For Quick Alerts
  ALLOW NOTIFICATIONS  
  For Daily Alerts

  'xXx' ಚಿತ್ರಕ್ಕಾಗಿ ರಿಯಲ್ ಗನ್ ಶೂಟ್ ಕಲಿತ ದೀಪಿಕಾ ಪಡುಕೋಣೆ

  By ಸೋನು ಗೌಡ
  |

  ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರ 'XXX ದಿ ರಿಟರ್ನ್ ಆಫ್ ಝೆಂಡರ್ ಕೇಗ್' ಎಂಬ ಹಾಲಿವುಡ್ ಚಿತ್ರದ ಶೂಟಿಂಗ್ ಭರಭರನೇ ಸಾಗುತ್ತಿದ್ದು, ಮುಂದಿನ ವಾರದಲ್ಲಿ ತಮ್ಮ ಭಾಗದ ಶೂಟಿಂಗ್ ಕಂಪ್ಲೀಟ್ ಮಾಡಲಿದ್ದಾರಂತೆ.

  ಸದ್ಯಕ್ಕೆ ಚಿತ್ರದ ಶೂಟಿಂಗ್ ಗಾಗಿ ಉತ್ತರ ಅಮೇರಿಕದಲ್ಲಿರುವ ದೀಪಿಕಾ ಪಡುಕೋಣೆ ಅವರು ತಮ್ಮ ಪಾತ್ರದ ಶೂಟಿಂಗ್ ಮುಂದಿನ ಶನಿವಾರದೊಳಗೆ ಮುಗಿಯಲಿದೆ ಎಂದು ಟ್ವಿಟ್ಟರ್ ಮೂಲಕ ಹೇಳಿಕೊಂಡಿದ್ದಾರೆ.[ವಿನ್ ಡೀಸೆಲ್ ಜೊತೆ ಹಸಿಬಿಸಿ ಲುಕ್ ನಲ್ಲಿ ದೀಪಿಕಾ ಪಡುಕೋಣೆ]

  ಇನ್ನು ಮೊಟ್ಟ ಮೊದಲ ಬಾರಿಗೆ ನಟಿ ದೀಪಿಕಾ ಪಡುಕೋಣೆ ಅವರು ವಿನ್ ಡೀಸೆಲ್ ಅವರ ಜೊತೆ 'XXX ದಿ ರಿಟರ್ನ್ ಆಫ್ ಝೆಂಡರ್ ಕೇಗ್' ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

  ನಿರ್ದೇಶಕ ಡಿ.ಜೆ ಕಾರಸೋ ಆಕ್ಷನ್-ಕಟ್ ಹೇಳಿರುವ ಈ ಚಿತ್ರಕ್ಕಾಗಿ 'ಮಸ್ತಾನಿ' ಬೆಡಗಿ ಡಿಪ್ಪಿ ಅವರು ರಿಯಲ್ ಗನ್ ಹಿಡಿದಿದ್ದು, ಗನ್ ಶೂಟ್ ಅಭ್ಯಾಸ ಕೂಡ ಮಾಡಿದ್ದಾರೆ. ಅದಕ್ಕಾಗಿ ಮಿಲಿಟರಿ ಸಿಬ್ಬಂದಿಯಿಂದ ಗನ್ ಶೂಟಿಂಗ್ ತರಬೇತಿ ಪಡೆದಿದ್ದಾರೆ.

  ಸುಮಾರು 4 ರಿಂದ 6 ವಾರ ಶೂಟಿಂಗ್ ತರಬೇತಿ ಪಡೆದಿದ್ದು, ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಸೆರೆನಾ ಎಂಬ ಪಾತ್ರವನ್ನು ಪೋಷಿಸುತ್ತಿದ್ದಾರೆ.[ದೀಪಿಕಾ ಪಡುಕೋಣೆ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳು]

  ಅಂದಹಾಗೆ ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅವರಿಗೆ 'ಮಿಸ್ಸಾದ' ಮಿಸ್ ಯುನಿವರ್ಸ್ ಕೊಲಂಬಿಯಾ ಗ್ಯುಟಿರ್ರೆಝಾ ಅವರು ಎದುರಾಗಲಿದ್ದಾರೆ. ಡಿಪ್ಪಿ ಅವರು ವಿನ್ ಡಿಸೇಲ್ ಅವರ ಎಕ್ಸ್ ಗರ್ಲ್ ಫ್ರೆಂಡ್ ಆಗಿ ಕಾಣಿಸಿಕೊಂಡರೆ, ಗ್ಯುಟಿರ್ರೆಝಾ ಅವರು ಎರಡನೇ ಗರ್ಲ್ ಫ್ರೆಂಡ್ ಆಗಿ ಮಿಂಚಲಿದ್ದಾರೆ.

  ಮಿಸ್ ಯುನಿವರ್ಸ್ ಕೊಲಂಬಿಯಾ ಗ್ಯುಟಿರ್ರೆಝಾ ಅವರಿಗೆ 'ಭುವನ ಸುಂದರಿ' ಪಟ್ಟ ಮಿಸ್ಸಾದ ಕಥೆ ಓದಲು ಈ ಲಿಂಕ್ ಕ್ಲಿಕ್ ಮಾಡಿ...[ಭುವನ ಸುಂದರಿ ಸ್ಪರ್ಧೆಯಲ್ಲಿ 'ಹಾರ್ವೆ' ಮಾಡಿದ ಎಡವಟ್ಟು!]

  English summary
  It's a wrap for Deepika Padukone's most expected hollywood debut 'xXx3: The Return of Xander Cage' – after a week. The D J Caruso multi-starrer action flick also stars Vin Diesesl, Ruby Rose among others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X