»   » 'ಬೇವಾಚ್' ಕಂಪ್ಲೀಟ್ ಆದ ಖುಷಿಯಲ್ಲಿ ಪ್ರಿಯಾಂಕ ಲಿಪ್ ಲಾಕ್ ಮಾಡಿದ್ರಾ?

'ಬೇವಾಚ್' ಕಂಪ್ಲೀಟ್ ಆದ ಖುಷಿಯಲ್ಲಿ ಪ್ರಿಯಾಂಕ ಲಿಪ್ ಲಾಕ್ ಮಾಡಿದ್ರಾ?

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಇದೇ ಮೊದಲ ಬಾರಿಗೆ 'ಬೇವಾಚ್' ಎಂಬ ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಚಿತ್ರದ ಶೂಟಿಂಗ್ ಸಂಪೂರ್ಣಗೊಂಡಿದ್ದು, ತಮ್ಮ ಭಾಗದ ಚಿತ್ರೀಕರಣ ಕಂಪ್ಲೀಟ್ ಆದ ಖುಷಿಯನ್ನು ನಟಿ ಪ್ರಿಯಾಂಕ ಚೋಪ್ರಾ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

'ಬೇವಾಚ್' ಚಿತ್ರೀಕರಣ ಸಂಪೂರ್ಣಗೊಂಡಿದೆ. ಚಿತ್ರೀಕರಣದ ಕೊನೆಯ ಫೋಟೋ ಇದು' ಎಂದು ಪಿಗ್ಗಿ ಯಾರನ್ನೋ ತಬ್ಬಿಕೊಂಡು ಮುತ್ತಿಕ್ಕುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನಟಿ ಪ್ರಿಯಾಂಕ ಚೋಪ್ರಾ ಅವರು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಈ ಚಿತ್ರ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ.[44ನೇ ವರ್ಷಕ್ಕೆ ಕಾಲಿಟ್ಟ ಡ್ವೈನ್: ಶುಭಾಶಯ ಕೋರಿದ ಪ್ರಿಯಾಂಕ]

Hindi Actress Priyanka Chopra wraps up 'Baywatch' shooting

'ಬೇವಾಚ್' ಚಿತ್ರದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ಬಹಳ ಸೆಕ್ಸಿಯಾಗಿ ವಿಲನ್ ಪಾತ್ರ ವಹಿಸಿದ್ದು, ಹಾಲಿವುಡ್ ನಟಿ ಪಮೇಲಾ ಮತ್ತು ಹಾಲಿವುಡ್ ನಟ ಡ್ವೈನ್ ದ ರಾಕ್ ಜಾನ್ಸನ್ ಅವರು ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ.['ಬೇವಾಚ್' ನಲ್ಲಿ ಪಿಗ್ಗಿ ಜೊತೆ ಪಮೇಲಾ ಕಮಾಲ್]

'ಕ್ವಾಂಟಿಕೋ' ಮೂಲಕ ಹಾಲಿವುಡ್ ಗೆ ಹಾರಿದ ನಟಿ ಪ್ರಿಯಾಂಕ ಚೋಪ್ರಾ ಅವರು ಇದೀಗ ತಮ್ಮ ಮೊದಲ ಹಾಲಿವುಡ್ ಚಿತ್ರ 'ಬೇವಾಚ್' ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟು ಬಂದ ಖುಷಿಯಲ್ಲಿ ತೇಲಾಡುತ್ತಿದ್ದಾರೆ.[ಭೋಜನ ಸವಿದ ನಂತರ ಒಬಾಮಾ ಬಗ್ಗೆ ಪ್ರಿಯಾಂಕ ಮಾಡಿದ ಕಾಮೆಂಟ್ ಏನು?]

Hindi Actress Priyanka Chopra wraps up 'Baywatch' shooting

1990ರ ಜನಪ್ರಿಯ ಟಿವಿ ಧಾರಾವಾಹಿ 'ಬೇವಾಚ್' ಆಧಾರಿತ ಸಿನಿಮಾ ಇದಾಗಿದ್ದು, ಅದೇ ಹೆಸರನ್ನು ಚಿತ್ರಕ್ಕೆ ಇಡಲಾಗಿದ್ದು, ನಿರ್ದೇಶಕ ಸೇಥ್ ಗಾರ್ಡನ್ ಆಕ್ಷನ್-ಕಟ್ ಹೇಳಿದ್ದಾರೆ.

English summary
Bollywood actress Priyanka Chopra, who spent many sleepless nights to shoot 'Baywatch', has finally completed filming the action comedy. Actress Priyanka Chopra took to Instagram to share her feelings from the last day of the shoot. The movie is directed by Seth Gordon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada