾರೆ.

ಮೊದಲ ಸ್ಥಾನದಲ್ಲಿ ಸೆಕ್ಸಿ ಕ್ವೀನ್ ಕಿಮ್ ಕರ್ದಾಶಿಯನ್

ಮೊದಲ ಸ್ಥಾನದಲ್ಲಿ ಸೆಕ್ಸಿ ಕ್ವೀನ್ ಕಿಮ್ ಕರ್ದಾಶಿಯನ್

ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಮಾಡೆಲ್ ಕಿಮ್ ಕರ್ದಾಶಿಯನ್. ಈಕೆ ಹಾಲಿವುಡ್‌ನ ಅತ್ಯಂತ ಜನಪ್ರಿಯ ಮಾಡೆಲ್, ಟಿವಿ ಸೆಲೆಬ್ರಿಟಿ ಹಾಗೂ ಉದ್ಯಮಿ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದರಲ್ಲಿ ಕಿಮ್ ಅನ್ನು ಬಿಟ್ಟರೆ ಇನ್ನೊಬ್ಬರಿಲ್ಲ ಎನ್ನಬಹುದು. ಅದರಲ್ಲಿಯೂ ವಿವಿಧ ರೀತಿಯ ಬಿಕಿನಿಗಳನ್ನು ಕಿಮ್ ಕರ್ದಾಶಿಯನ್ ಧರಿಸುತ್ತಿರುತ್ತಾರೆ. ಅವರ ಒಂದೊಂದು ಇನ್‌ಸ್ಟಾಗ್ರಾಂ ಚಿತ್ರಗಳು ಕೋಟ್ಯಂತರ ಲೈಕ್ಸ್‌ಗಳನ್ನು ಪಡೆಯುತ್ತವೆ. ಸುಮಾರು 9000 ಸಾವಿರ ಕೋಟಿ ರುಪಾಯಿ ನೆಟ್‌ವರ್ತ್ ಹೊಂದಿರುವ ಕಿಮ್ ಕರ್ದಾಶಿಯನ್. ಅತಿ ಕಡಿಮೆ ಬಟ್ಟೆ ಧರಿಸಲು ಅತಿ ಹೆಚ್ಚು ಹಣ ಖರ್ಚು ಮಾಡುತ್ತಾರೆ.

More from Filmibeat

English summary
Here is the list of celebrities who spend most money to wear little dress. Kim Kardasian is on the top of the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X