1000, 1200, 1450 ರೂಪಾಯಿಗಳಿಗೆ 'ಅವತಾರ್ 2' ಟಿಕೆಟ್ ಸೇಲ್; ಭಾರತದ ಯಾವ ನಗರದಲ್ಲಿ ದುಬಾರಿ?

Here is the list of highest ticket price for Avatar 2 in major cities of India

ಹದಿಮೂರು ವರ್ಷಗಳ ಹಿಂದೆ ಅವತಾರ್ ಎಂಬ ಮ್ಯಾಗ್ನಮ್ ಒಪಸ್ ಒಂದು ಇಡೀ ವಿಶ್ವ ಚಿತ್ರರಂಗವನ್ನೇ ತನ್ನ ಕಥೆ, ಮೇಕಿಂಗ್ ಹಾಗೂ ಕಲೆಕ್ಷನ್ ಮೂಲಕ ಅಲುಗಾಡಿಸಿತ್ತು. ಅವತಾರ್ ಅಂದಿನ ಟಿಕೆಟ್ ದರದಲ್ಲಿ ಗಳಿಸಿದ್ದ ಮೊತ್ತವನ್ನು ಬರೋಬ್ಬರಿ ಹನ್ನೊಂದು ವರ್ಷಗಳ ನಂತರ ಮುರಿಯಲು ಸಾಧ್ಯವಾಯಿತು. ಈ ಮಟ್ಟಿಗಿನ ದಾಖಲೆ ಬರೆಯುವಂತಹ ಕತೆಯನ್ನು ಹದಿಮೂರು ವರ್ಷಗಳ ಹಿಂದೆ ಹೇಳಿದ್ದ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಇದೀಗ ಅವತಾರ್‌ನ ಮುಂದುವರಿದ ಭಾಗ 'ಅವತಾರ್ 2' ಅಥವಾ 'ಅವತಾರ್: ದಿ ವೇ ಆಫ್ ವಾಟರ್' ಅನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದ್ದಾರೆ.

ಹೌದು, ಅವತಾರ್: ದಿ ವೇ ಆಫ್ ವಾಟರ್ ಚಿತ್ರ ಇದೇ ಡಿಸೆಂಬರ್ 16ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು ಬಿಡುಗಡೆಗೆ ಇನ್ನೂ ಇಪ್ಪತ್ತಕ್ಕೂ ಹೆಚ್ಚಿನ ದಿನಗಳು ಇರುವಾಗಲೇ ಚಿತ್ರದ ಮುಂಗಡ ಬುಕಿಂಗ್ ವಿಶ್ವದ ಹಲವು ದೇಶಗಳಲ್ಲಿ ಆರಂಭವಾಗಿದೆ. ಚಿತ್ರ ಪ್ರೇಮಿಗಳೇ ತುಂಬಿರುವ ಭಾರತದಲ್ಲಿಯೂ ಮುಂಗಡ ಬುಕಿಂಗ್ ಅನ್ನು ವಿವಿಧ ನಗರಗಳಲ್ಲಿ ತೆರೆಯಲಾಗಿದೆ.

ಬೆಂಗಳೂರು, ಚೆನ್ನೈ, ದೆಹಲಿ, ಇಂದೋರ್, ಮುಂಬೈ, ಕೋಲ್ಕತ್ತಾ ಹಾಗೂ ಮುಂತಾದ ನಗರಗಳಲ್ಲಿ ಚಿತ್ರದ ಅಡ್ವಾನ್ಸ್ ಬುಕಿಂಗ್ ಆರಂಭಗೊಂಡಿದ್ದು ಈಗಾಗಲೇ ಹಲವೆಡೆ ಡಿಸೆಂಬರ್ 16ರ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಇನ್ನು ಈ ಬಾರಿ 3ಡಿ, ಐಮ್ಯಾಕ್ಸ್ 3ಡಿ, 4 ಡಿಎಕ್ಸ್ 3ಡಿಯಲ್ಲಿ ಪ್ಯಾಂಡೊರ ಜಗತ್ತನ್ನು ಕಣ್ತುಂಬಿಕೊಳ್ಳಬಹುದಾಗಿದ್ದು ಟಿಕೆಟ್ ದರ ಸಹಜವಾಗಿಯೇ ದುಬಾರಿಯಾಗಿವೆ. ಸದ್ಯ ದೇಶದ ಹಲವು ನಗರಗಳ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ಮುಂಗಡ ಬುಕಿಂಗ್ ಆರಂಭವಾಗಿದ್ದು, ಯಾವ ನಗರದಲ್ಲಿ ಅವತಾರ್: ದ ವೇ ಆಫ್ ವಾಟರ್ ಚಿತ್ರದ ಟಿಕೆಟ್ ದರ ಗರಿಷ್ಟ ಎಷ್ಟು ಮೊತ್ತವಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಬೆಂಗಳೂರು 1450 ರೂ. - ಐಮ್ಯಾಕ್ಸ್ 3ಡಿ

ಪುಣೆ 1200 - 4 ಡಿಎಕ್ಸ್ 3ಡಿ

ದೆಹಲಿ - 1000 - ಐಮ್ಯಾಕ್ಸ್ 3ಡಿ

ಮುಂಬೈ - 970 - 4 ಡಿಎಕ್ಸ್ 3ಡಿ

ಕೋಲ್ಕತ್ತಾ - 770 - ಐಮ್ಯಾಕ್ಸ್ 3ಡಿ

ಅಹ್ಮದಾಬಾದ್ - 750 - 4 ಡಿಎಕ್ಸ್ 3ಡಿ

ಇಂದೋರ್ - 700 - 4 ಡಿಎಕ್ಸ್ 3ಡಿ

ಚಂಡೀಗಡ್ - 450 - 4 ಡಿಎಕ್ಸ್ 3ಡಿ

ಹೈದರಾಬಾದ್ - 350 - 4 ಡಿಎಕ್ಸ್ 3ಡಿ

ವಿಶಾಖಪಟ್ಟಣ - 210ರಿಂದ ಪ್ರಾರಂಭ - 3ಡಿ

More from Filmibeat

English summary
Here is the list of highest ticket price for Avatar 2 in major cities of India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X